"ಒಟ್ಟಾರೆಯಾಗಿ ಈ ಕೃತಿ ಓದುಗನಲ್ಲೊಂದು ಓದುವಿಕೆ ಸಂತೃಪ್ತಿ ಕೊಡುವುದರ ಜೊತೆಗೆ ನಿಮ್ಮೊಳಗಿನ ಬರಹಗಾರ್ತಿಯ ತಾಕತ್ತನ್ನು ಮತ್ತು ಜಗತ್ತಿನ ಹತ್ತು ಹಲವು ವಸ್ತುಗಳೆಡೆಗೆ ನಿಮಗಿರಬಹುದಾದ ಆಸಕ್ತಿಯನ್ನೂ ಪರಿಚಯಿಸಿತು ಎಂದರೆ ಖಂಡಿತ ಸುಳ್ಳಲ್ಲ,'' ಎನ್ನುತ್ತಾರೆ ಗುರುರಾಜ ಕೋಡ್ಕಣಿ. ಅವರು ಎನ್. ಸಂಧ್ಯಾರಾಣಿಯವರ ʻಕದಡಿದ ಕೊಳವು ತಿಳಿಯಾಗಿರಲುʼ ಕೃತಿ ಕುರಿತು ಬರೆದ ಅನಿಸಿಕೆ.
ಕೆಲವು ಪುಸ್ತಕಗಳನ್ನು ಸುಲಭವಾಗಿ ಸುಲಲಿತವಾಗಿ ಒಂದೇ ಗುಕ್ಕಿಗೆ ಮುಗಿಸಿಬಿಡಬಹುದು. ವಿಷಯ ಮೋಜಿನದ್ದೋ,ರೋಚಕ ಪ್ರಧಾನವೋ ಆಗಿದ್ದರೆ ಬಹುಶಃ ಅವು ವೇಗದಲ್ಲಿ ಮುಗಿದು ಹೋಗುತ್ತವೆ. ಆದರೆ ಇನ್ನು ಕೆಲವು ಪುಸ್ತಕಗಳು ಹಾಗಲ್ಲ. ಅವುಗಳನ್ನು ನಿಧಾನಕ್ಕೆ ಓದಬೇಕು. ತಿನಿಸಿನ ಭಾಷೆಯಲ್ಲಿ ಹೇಳುವುದಾದರೆ ಮೆಲ್ಲಬೇಕು. ಬಿಸಿಬಿಸಿಯ ಕಾಫಿಯ ಗುಟುಕಿನಂತೆ ಆಸ್ವಾಧಿಸಬೇಕು. ಪುಸ್ತಕ ಓದಿಸಿಕೊಂಡು ಹೋಗುತ್ತದೇನೋ ನಿಜ, ಆದರೆ ಬೇಗ ಮುಗಿದು ಹೋಗುವ ಬೇಸರಕ್ಕೆ ಮುಗಿಸಲು ಓದುಗನಿಗೆ ಮನಸಾಗದು. ಆ ಬಗೆಯ ಪುಸ್ತಕ 'ಕದಡಿದ ಕೊಳವು ತಿಳಿಯಾಗಿರಲು' ಎಂದರೆ ಉತ್ಪ್ರೇಕ್ಷೆಯಲ್ಲ.
ನಿಮ್ಮ ಬರಹ ನನಗೆ ಹೊಸತೇನಲ್ಲ. ಯಾಕೆ ಕಾಡುತಿಹೆ ಸುಮ್ಮನೇ , ಲವ್ ಟುಡೆ, ಇಷ್ಟು ಕಾಲ ಒಟ್ಟಿಗಿದ್ದು, ಅಂಟಿದ ನಂಟು ಹೀಗೆ ಸಾಲು ಸಾಲು ನಿಮ್ಮ ಪುಸ್ತಕಗಳನ್ನೋದಿದವನಿಗೆ ನಿಮ್ಮ ಬರಹದ ಪ್ರಗಾಢತೆ ಮತ್ತು ವಿಭಿನ್ನ ದೃಷ್ಟಿಕೋನಗಳ ಪರಿಚಯ ಇದ್ದ ಇದೆ. ಹಾಗಾಗಿಯೇ ನಿಮ್ಮ ಹೊಸ ಪುಸ್ತಕದ ಕುರಿತಾಗಿ ಯಾವತ್ತಿಗೂ ನನಗೆ ಕುತೂಹಲ.
ಕುತೂಹಲವನ್ನು ಸಂತೃಪ್ತಿಯಿಂದ ತಣಿಸಿದ ಕೃತಿಯಿದು ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವೆ. ಆರಂಭದಲ್ಲಿ ,' ಅಪ್ಪು'ವಿನ ನೆನಪಿಗೆ ಕಣ್ಣ ಹನಿಯಾಗಿಸಿದಿರಿ. ಕದಡಿದ ಕೊಳದ ವಿಷಾದವನ್ನ ನನಗೂ ದಾಟಿಸಿದಿರಿ. 'ಇದೇನು ಹೀಗೆ ಭಾವುಕತೆ' ಎನ್ನಿಸುವಷ್ಟರಲ್ಲಿ ,' ಲೈಂಗಿಕ ಕಾರ್ಯಕರ್ತೆಯರ ' ವಿಷಯವನ್ನೆತ್ತಿಕೊಂಡು ತರ್ಕಬದ್ಧವಾದ ವಾದ ಮಂಡಿಸಿದಿರಿ. ಫೆಮಿನಿಸಂ ಎಂದಾಕ್ಷಣ ಗಂಡು ದ್ವೇಷವೆನ್ನಿಸುವವರ ನಡುವೆ 'ಉಹುಂ..ದುಷ್ಟತನಕ್ಕೆ ಲಿಂಗದ ಹಂಗಿಲ್ಲ' ಎಂಬ ಸೂಕ್ಷ್ಮವನ್ನು ತಾಕಿದಿರಿ. ಬಹುಶಃ ಅದಕ್ಕೆ ನಿಮ್ಮ 'ಅಮ್ಮ ಕಲಿಸಿದ ಫೆಮಿನಿಸಂ ' ಕೂಡ ಕಾರಣವಿರಬಹುದಾ ..? ಗೊತ್ತಿಲ್ಲ. ಪುಸ್ತಕದಲ್ಲಿ ಲಂಕೇಶರಿಂದ ಹಿಡಿದು ಗುಲ್ಜಾರ್ ಬಂದರು. ರೇ ನಿಂದ ಹಿಡಿದು ತೇಜಸ್ವಿಯೂ ಬಂದರು. ಭಾಷೆ ಬಂದಿತು ಜೊತೆಗೆ ಕ್ರಿಕೆಟ್ಟೂ ಬಂದಿತು. ಖುಷ್ವಂತ್ ರೊಂದಿಗೆ ರಾಬಿನ್ ವಿಲಿಯಮ್ಸ್ ಕೂಡ ಹೆಜ್ಜೆ ಹಾಕಿದೆ. ಒಟ್ಡಾರೆಯಾಗಿ ಒಂದೊಂದು ಅಧ್ಯಾಯಕ್ಕೂ ಒಂದೊಂದು ವಿಷಯ. ಒಂದೊಂದು ಭಾವ
ಒಟ್ಟಾರೆಯಾಗಿ ಈ ಕೃತಿ ಓದುಗನಲ್ಲೊಂದು ಓದುವಿಕೆ ಸಂತೃಪ್ತಿ ಕೊಡುವುದರ ಜೊತೆಗೆ ನಿಮ್ಮೊಳಗಿನ ಬರಹಗಾರ್ತಿಯ ತಾಕತ್ತನ್ನು ಮತ್ತು ಜಗತ್ತಿನ ಹತ್ತು ಹಲವು ವಸ್ತುಗಳೆಡೆಗೆ ನಿಮಗಿರಬಹುದಾದ ಆಸಕ್ತಿಯನ್ನೂ ಪರಿಚಯಿಸಿತು ಎಂದರೆ ಖಂಡಿತ ಸುಳ್ಳಲ್ಲ''
"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನ...
ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರ...
"ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು...
©2025 Book Brahma Private Limited.