ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 


"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ? ಮೌನದ ಸರೋವರವಾ? ನದಿಯಾ? ಇಲ್ಲ ಕಳೆದು ಹೋದ ಕನಸಾ? ಅಬ್ಬಾ! ದೀರ್ಘ ಕಾಲದವರೆಗೂ ಕಾಡುವ ಪುಸ್ತಕ," ಎನ್ನುತ್ತಾರೆ ಸ್ಫೂರ್ತಿ ಚಂದ್ರಶೇಖರ್. ಅವರು ವಿಶ್ವ ಪುಸ್ತಕ ದಿನದ ವಿಶೇಷವಾಗಿ ಬುಕ್ ಬ್ರಹ್ಮ ಆಯೋಜಿಸಿದ್ದ ‘ನಿಮ್ಮಿಷ್ಟದ ಪುಸ್ತಕ’ ಕುರಿತು ಬರೆದ ಲೇಖನ.

ಶಿಶಿರ ಚಂದ್ರ, ಶ್ರಾವಣಿ ನಮ್ಮನ್ನ ಓದು ಮುಗಿಯುವ ತನಕ ಕಾಯುವ, ಕಾಡುವ ಪಾತ್ರಗಳು. ಇನ್ನೂ ಇದರ ಮಧ್ಯೆ ರೌದ್ರವಾಗಿ ನರ್ತಿಸುವ ಜಗನ್ಮೋಹನ್ ಒಂದೆಡೆಯಾದರೆ, ಕಾಷ್ಠ ಮೌನ ಗೌರಿಯಲ್ಲಿ ಸೆಳೆಯುವ ಮೃಣಾಲಿನಿ ಇನ್ನೊಂದೆಡೆ, ದೇವತೆಗಳು ಕುಡಿಯಬಹುದಾದ ಕಾಫಿ ಗಿರಿಬಾಬು ಮಾಡಿಕೊಡುವನು, the tough lady ಶರ್ಮಿಳಾ ಇನ್ನೊಂದೆಡೆ ಯಾವುದೋ ಪ್ರೀತಿ, ಮಮಕಾರಕ್ಕೆ ಹತೋರೆಯುವಳು. ಇವರೆಲ್ಲರ ಮಧ್ಯೆ ಪ್ರಶಾಂತತೆಯ ಪ್ರಶಾಂತಿನಿ ಹಾಗೂ ಗೋಮತಿ ನಮ್ಮೆಲ್ಲರ ಮನ ಸೆಳೆಯುವರು, ಹೌದು ದೈವಸಹಾಯಂ ನಮ್ಮನ್ನು ನೋಡುವನು.
ರವಿ ಬೆಳಗೆರೆ ಅವರು ಕಥೆಯನ್ನು ಬಿಗಿಯಾಗಿ ಹೆಣೆದು, ಓದುಗರನ್ನು ಕಟ್ಟಿ ಕುರಿಸುವ ಮಹಾನ್ ಚಾಣಕ್ಯ.

300 ಪುಟಗಳು ಆದಮೇಲೆ ನಿಜವಾದ ತ್ರಿಲ್. ನನಗೆ ಪುಸ್ತಕಕ್ಕಿಂತ ಹೆಚ್ಚಾಗಿ ಯಾವುದೋ ಸೀರೀಸ್ ನೋಡ್ತಿದ್ದೀನಿ ಅನ್ನೋ ಸೆಳೆತ, ಕೆಲವು ಸಂದರ್ಭಗಳು ನನ್ನ ನಿದ್ದೆಯನ್ನೇ ಕೆಡಿಸಿದವು, ಇನ್ನೋ ಕೆಲವು ನನಗೆ ಭಯ ಹುಟ್ಟಿಸಿದವು. ಎಷ್ಟೋ ಪುಟಗಳು ತ್ರಿಲ್ ಅನ್ನಿಸಿದಾಗ ಕಿರುಚಿದ್ದು ಉಂಟು. ಒಟ್ನಲ್ಲಿ ನನ್ನ ಪ್ರತಿ ನಿಮಿಷವನ್ನು ಸಾರ್ಥಕಗೊಳಿಸಿದ ಕಾದಂಬರಿ.

ನನಷ್ಟಿದ ಸಾಲುಗಳು:
1. ಪ್ರೀತಿಯೆಂಬುದು ನಿಯತ್ತು ಬೇಡುತ್ತದೆ, ಪ್ರಾಮಾಣಿಕತೆ ಬೇಡುತ್ತದೆ. ಹಗಲು-ರಾತ್ರಿ ದುಡಿದರೂ, ಕಟ್ಟಲಾಗದಂಥ ಕಂದಾಯ ಕೇಳುತ್ತದೆ.
2. ದೇವರನ್ನ ಪ್ರೀತಿಸೋಕೆ, ಪ್ರಾರ್ಥಿಸೋಕೆ ದೇಗುಲವೇ ಬೇಕಾ? ಪ್ರೀತಿಯ ಹಾಗೇನೇ ದೇವರು ಅನ್ನೋದು ಕೂಡ ಕೇವಲ ವಿಶ್ವಾಸ. ಪ್ರೀತಿಯನ್ನ, ದೇವರನ್ನ ಕಣ್ಣಿಂದ ನೋಡಕ್ಕಾಗಲ್ಲ. ಕೇವಲ ಫೀಲ್ ಮಾಡಬಹುದು. ಪಶ್ಚಾತ್ತಾಪ ಪಡೋದು ಕೂಡ ಅಷ್ಟೇ. ಅದಕ್ಕೆ ಕನ್ಫೆಷನ್ ಬಾಕ್ಸ್ ನ ಹಂಗು ಬೇಕಾಗಿಲ್ಲ.
3. ಜೈಲಿನ ಹೊರಗಿರುವ ಕೋಟ್ಯಂತರ ಕೆಟ್ಟವರಿಗಿಂತ ಅಲ್ಲಿರುವ ಕೆಟ್ಟವರು ಮೇಲು. ಅವರು ಎಷ್ಟು ಕೆಟ್ಟವರೆಂಬುದು ಸಾಬೀತಾದರೂ ಆಗಿರುತ್ತದೆ.
4. ಆಡಬೇಕಾದ ಮಾತು ತಡವಾದಷ್ಟು ಸಂಬಂಧಕ್ಕೆ ನಂಜೇರುತ್ತ ಹೋಗುತ್ತದೆ.

- ಸ್ಫೂರ್ತಿ ಚಂದ್ರಶೇಖರ್

MORE FEATURES

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...