ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ


"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್ಲಹಳ್ಳಿ ಪಬ್ಲಿಕೇಷನ್ ಧೃಡವಾಗಿತ್ತು ಎಂಬುದು ಹೆಮ್ಮೆಯಾಗಲಿದೆ. ಈ ಕೃತಿ ಸ.ವೆಂ ಪೂರ್ಣಿಮಾ ಅವರ ಚೊಚ್ಚಲ ಕೃತಿ," ಎನ್ನುತ್ತಾರೆ ಲೇಖಕ ಚಲಂ ಹಾಡ್ಲಹಳ್ಳಿ. ಅವರು ಸ.ವೆಂ. ಪೂರ್ಣಿಮಾ ಅವರ ‘ಒಂದೆಲೆ ಮೇಲಿನ ಕಾಡು’ ಕೃತಿ ಕುರಿತು ಬರೆದ ಅನಿಸಿಕೆ.

ನಮ್ಮಲ್ಲೇ ಮೊದಲು... ಹೀಗಂತ ಒಂದು ಬಿಡುಬೀಸಾದ ಹೇಳಿಕೆಯನ್ನು ಯಾರಾದರೂ ಸುಮ್ಮನೇ ಕ್ಲೈಮ್ ಮಾಡಿಕೊಳ್ಳುವ ಈ ಕಾಲದಲ್ಲಿ ಹಾಡ್ಲಹಳ್ಳಿ ಪಬ್ಲಿಕೇಷನ್ ತಣ್ಣಗೆ ಕೆಲಸ ಮಾಡುತ್ತಿದೆ. ಪ್ರಕಟಿಸಿರುವ ಅದಷ್ಟೂ ಕೃತಿಗಳಲ್ಲಿ ನಾಲ್ಕೈದು ಕೃತಿಗಳು ಮಾತ್ರ ಹಿರಿಯ ಬರಹಗಾರರದ್ದು. ಮಿಕ್ಕಂತೆ ಎಲ್ಲವೂ ಆಯಾ ಲೇಖಕರ ಚೊಚ್ಚಲ ಕೃತಿಗಳೇ ಆಗಿವೆ.

ಹಾಗಂತ ಇದು ಹಾಡ್ಲಹಳ್ಳಿ ಪ್ಲಬ್ಲಿಕೇಷನ್ನಿನ ಕಟಿಬದ್ಧ ನಿಯಮವೇನೂ ಅಲ್ಲ. ಇಂತಹುದನ್ನೇ ಪ್ರಕಟಿಸಬೇಕು ಎಂದು ಪಟ್ಟು ಹಾಕುವುದಿಲ್ಲವಾದರೂ ಪ್ರಕಟಿಸಿದ್ದು ಸಮಾಜಕ್ಕೆ, ನಮ್ಮ ಬೆನ್ನಿನ ಇತಿಹಾಸಕ್ಕೆ, ಕಣ್ಣ ಬೆಳಕಿನ ಭವಿಷ್ಯಕ್ಕೆ ಅಕ್ಷರ ಜವಬ್ದಾರಿಯನ್ನು ಅದು ಬೀರಬಹುದಾದ ಸಾಮಾಜಿಕ ಅಪಾಯವನ್ನು ಎಚ್ಚರದಿಂದ ಗಮನಿಸುತ್ತದೆ.

ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್ಲಹಳ್ಳಿ ಪಬ್ಲಿಕೇಷನ್ ಧೃಡವಾಗಿತ್ತು ಎಂಬುದು ಹೆಮ್ಮೆಯಾಗಲಿದೆ. ಈ ಕೃತಿ ಸ.ವೆಂ ಪೂರ್ಣಿಮಾ ಅವರ ಚೊಚ್ಚಲ ಕೃತಿ. ಚಂದದ ಹಾಡುಗಾರ್ತಿ, ಇದು ಹೀಗಲ್ಲ ಹೀಗೆ ಅನ್ನುವ ಶಿಕ್ಷಕಿ, ಬದುಕಿನ ಬಹುತೇಕ ಸಮಯವನ್ನು ಒಳ್ಳೇಯದರ ಹಿಂದೆ ಬಿದ್ದ ಸಧಭಿರುಚಿಯ ಹಪಹಪಿ ಹಾಗು ಭರಪೂರ ಜೀವಂತಿಕೆಯ ಮೂರ್ತ ರೂಪದ ಲೇಖಕಿ.

ಎದುರಿಗಿದ್ದವರನ್ನ, ಜತೆಯವರನ್ನ ಪೂರ್ಣಿಮಾ ಅವರು ನಡೆಸಿಕೊಳ್ಳುವುದರಲ್ಲೇ ಸಮೃದ ಸಾಹಿತ್ಯವಿದೆ. ಪ್ರಕಟವಾಗುತ್ತಲೂ ಇದೆ. ಆದರೆ ಗುರುತಿಸುವುದು ಮಾತ್ರ ಆಗಲಿಲ್ಲ. ಪೂರ್ಣಿಮಾ ಅವರು ತಮ್ಮ ಜವಬ್ದಾರಿ ನಿಭಾಯಿಸಿದ್ದಾರೆ ಅನ್ನುವುದರ ಜೊತೆಗೆ ಅವರ ಓರಗೆಯವರು, ಜತೆಯವರು ತಕ್ಕಮಟ್ಟಿಗೆ ತಮ್ಮ ಸಾಹಿತ್ಯಿಕ ಬವಾಬುದಾರಿಯನ್ನು ನಿಭಾಯಿಸಿಲಿಲ್ಲ ಎಂಬುದು ಕೂಡ ನಿರ್ಲ್ಯಕ್ಷಿತ ಸಾಹಿತ್ಯದ ಒಂದು ಅಮೂರ್ಥ ಮಾದರಿ ಅಂತಲೇ ಹೇಳಬಹುದು.

ಸಾಹಿತ್ಯ ಅಂದರೆ ಸಮೃದ್ದ ಜೀವನಾನುಭವ ಅಂತಾದರೇ, ಸಾಹಿತ್ಯ ನೋವ ಪಡೆದು ಖುಷಿಯ ನಗು ಆಗುವುದು ಅಂತಾದರೆ, ಸಾಹಿತ್ಯ ಮುಜುಗರದ ಗಟ್ಟಿ ಪರದೆಯಿಂದ ಆಚೆ ಬರುವ ಘನೀಕೃತ ಗಟ್ಟಿತನ ಎನ್ನುವುದಾರೆ ಪೂರ್ಣಿಮಾ ಅವರು ಈಗಾಗಲೇ ಸಾಹಿತಿಯಾಗಿದ್ದಾರೆ. ಆ ಕಾರಣಕ್ಕೆ ಹಾಡ್ಲಹಳ್ಳಿ ಪಬ್ಲಿಕೇಷನ್ ಸ.ವೆಂ ಪೂರ್ಣಿಮಾ ಅವರ ಜತೆ ಅತ್ಯಂತ ಪ್ರೀತಿಯಿಂದ ಸಾಹಿತ್ಯಿಕ ನ್ಯಾಯದ ಒಪ್ಪಂದ ಮಾಡಿಕೊಳ್ಳುತ್ತದೆ. ಅದರ ಪರಿಣಾಮವೇ "ಒಂದೆಲೆ ಮೇಲಿನ ಕಾಡು" ಎಂಬ ಜೀವನದ ಹಲವಾರು ಹಂತಗಳ ಕನ್ನಡಿಯಂತಹಾ ಕೃತಿ ಈಗ ನಿಮ್ಮ ಮುಂದಿದೆ. ಮುಂದೆ ಮುಖ್ಯವಾಹಿನಿಯ ನದಿ ಸೇರಲು ಈ ಕೃತಿ ಲೇಖಕಿಗೆ ಖಂಡಿತವಾಗಿ ಸಹಕಾರಿಯಾಗಲಿದೆ ಎಂಬ ನಂಬುಗೆಯಿದೆ.

- ಚಲಂ ಹಾಡ್ಲಹಳ್ಳಿ

MORE FEATURES

ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ: ನರೇಂದ್ರ ಪೈ

09-05-2024 ಬೆಂಗಳೂರು

'ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅ...

ಜೀವಂತಿಕೆ ತುಂಬಿದ ಬರಹಗಳು

08-05-2024 ಬೆಂಗಳೂರು

"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗ...

ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..

08-05-2024 ಬೆಂಗಳೂರು

"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸ...