ನಟ ಎಂ. ಎಸ್‌. ಉಮೇಶ್‌ ಅವರಿಗೆ ಡಾ. ರಾಜಕುಮಾರ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ

Date: 21-04-2024

Location: ಬೆಂಗಳೂರು


ಬೆಂಗಳೂರು: ನನ್ನ ಕಲಾರಂಗದ ಬೆಳವಣಿಗೆಗೆ ಇದೇ ವೇದಿಕೆ ಕಾರಣ. ಈ ವೇದಿಕೆ ನನ್ನನ್ನ ಸಾಕಿದೆ, ಬೆಳೆಸಿದೆ, ನನಗೆ ತಿಳುವಳಿಕೆ ಹೇಳಿದೆ, ಅರಿವನ್ನು ಮೂಡಿಸಿದೆ. ಆಗ ವರ್ಷಕ್ಕೆ 12 ರೂಪಾಯಿ ಕೊಟ್ಟರೆ ವರ್ಷವೆಲ್ಲಾ ನಾಟಕ ಮಾಡಕ್ಕೆ ಅವಕಾಶ ಮಾಡಿಕೊಡ್ತಿದ್ರು. ನಾನು ಸ್ನೇಹಿತರ ಬಳಿ ಹಣ ತೆಗೆದುಕೊಂಡು ಎರಡು ತಿಂಗಳಲ್ಲಿ 12 ರೂ. ಒಟ್ಟು ಮಾಡಿ ಇಲ್ಲಿನ ಸದಸ್ಯತ್ವ ತಗೊಂದಿದ್ದೆ ಎಂದು ರಮೇಶ್‌ ಭಟ್‌ ನೆನಪುಗಳನ್ನು ಹಂಚಿಕೊಂಡರು.

ಚಾಮರಾಜಪೇಟೆಯ ಶ್ರೀಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ದಿನಾಂಕ 2024 ಏಪ್ರಿಲ್ 20ರಂದು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ನಡೆದ ಡಾ. ರಾಜಕುಮಾರ ಸಂಸ್ಕೃತಿ ದತ್ತಿ, ಪ್ರೊ. ಸಿ. ಹೆಚ್‌. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸದಸ್ಯತ್ವ ಪಡೆದ ನಂತರ ಇದೇ ವೇದಿಕೆಯಲ್ಲಿ ಕುಸುಮ ಕಲಾವಿದರು ಎಂಬ ಸಂಸ್ಥೆಯ ಜೊತೆಯಲ್ಲಿ ನಾಟಕ ಮಾಡಿದ್ದೆ. ಎ. ಎಸ್‌. ಮೂರ್ತಿ ಅವರದ್ದು ಅಭಿನಯ ತರಂಗ ಎಂಬ ಸಂಸ್ಥೆಯ ಮೊದಲನೇ ಬ್ಯಾಚ್‌ನ ವಿದ್ಯಾರ್ಥಿ ಆಗಿದ್ದೆ. ಅವರಿಂದ ಒಂದು ಪ್ರಶಸ್ತಿ ಪತ್ರ ಎಂಬ ನಾಟವನ್ನ ಮಾಡ್ಸಿದ್ರು. ಆ ನಾಟಕದ ಪಾತ್ರ ನೋಡಿ ರವಿ ಎನ್ನುವ ನಿರ್ದೇಶಕರು ಅಳುಕು ಎಂಬ ಸಿನಿಮಾಕ್ಕೆ ಪಾತ್ರ ಮಾಡ್ಸಿದ್ರು. ಅಂದ್ರೆ ಈ ವೇದಿಕೆ ಎಷ್ಟು ದೊಡ್ಡ ಇತಿಹಾಸ ಇದೆ, ಇದಕ್ಕೊಂದು ದೊಡ್ಡ ಪರಂಪರೆ ಇದೆ. ಇದು ಅಣ್ಣವ್ರು ಹೇಳಿದಂತೆ ಸರಸ್ವತಿಯ ಜಾಗ ಎಂದು ಹೇಳಿದರು.

ವೇದಿಕೆಯಲ್ಲಿ ಹಿರಿಯ ಚಲನಚಿತ್ರ ಕಲಾವಿದ ಎಂ. ಎಸ್‌. ಉಮೇಶ್‌ ಅವರಿಗೆ ಡಾ. ರಾಜಕುಮಾರ ಸಂಸ್ಕೃತಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಬಿ. ನಂಜುಂಡಸ್ವಾಮಿ (ಕನ್ನಡ ಸೇವೆ), ಕೆ.ಸಿ. ಶಿವಪ್ಪ (ಸಾಹಿತ್ಯ ಕ್ಷೇತ್ರ), ಡಾ. ಕವಿತಾ ಮಿಶ್ರ (ಕೃಷಿ ಮತ್ತು ನೀರಾವರಿ ಕ್ಷೇತ್ರ), ಮಲ್ಲಿಕಾರ್ಜುನ ಕೆಂಕೆರೆ (ಸಂಗೀತ ಕ್ಷೇತ್ರ), ನಿಸರ್ಗ ಸಂಗೀತ ವಿದ್ಯಾಲಯ (ಶಿಕ್ಷಣ ಕ್ಷೇತ್ರ) ಕ್ಕೆ ಪ್ರೊ. ಸಿ. ಹೆಚ್‌. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಾಡೋಜ ಡಾ. ಮಹೇಶ್‌ ಜೋಶಿ, ಎಸ್‌. ರಾಜಶೇಖರ್‌ ಸೇರಿದಂತೆ ಹಲವು ಕಲಾವಿದರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

 

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...