ನಾಗಾವಿಯಲ್ಲಿತ್ತು ಕಲಬುರಗಿ ಪ್ರದೇಶದ ಪ್ರಾಚೀನ ಗ್ರಂಥಾಲಯ

Date: 05-02-2020

Location: ಕಲಬುರಗಿ


ನಾಗಾವಿ ಶಾಸನದಲ್ಲಿ ಕಲಬುರಗಿ ಪ್ರದೇಶದಲ್ಲಿ ಅತ್ಯಂತ ಹಳೆಯ ಗ್ರಂಥ ಭಂಡಾರದ ಉಲ್ಲೇಖ ಆಗಿರುವುದನ್ನು ಇತಿಹಾಸದಲ್ಲಿ ಆಸಕ್ತರಾಗಿರುವ ಹಿರಿಯ ಗ್ರಂಥಪಾಲಕ ಪಾಟೀಲ ಬಸನಗೌಡ ಹುಣಸಗಿ ಅವರು ಈ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ.

 

  ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಗಾವಿಯಲ್ಲಿ ಒಂದು ಶಿಲಾಶಾಸನವಿದೆ. ಈ ಶಾಸನ ಕ್ರಿ.ಶ. ೧೦೫೮ರ ಕಲ್ಯಾಣ ಚಾಲುಕ್ಯ ಚಕ್ರವರ್ತಿ ೧ನೇ ಸೋಮೇಶ್ವರನ  ಕಾಲದ ಈ ಶಾಸನದಲ್ಲಿ ನಾಗಾಯಿಯಲ್ಲಿ ಒಂದು ಘಟಿಕಾಶಾಲೆಯನ್ನು ಸ್ಥಾಪಿಸಿದ ಉಲ್ಲೇಖವಿದೆ. ಅಲ್ಲಿಯ ವಿದ್ಯಾರ್ಥಿಗಳಿಗೆ, ಉಪಾಧ್ಯಾಯರುಗಳಿಗೆ ಹಾಗೆಯೇ ಆ ಶಾಲೆಯ ಸರಸ್ವತಿ ಭಂಡಾರಿಗರಿಗೆ ಭೂಮಿಯನ್ನು ದಾನವಾಗಿ ನೀಡಿದುದನ್ನು ತಿಳಿಸುತ್ತದೆ. ಸರಸ್ವತಿ ಭಂಡಾರಿಗ ಅಂದರೆ ಗ್ರಂಥಪಾಲಕ ಎಂದರ್ಥ. ಆಮೇಲೆ ಈ ಶಾಸನದಲ್ಲಿ ಇನ್ನೂ ಒಂದು ವಿಶೇಷವಿದೆ. ಘಟಿಕಾಪ್ರಹಾರಿ ಎಂಬ ಉಲ್ಲೇಖವಿದೆ. ಘಟಿಕಾ ಪ್ರಹಾರಿ ಎಂದರೆ ಶಾಲೆಗಳಲ್ಲಿ ಗಂಟೆ ಬಾರಿಸುವವನು ಎಂದರ್ಥ. ಒಬ್ಬ ಸಾಮಾನ್ಯ ಗಂಟೆ ಬಾರಿಸುವವನಿಗೂ ಕೂಡ ದಾನವನ್ನು ನೀಡಿದ್ದನ್ನು ಉಲ್ಲೇಖಿಸುವ ಶಾಸನಗಳಿವೆ. ನಾಗಾವಿಯ ಘಟಿಕಾ ಶಾಲೆಯಲ್ಲಿ ಒಟ್ಟು ೬ ಜನ ಗ್ರಂಥ ಭಂಡಾರಿಗರಿದ್ದರು ಎಂದು ತಿಳಿಸುತ್ತದೆ.
ಅಂದರೆ ಆ ಗ್ರಂಥಾಲಯ ಎಷ್ಟು ದೊಡ್ಡ ಪ್ರಮಾಣದಲ್ಲಿ ಇತ್ತು ಎಂದು ಊಹಿಸಿಕೊಳ್ಳಿ. ಅದು ಒಂದು ವಿಶ್ವವಿದ್ಯಾಲಯ ಮಟ್ಟದ ಗ್ರಂಥಾಲಯ ಆಗಿತ್ತೆಂಬುದರಲ್ಲಿ ಸಂಶಯವಿಲ್ಲ.  ಗ್ರಂಥಾಲಯದ ಇತಿಹಾಸದ ಬಗ್ಗೆ ಹೇಳಬೇಕೆಂದರೆ ಸುಮಾರು ೨೦೦೦ ವರ್ಷಗಳಿಂದಲೂ ಗ್ರಂಥಾಲಯಗಳಿದ್ದವು ಎಂಬುದಕ್ಕೆ ನಮಗೆ ಅನೇಕ ನಿದರ್ಶನಗಳು ಸಿಗುತ್ತವೆ. ರಾಜ ಮಹಾರಾಜರ ಆಶ್ರಯದಲ್ಲಿ ಅನೇಕ ಅಗ್ರಹಾರಗಳು, ವಿಶ್ವವಿದ್ಯಾಲಯಗಳು, ಘಟಿಕಾಸ್ಥಾನಗಳಲ್ಲಿ ಗ್ರಂಥಾಲಯಗಳಿದ್ದವು ಎಂದು ನಮಗೆ ತಿಳಿಯುತ್ತದೆ. ಹಾಗೆಯೇ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಜೈನಬಸದಿಗಳಲ್ಲಿ, ಮದರಸಾಗಳಲ್ಲಿ ಗ್ರಂಥಾಲಯಗಳಿದ್ದವು.
           ರಾಜ ಮಹಾರಾಜರ ಕಾಲದ ಗ್ರಂಥಾಲಯಗಳಲ್ಲಿ ಎಲ್ಲರಿಗೂ ಓದಲಿಕ್ಕೆ ಅವಕಾಶವಿರಲಿಲ್ಲ. ಆಸ್ಥಾನ ವಿದ್ವಾಂಸರು, ಕವಿಗಳು, ರಾಜನ ಆಪ್ತೇಷ್ಠರು ಮಾತ್ರ ಗ್ರಂಥಗಳನ್ನು ಬಳಸಲಿಕ್ಕೆ ಅವಕಾಶವಿತ್ತು. ಆಗ ಗ್ರಂಥಗಳನ್ನು ಪೆಟ್ಟಿಗೆಗಳಲ್ಲಿ ಇಡುತ್ತಿದ್ದರು. ಯಾರ ಕೈಗೂ ಸಿಗಬಾರದು, ಹಾಳಾಗಬಾರದೆಂದು ಅದಕ್ಕೊಂದು ಬೀಗದ ಕೀ ಹಾಕುತ್ತಿದ್ದರು.
    ಕಾಲ ಬದಲಾದಂತೆ ಗುರುಕುಲಗಳಲ್ಲಿ, ವಿದ್ಯಾಕೇಂದ್ರಗಳಲ್ಲಿ, ಅಗ್ರಹಾರಗಳಲ್ಲಿ, ಘಟಿಕಾಸ್ಥಾನಗಳಲ್ಲಿ ಗ್ರಂಥಗಳ ಬಳಕೆ ಶುರು ಆಯ್ತು. ಗ್ರಂಥಗಳ ಬಳಕೆ ಹೆಚ್ಚೆಚ್ಚು ಶುರುವಾದಂತೆ ಗ್ರಂಥಾಲಯಗಳು ಬೆಳೆದು ಬಂದವು. ಗ್ರಂಥಾಲಯಗಳು ಪ್ರಾರಂಭವಾದ ಮೇಲೆ ಅದಕ್ಕೊಬ್ಬ ಗ್ರಂಥಪಾಲಕ ಬರುತ್ತಾನೆ., ಆಗಿನ ಕಾಲದ ಗ್ರಂಥಾಲಯಗಳಿಗೆ :ಗ್ರಂಥ ಭಂಡಾರ ಎಂದು ಕರೆಯುತ್ತಿದ್ದರು. ಅದನ್ನು ನೋಡಿಕೊಳ್ಳುವ ಗ್ರಂಥಪಾಲಕನಿಗೆ ಗ್ರಂಥ ಭಂಡಾರಿಗಎಂದು ಕರೆಯುತ್ತಿದ್ದರು.
    ಇನ್ನು ಘಟಿಕಾಸ್ಥಾನದ ಎಂದರೆ ವಿಶ್ವವಿದ್ಯಾಲಯ ಮಟ್ಟದ ಒಂದು ಜ್ಞಾನಾರ್ಜನೆ ಕೇಂದ್ರಕ್ಕೆ ಘಟಿಕಾಸ್ಥಾನ ಎನ್ನುವರು. ಈ ವಿಶ್ವವಿದ್ಯಾಲಯಗಳಲ್ಲಿ ಪ್ರತಿ ವರ್ಷ ಘಟಿಕೋತ್ಸವ ಮಾಡುತ್ತಾರೆ. ಹಿಂದೆ ಇದ್ದಂತಹ ಘಟಿಕಾಸ್ಥನದ ಹೆಸರನ್ನೇ ಮುಂದುವರೆಸಿ ಘಟಿಕೋತ್ಸವ ಎಂದು ಕರೆಯುತ್ತಿದ್ದಾರೆ. ಭಾರತದ ಅನೇಕ ಸಾಮ್ರಾಜ್ಯಗಳು ತಮ್ಮ ತಮ್ಮ ಅವಧಿಯಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದರು ಎಂಬುದಕ್ಕೆ ನಮಗೆ ಶಿಲಾಶಾಸನಗಳಿಂದ ತಿಳಿದುಬರುತ್ತದೆ.

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...