ರಾಜ್ಯೋತ್ಸವ ಪ್ರಯುಕ್ತ ಪರಿಷತ್ತಿನ ಪುಸ್ತಕಗಳಿಗೆ ವಿಶೇಷ ರಿಯಾಯಿತಿ 

Date: 28-10-2020

Location: ಬೆಂಗಳೂರು


ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಪ್ರಕಟಣೆಯ ಎಲ್ಲ ಪುಸ್ತಕಗಳಿಗೆ ಶೇ.10 ರಿಂದ ಶೇ. 75ರವರೆಗೆ ರಿಯಾಯಿತಿ ನೀಡುತ್ತಿದೆ. 2020ರ ನವೆಂಬರ್ 1 ರಿಂದ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಎಲ್ಲ ರಜಾ ದಿನಗಳೂ ಸೇರಿದಂತೆ ಪುಸ್ತಕ ಮಾರಾಟ ಮಾಡಲಾಗುವುದು.

ಪುಸ್ತಕ ಮಾರಾಟಗಾರರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು, ಜನಸಾಮಾನ್ಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರು ತಿಳಿಸಿದ್ದಾರೆ.

ವಿಶೇಷ ರಿಯಾಯಿತಿಯ ವಿವರ ಈ ಕೆಳಕಂಡಂತಿದೆ.

ಕ್ರ.ಸಂ. ಪುಸ್ತಕಗಳ ವಿವರ ಸಾಮಾನ್ಯ ಎಲ್ಲರಿಗೂ ವಿಶೇಷ ರಿಯಾಯಿತಿ
1 ಕನ್ನಡ ರತ್ನಕೋಶ, ಸಂಕ್ಷಿಪ್ತ ಕನ್ನಡ ನಿಘಂಟು ಹಾಗೂ ಸಂಕ್ಷಿಪ್ತ ಕನ್ನಡ ಇಂಗ್ಲೀಷ್ ನಿಘಂಟು ಶೇ.10
2 ಬೃಹತ್ ಕನ್ನಡ-ಕನ್ನಡ ನಿಘಂಟು (1-8ಸಂಪುಟ) ಶೇ.50
3 ದಲಿತ ಸಾಹಿತ್ಯ ಸಂಪುಟಗಳು ಶೇ.50
4 ಗದ್ಯಾನುವಾದ ಪುಸ್ತಕಗಳು, ಶತಮಾನೋತ್ಸವ ಮಾಲಿಕೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಪರೀಕ್ಷೆ ಪುಸ್ತಕಗಳು ಹಾಗೂ ಇತರೆ ಹೊಸ ಪುಸ್ತಕಗಳು ಶೇ.35
5 ಅಖಿಲ ಭಾ ಕ ಸಾ ಸಮ್ಮೇಳನ ಪುಸ್ತಕಗಳು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ಪುಸ್ತಕಗಳು,ಪಿ.ಹೆಚ್.ಡಿ. ಮತ್ತು ಜೀವನ ಚರಿತ್ರೆ ಪುಸ್ತಕಗಳು ಶೇ.50
6 ಸ್ಮರಣ ಸಂಚಿಕೆಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕಗಳು ಹಾಗೂ ಬೀದರ್ ಸಮ್ಮೇಳನ ಪುಸ್ತಕಗಳು ಶೇ.75

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...