ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’


'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸುತ್ತಾರೆಂಬುದಕ್ಕೆ ದೇಮರ ಪ್ರತಿಯೊಂದು ನಡೆ, ನುಡಿ, ಅಭಿವ್ಯಕ್ತಿ ಮಾದರಿ' ಅವರ ಸಂದರ್ಶನಗಳ ಸಂಕಲನ ದೇವನೂರ ಮಹಾದೇವ ಜೊತೆ ಮಾತುಕತೆ ಕೃತಿಗೆ ಬನವಾಸಿ ಬಳಗ ಬರೆದ ಆಪ್ತ ಮಾತು ನಿಮ್ಮ ಓದಿಗಾಗಿ. 

ಇಷ್ಟಕ್ಕೂ ದಶಕಗಳ ಹಿಂದಿನಿಂದ ಇಂದಿನವರೆಗೆ ಯಾರಾರೋ ನಡೆಸಿದ್ದ, ಎಲ್ಲೆಲ್ಲಿಯೋ ಚದುರಿ ಹೋಗಿದ್ದ ದೇವನೂರ ಮಹಾದೇವ ಅವರ ಸಂದರ್ಶನಗಳನ್ನೆಲ್ಲಾ ಕಷ್ಟಪಟ್ಟು ಕಲೆ ಹಾಕಿ, ಆಯ್ದು, ಈಗ ಸಂಗ್ರಹ ರೂಪದಲ್ಲಿ ತರಬೇಕಾದ ಅನಿವಾರ್ಯತೆಯಾದರೂ ನಮಗೆ ಏನಿತ್ತು?

ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸುತ್ತಾರೆಂಬುದಕ್ಕೆ ದೇಮರ ಪ್ರತಿಯೊಂದು ನಡೆ, ನುಡಿ, ಅಭಿವ್ಯಕ್ತಿ ಮಾದರಿ. ವ್ಯತಿರಿಕ್ತ ಸಂದರ್ಭದಲ್ಲಿಯೂ ಪ್ರವಾಹದ ವಿರುದ್ಧ ಈಜಲು ಹಿಂಜರಿಯದ ಅವರ ದೃಢತೆ ಮತ್ತು ಪ್ರಾಮಾಣಿಕತೆ, ಸಮುದಾಯದ ಒಳಿತಿಗಾಗಿ ಕಠಿಣ ನಿಲುವು ತೆಗೆದುಕೊಳ್ಳುವ ನಿಷ್ಠುರತೆ, ಸಿದ್ದ ಮಾದರಿಗಳನ್ನು ಒಡೆದು ಹೊಸದನ್ನು ಕಟ್ಟಬಲ್ಲ ಆಳವಾದ ತಿಳಿವಿನ ಸಾಂಸ್ಕೃತಿಕ ಮತ್ತು ರಾಜಕೀಯ ಸ್ಪಷ್ಟತೆ, ತರತಮವಿಲ್ಲದ ಸಾಮಾಜಿಕ ನ್ಯಾಯದ ಪ್ರಜ್ಞೆ, ವ್ಯವಸ್ಥೆಯೆಡೆಗೆ ಸಾತ್ವಿಕ ಸಿಟ್ಟು ಮತ್ತು ದಿಟ್ಟ ನೈತಿಕ ಪ್ರತಿರೋಧ, ಸಕಲ ಜೀವಗಳೆಡೆಗಿನ ಕಾರುಣ್ಯಭರಿತ ದಾರ್ಶನಿಕ ನೋಟ, ಕ್ಷಮಿಸುವ ಮನಸಿನ ಉದಾರತೆ ಹಾಗೂ ತನ್ನೊಳಗನ್ನು ಕೃತಿಮತೆಯಿಲ್ಲದೇ ಅವಲೋಕಿಸಿಕೊಳ್ಳುವ, ತಿದ್ದಿಕೊಳ್ಳುವ, ಕಾಲದ ತುರ್ತಿಗೆ ನವೀಕರಿಸಿಕೊಳ್ಳುವ ಕಡು ಎಚ್ಚರ- ಇವೆಲ್ಲವೂ ಸೇರಿ ಅವರನ್ನೊಬ್ಬ ಸ್ಥಾಪಿತ ಹಿತಾಸಕ್ತಿಯ ಶಾಶ್ವತ ವಿರೋಧಿಯನ್ನಾಗಿಸಿದೆ, ಮಾನವೀಯ ಸಂಸ್ಕೃತಿಯ ವಕ್ತಾರರನ್ನಾಗಿಸಿದೆ. ಸದಾ ಜನಹಿತ ಚಿಂತನೆಯ ಪ್ರತಿಪಾದಕನನ್ನಾಗಿಸಿದೆ.

ಹೀಗೆಂದೇ ದೇಮರ ಈ ಸಂದರ್ಶನಗಳ ಗುಚ್ಛ - ನಮ್ಮೊಳಗನ್ನು ಎಚ್ಚರಿಸುವ, ಸವಾಲುಗಳಿಗೆ ಬದ್ಧರಾಗಿಸುವ, ಸಮಾಜದ ಸಮಸ್ಯೆಗಳನ್ನೆದುರಿಸಲು ನೈತಿಕವಾಗಿ ಸಿದ್ದಗೊಳಿಸುವ... ತಿಳಿಬೆಳಕಿನ ನಂದಾದೀಪವಾಗಿದೆಯೆಂಬುದು ನಮ್ಮ ನಂಬುಗೆ.

- ಬನವಾಸಿಗರು

 

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...