ಸಾಹಿತ್ಯದ ಅಲೆ ಎಬ್ಬಿಸಿದ ವಿಜಯಪುರದ ನೆಲೆ ಸಂಸ್ಥೆ


ಪ್ರತಿವರ್ಷದಂತೆ ಈ ವರ್ಷವೂ "ನೆಲೆ ಪ್ರಕಾಶನ ಸಂಸ್ಥೆ (ರಿ)ಸಿಂದಗಿ"ಯ ವತಿಯಿಂದ 'ನೆಲೆ ಸಂಭ್ರಮ -2021' ನ್ನು ನೆಲೆ ಫೇಸ್ಬುಕ್ ಲೈವ್ ನ ಮೂಲಕ ದಿನಾಂಕ - 15.09.2021 ರಿಂದ 11.10.2021 ರವರೆಗೆ ಪ್ರತಿದಿನ ಸಾಯಂಕಾಲ 4.30ಕ್ಕೆ 27 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ನೆಲೆ ಪ್ರಕಾಶನದ ಸದಸ್ಯರಾದ ದೇವು ಮಾಕೊಂಡ ಅವರು ಈ ಕಾರ್ಯವನ್ನು ಆಯೋಜಿಸಿದ್ದರು. ಕಳೆದ ವರ್ಷವು ನೂರಾರು ಜನ ಹಿರಿ-ಕಿರಿ ಸಾಹಿತಿಗಳು,ಕಲಾವಿದರನ್ನೊಳಗೊಂಡ ಒಂದು ತಿಂಗಳ ಕಾಲ ಯಶಸ್ವಿ ಕಾರ್ಯಕ್ರಮ ಮಾಡಿದ್ದರು. ಜೊತೆಗೆ ಭಾಗವಹಿಸಿದ ಎಲ್ಲರಿಗೂ ಮೌಲ್ಯಯುತ ಸಾಹಿತ್ಯಕ ಗ್ರಂಥಗಳನ್ನು ನೀಡಿ ಗೌರವಿಸಿದ್ದರು.

ಯಾವುದೇ ವಿಶ್ವವಿದ್ಯಾಲಯ ಮಾಡದೇ ಇರುವ ಒಂದೊಳ್ಳೆ ಅಕಾಡೆಮಿಕ್ ಆಗಿ ನೆಲೆ ಸಂಭ್ರಮವನ್ನು ನೆಲೆಯ ಸದಸ್ಯರಾದ ದೇವು ಮಾಕೊಂಡ ಮತ್ತು ನೆಲೆಯ ಹಿರಿಯ ಸದಸ್ಯರು, ಮಾರ್ಗದರ್ಶಕರು ಆದ ಚನ್ನಪ್ಪ ಕಟ್ಟಿ,ಎಂ ಎಂ ಪಡಶೆಟ್ಟಿ ಅವರು ಕೂಡಿಕೊಂಡು ಬಂದಿರುವ ಈ ಕಾರ್ಯ ಶ್ಲಾಘನೀಯವಾದುದು. ಪ್ರಸ್ತುತ 2021ನೆಯ ಸಾಲಿನ ನೆಲೆ ಸಂಭ್ರಮ ಕಾರ್ಯಕ್ರಮದಲ್ಲಿ 70 ಕ್ಕೂ ಅಧಿಕವಾಗಿ ನಾಡಿನ ಕವಿಗಳು, ಗಜಲ್ಕಾರರು, ಚಿಂತಕರು, ವಿಮರ್ಶಕರು, ರಂಗಭೂಮಿ ನಟರು, ಸಿನಿಮಾ ನಿರ್ದೇಶಕರು, ಪ್ರಸಾರ ಮಾಧ್ಯಮದವರು, ನಟರು ಮುಂತಾದವರು ಭಾಗವಹಿಸಿದ್ದರು.

2021 ರ ನೆಲೆ ಸಂಭ್ರಮವು ಮೂರು ಘಟ್ಟಗಳನ್ನು ಒಳಗೊಂಡಿದ್ದು ಮೊದಲ ಘಟ್ಟದಲ್ಲಿ ಕವಿಗೋಷ್ಠಿ ಮತ್ತು ಗಜಲ್ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಎರಡನೆಯ ಘಟ್ಟದಲ್ಲಿ ಜನಪದ ಮಹಾಕಾವ್ಯಗಳ ಅವಲೋಕನ ಹಾಗೂ ಮೂರನೆಯ ಘಟ್ಟದಲ್ಲಿ ಕಥಾ ವಾಚನ ಸರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಜನಪದ ಕಾವ್ಯಗಳ ಅವಲೋಕನ ಕಾರ್ಯವನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಗೊಳಿಸಿದ್ದು ನೆಲೆ ಬಳಗದ ಸವಾಲಿನ ಕಾರ್ಯ. ಶಿಷ್ಟ ಕಾವ್ಯದಲ್ಲಿರುವಂತೆ ಜನಪದದಲ್ಲೂ ಹಲವು ಅಗ್ರ ಮಹಾಕಾವ್ಯಗಳಿದ್ದು ಅವುಗಳಲ್ಲಿರುವ ದೇಸಿ ಸಿರಿಸಂಸ್ಕೃತಿಯನ್ನು ಕಾಣಲು ಇದರಿಂದ ಸಾಧ್ಯವಾಯಿತು.

ದಿನಾಂಕ -15.09.2021 ರಂದು ಮೊದಲ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಚಿಂತಕರಾದ ಶ್ರೀ ಬಿ. ಎಂ. ಹನೀಫ್ ಅವರು ವಹಿಸಿದ್ದು ಕೈದಾಳ ಕೃಷ್ಣಮೂರ್ತಿ, ಸಂಧ್ಯಾ ಹೊನಗುಂಟಿಕರ, ಭುವನಾ ಹಿರೇಮಠ, ಮಂಜುನಾಥ ನಾಯ್ಕ, ಮಂಜುಳಾ ಹುಲಿಕುಂಟೆ, ವಿದ್ಯಾರಶ್ಮಿ ಪೆಲತ್ತಡ್ಕ, ಅಶೋಕ್ ಹೊಸಮನಿ ಹಾಗೂ ತೇಜಾವತಿ ಎಚ್ ಡಿ ಅವರು ಕವಿತೆ ವಾಚಿಸಿದರು. ದಿನಾಂಕ - 16.09.2021 ರ ಎರಡನೆಯ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ತುಮಕೂರಿನ ವಿಮರ್ಶಕರಾದ ಡಾ. ಗೀತಾವಸಂತ ಅವರು ವಹಿಸಿದ್ದು ಜೆ. ದಾಜಿಬಾ, ರಮೇಶ ಕತ್ತಿ, ರಮೇಶ ಹುಲಕುಂದ, ಶಂಕರಗೌಡ ಚಿಕ್ಕನಗೌಡ, ಪರಿಮಳ ಕಮತರ, ಜಹಾನರ ಕೋಳೂರು, ಪ್ರಕಾಶ ಕಡಮೆ, ಜಯಲಕ್ಷ್ಮಿ ಕೋಳಗುಂದ ಅವರು ಕವಿತೆ ವಾಚಿಸಿದರು. ದಿನಾಂಕ - 17.09.2021 ರ ಮೂರನೆಯ ಕವಿಗೋಷ್ಠಿಯಲ್ಲಿ ಬೆಂಗಳೂರಿನ ಕವಯಿತ್ರಿಯಾದ ಜ. ನಾ. ತೇಜಶ್ರೀ ಅವರು ಅಧ್ಯಕ್ಷತೆ ವಹಿಸಿದ್ದು ಮಮತಾ ಅರಸೀಕೆರೆ, ಆಶಾ ಜಗದೀಶ್, ಬಸವರಾಜ ಕಲೆಗಾರ, ವಿಭಾ ಪುರೋಹಿತ, ವಿಜಯಭಾಸ್ಕರ ರೆಡ್ಡಿ, ತಿಲೋತ್ತಮೆ ಗೊಂಡ ಅವರು ಕವಿತೆ ವಾಚಿಸಿದರು. ದಿನಾಂಕ - 18.09.2021ರ ಗಜಲ್ ಗೋಷ್ಠಿಯಲ್ಲಿ ಶಹಾಪುರದ ಕವಿಗಳಾದ ಪ್ರೊ. ಸಿದ್ದರಾಮ ಹೊನ್ಕಲ್ ಅವರು ಅಧ್ಯಕ್ಷತೆ ವಹಿಸಿದ್ದು ಪ್ರಭಾವತಿ ದೇಸಾಯಿ, ಸಿ. ಎಸ್. ಆನಂದ, ನಿರ್ಮಲಾ ಶೆಟ್ಟರ್, ಸಹದೇವ ಯರಗೊಪ್ಪ, ಎಸ್. ಎಸ್. ಅಲಿ, ಮರುಳಸಿದ್ಧಪ್ಪ ದೊಡಮನಿ, ಅರುಣಾ ನರೇಂದ್ರ, ಸುಜಾತಾ ಲಕ್ಷ್ಮೀಪುರ, ನೂರ್ ಅಹಮ್ಮದ್ ನಾಗನೂರ, ಸರ್ವಮಂಗಳ ಜಯರಾಮ್, ಕವಿತಾ ಸಾಲಿಮಠ ಅವರು ಗಜಲ್ ವಾಚಿಸಿದರು.

ದಿನಾಂಕ -19.09.2021 ರಿಂದ 03.10.2021 ರವರೆಗೆ ಜನಪದ ಮಹಾಕಾವ್ಯಗಳ ಅವಲೋಕನ ನಡೆಯಿತು. ಡಾ. ಕೇಶವನ್ ಪ್ರಸಾದ ಅವರು ಸಂಪಾದಿಸಿದ ಮಲೆ ಮಹದೇಶ್ವರ ಕಾವ್ಯವನ್ನು ಕುರಿತು ಇಂಡಿಯ ಡಾ.ಎಸ್.ಕೆ. ಕೊಪ್ಪ ಅವರು, ಡಾ. ಮಂಜುನಾಥ ಬೇವಿನಕಟ್ಟಿ ಸಂಪಾದಿಸಿದ ಮೈಲಾರಲಿಂಗನ ಕಾವ್ಯ ಕುರಿತು ಕಲಘಟಗಿಯ ಡಾ. ಬಿ. ಜಿ. ಬಿರಾದರ, ಡಾ. ಕೇಶವನ್ ಪ್ರಸಾದ ಸಂಪಾದಿಸಿದ ಬಿಳಿಗಿರಿರಂಗನ ಕಾವ್ಯ ಕುರಿತು ಬೀಳಗಿಯ ಡಾ. ವಿಜಯಶ್ರೀ ಇಟ್ಟಣ್ಣವರ, ಡಾ. ಕೆ. ಎಂ.ಮೈತ್ರಿ ಸಂಪಾದಿಸಿದ ಕೃಷ್ಣಗೊಲ್ಲರ ಮಹಾಕಾವ್ಯ ಕುರಿತು ಮೈಸೂರಿನ ಡಾ. ರಂಗನಾಥ ಕಂಟನಕುಂಟೆ, ಡಾ. ಪ್ರಭಾಕರ ಎ. ಎಸ್. ಸಂಪಾದಿಸಿದ ಮ್ಯಾಸ ಬೇಡರ ಕಥನಗಳು ಕುರಿತು ಸವದತ್ತಿಯ ಡಾ. ವಾಯ್ ಎಂ. ಯಾಕೊಳ್ಳಿ, ಪ್ರೊ. ಚೆಲುವರಾಜು ಸಂಪಾದಿಸಿದ ಜುಂಜಪ್ಪ ಕುರಿತು ಶಿರಾ ದ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಡಾ.ಗಂಗಾಧರ ದೈವಜ್ಞ ಸಂಪಾದನೆಯ ಮಾಳಿಂಗರಾಯ ಮಹಾಕಾವ್ಯ ಕುರಿತು ಹಂಪಿಯ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಕೆ.ಎಂ.ಮೈತ್ರಿ ಸಂಪಾದನೆಯ ಕುಮಾರ ರಾಮ ಮಹಾಕಾವ್ಯ ಕುರಿತು ಶಹಾಪುರದ ಪ್ರೊ.ಸಿ.ಎಸ್.ಭೀಮರಾಯ, ಡಾ.ಹಿ.ಜಿ.ಬೋರಲಿಂಗಯ್ಯ ಸಂಪಾದನೆಯ ಮಂಟೇಸ್ವಾಮಿ ಕಾವ್ಯ ಕುರಿತು ಗೋಟಗೊಡೆಯ ಡಾ.ಚಂದ್ರಪ್ಪ ಸೊಬಟಿ,ಡಾ ವೀರಣ್ಣ ದರಡೆ ಸಂಪಾದನೆಯ ಜನಪದ ಹಾಲುಮತ ಮಹಾಕಾವ್ಯ ಕುರಿತು ಹಂಪಿಯ ಡಾ.ಕೆ.ರವೀಂದ್ರನಾಥ, ಡಾ.ಚನ್ನಪ್ಪ ಕಟ್ಟಿ ಸಂಪಾದನೆಯ ಅಮೋಘಸಿದ್ಧ ಜನಪದ ಮಹಾಕಾವ್ಯ ಕುರಿತು ಸಂಗಮೇಶ್ ಮೇತ್ರಿ, ಡಾ. ಸ. ಚಿ. ರಮೇಶ ಸಂಪಾದನೆಯ ಸ್ಯಾಸಿ ಚೆನ್ನಮ್ಮನ ಕಾವ್ಯ ಕುರಿತು ಧಾರವಾಡದ ಡಾ. ನಿಂಗಪ್ಪ ಮೂದೇನೂರು ಹಾಗೂ ಸಮಾರೋಪ ನುಡಿಗಳನ್ನು ಕಲಬುರಗಿಯ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ ಅವರು ಮಾತನಾಡಿದರು.

ನೆಲೆ ಸಂಭ್ರಮದ ಮೂರನೆಯ ಘಟ್ಟ ಕಥಾ ವಾಚನ ಸರಣಿಯು ದಿನಾಂಕ - 04.10.2021 ರಿಂದ 11.10.2021 ರವರೆಗೆ ನಡೆದು ಬಾಳಾಸಾಹೇಬ ಲೋಕಾಪುರ ಅವರ ಅವ್ವ ಕತೆಯನ್ನು ನಟನಾದ ಮೇಘಸಮೀರ, ಮಹಾಂತೇಶ ನವಲಕಲ್ ಅವರ ಬುದ್ಧಗಂಟಿ ಕತೆಯನ್ನು ಮಂಜು ಪಾಂಡವಪುರ, ಕೆ. ಎಸ್. ನಾಯಕ ಅವರ ಮಾನು ಭಗತನ ಮರಿಯಮ್ಮದೇವಿ ಕತೆಯನ್ನು ಮುಂಬೈ ನ ಅಹಲ್ಯಾ ಬಲ್ಲಾಳ, ಕಾ. ತ. ಚಿಕ್ಕಣ್ಣ ಅವರ ಜರಿನಾಳೆಮ್ಬ ಬಾಲೆ ಕತೆಯನ್ನು ದಾದಾಪೀರ ಜೈಮನ್, ಬಾನು ಮುಸ್ತಾಕ್ ಅವರ ಅರಬ್ಬಿ ಮೇಸ್ಟ್ರು ಮತ್ತು ಗೋಭಿ ಮಂಚೂರಿ ಕತೆಯನ್ನು ಗುರುನಾಥ, ಬಸವರಾಜ ಡೋಣುರ ಅವರ ಹೋದನೆಲ್ಲಿ ನನ್ನ ಆ ಗೆಳೆಯ ಕತೆಯನ್ನು ಮುದಿರಾಜ ಬಾಣದ, ಹಣಮಂತ ಹಾಲಗೇರಿ ಅವರ ಹಸಿವು ಕತೆಯನ್ನು ರುಕ್ಮಿಣಿ ನಾಗಣ್ಣವರ, ಕಲ್ಲೇಶಿ ಕುಂಬಾರ ಅವರ ಒಳಗಣ ಜ್ಯೋತಿ ಕತೆಯನ್ನು ಚಿದಂಬರ ಬಂಡಗಾರ, ಟಿ. ಎಸ್. ಗೊರವರ ಅವರ ಮನಸಿನ ವ್ಯಾಪಾರ ಕತೆಯನ್ನು ಪೂರ್ಣಿಮಾ ಪೊದ್ದಾರ, ಲಕ್ಷ್ಮಣ ಬದಾಮಿ ಅವರ ಒಂದು ಚಿಟಿಕೆ ಮಣ್ಣು ಕತೆಯನ್ನು ಸಾಯಬಣ್ಣ ಮಾದರ, ದೀಪ್ತಿ ಭದ್ರಾವತಿ ಅವರ ಮೊಹರು ಕತೆಯನ್ನು ಸುನಂದಾ ಸಚಿನ್, ತಿರುಪರಿ ಭಂಗಿ ಅವರ ಅನಾದಿ ಮೊರೆಯ ಕೇಳಿ ಕತೆಯನ್ನು ಭರತ. ಸ. ಜಗನ್ನಾಥ, ಚನ್ನಪ್ಪ ಕಟ್ಟಿ ಅವರ ಕವಳೆ ಹಣ್ಣು ಕತೆಯನ್ನು ಅಶೋಕ ಹೊಸಮನಿ ಅವರು ವಾಚಿಸಿದರು. ಕಥಾ ಸರಣಿಯ ಅಧ್ಯಕ್ಷರಾದ ನಾಡಿನ ಹಿರಿಯ ಕಥೆಗಾರರಾದ ಎಸ್ ದಿವಾಕರ್ ಅವರು ಅಧ್ಯಕ್ಷತೆಯ ನುಡಿಗಳನ್ನು ಆಡಿದರು. ವಿಭಿನ್ನ ಅಭಿರುಚಿಯ ಉತ್ಕೃಷ್ಟವಾದ ಈ ಸುದೀರ್ಘ ಕಾರ್ಯಕ್ರಮವನ್ನು ಆಯೋಜಿಸಿದ ನೆಲೆ ಪ್ರಕಾಶನ ಸಂಸ್ಥೆಯ ಸದಸ್ಯ ಕವಿ ದೇವು ಮಾಕೊಂಡ ಸಂಸ್ಥೆಯ ಹಿರಿಯರಾದ ಡಾ. ಎಂ. ಎಂ. ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿ ಅವರ ಈ ಕಾರ್ಯ ಶ್ಲಾಘನೀಯವಾದುದು.

- ತೇಜಾವತಿ ಎಚ್ ಡಿ, ತುಮಕೂರು

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...