ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ


‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ್ಯ ಪ್ರಕಾರಗಳ ಬಗ್ಗೆ ಇರುವ ಆಳವಾದ ಜ್ಞಾನವನ್ನು ಅಭಿವ್ಯಕ್ತಿಸುತ್ತದೆ ಎನ್ನುತ್ತಾರೆ’ ಉದಯ್ ಕುಮಾರ್ ಹಬ್ಬು. ಅವರು ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ 'ನನ್ನ ಇತ್ತೀಚೆಗಿನ ಓದು’ ಕೃತಿಯ ಕುರಿತು ಬರೆದ ವಿಮರ್ಶೆ ಇಲ್ಲಿದೆ.

ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಇವರು ಮುಂಬಯಿ ವಿಶ್ವವಿದ್ಯಾಲಯ‌‌ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂಲತಃ ಕಾರ್ಕಳ ತಾಲೂಕಿನ ಕೌಡೂರಿನವರು‌. ಈ ಆಯ್ದ ಕೃತಿಗಳ ವಿಮರ್ಶಾ ಬರಹಗಳ ಸಂಕಲನ "ನನ್ನ ಇತ್ತೀಚಿಗಿನ ಓದು" ಪುಸ್ತಕವನ್ನು ನನ್ನ ‌ಓದಿಗೆ ಕಳಿಸಿದ್ದಾರೆ‌. ಈ ವಿಮರ್ಶಾ ಸಂಕಲನದಲ್ಲಿ ‌ಒಟ್ಟೂ 35 ವಿಮರ್ಶಾ ಬರಹಗಳಿವೆ‌.

ಅವುಗಳು ವಿಮರ್ಶಕಿಯು ಇತ್ತೀಚಿಗೆ ಓದಿದ ಹಲವು ಮಹತ್ವದ ಕೃತಿಗಳ ಕುರಿತು, ಕವಿತಾ ಸಂಕಲನಗಳು, ಮಹಾಪ್ರಬಂಧಗಳು, ಸಣ್ಣ ಕಥೆಗಳು, ತುಳು ಕಾದಂಬರಿ, ವೈಚಾರಿಕ ಲೇಖನಗಳ ಪುಸ್ತಕ, ಸಂಶೋಧನಾ ಗ್ರಂಥಗಳು, ಮುಂತಾದವುಗಳು ಇವೆ. ಕಮಲಾ ಹಂಪನಾ ಅವರ ವಿಶಿಷ್ಠವಾದ ನೈತಿಕ ಮಾರ್ಗದರ್ಶನದ ಕೃತಿ “ಬಸಂತ” ಉಮಾ ರಾವ್ ಅವರ ಭೈರಪ್ಪನವರ ಕೃತಿ "ಪರ್ವ" ಅವರ ಕುರಿತು ಬರೆದ “ಎಂ.‌ಫಿಲ್ ಗ್ರಂಥ " “ಭೈರಪ್ಪನವರ ಪರ್ವ-ಆಯಾಮ ಮತ್ತು ಅನನ್ಯತೆ” ಡಾ ಜಿ. ಎನ್. ಉಪಾಧ್ಯಾಯರ ಮಾರ್ಗದರ್ಶ‌ನದಲ್ಲಿ ಮಾಡಿದ್ದು, ಅದರ ವಿಶಿಷ್ಟತೆಯ ಕುರಿತಾದ ಬರಹ, ಮುಂಬಯಿ ಕನ್ನಡ ರಂಗಭೂಮಿಯ ಇತಿಹಾಸ ಮತ್ತು ವಿಕಾಸ, ರಾಮಚಂದ್ರ ಉಚ್ವಿಲರ "ಪಂಪ ರಾಮಾಯಣ” ಡಾ ಮಮತಾ ರಾವ್ ಅವರು ಬರೆದಿರುವ “ಜಯಂತ ಕೈಕಿಣಿ ಕಥನಾವರಣ" ಮೊಗಸಾಲೆಯ ಅವರ ಕಾವ್ಯ ಪ್ರತಿಭೆ, ಸನದಿ ಅವರ ಕವಿತೆಗಳ ಅನುಸಂಧಾನ‌ ಕೃತಿ ನೋಟ‌ ಡಾ ವ್ಯಾಸರಾವ್ ನಿಂಜೂರ್ ಅವರ ಕಾದಂಬರಿ " ತೆಂಕನಿಡಿಯೂರಿನ ಕುಳವಾರಿಗಳು "ಡಾ ಜಿ.‌ಎನ್.‌ಉಪಾಧ್ಯಾಯರ ಸಂಶೋಧನಾ ಗ್ರಂಥ "ಅಮೋಘ ವ್ಯಕ್ತಿತ್ವದ ಸೊನ್ನಲಿಗೆಯ ಸಿದ್ಧರಾಮ" ಕಮಲಾ ಹಂಪನಾ ಅವರು ಬರೆದ ಸಂಶೋಧನಾ ಗ್ರಂಥ 'ಬಸಂತ’ ದಲ್ಲಿ ದಾಖಲೆಗೊಂಡ ಕರಾವಳಿಯ ರಾಣಿಯರ ಸಾಹಸ ಗಾಥೆಗಳ ದಾಖಲಾತಿಯ ವಿವರ, ಉಪೇಂದ್ರ ಸೋಮಯಾಜಿ ಅವರ ವಿಶಿಷ್ಟ ಕೃತಿ "ಹೆಣ್ಣೇ ನೀನೆಷ್ಟು ನತದೃಷ್ಟೆ' ಡಾ ವಿಶ್ವನಾಥ ಕಾರ್ನಾಡ್ ಅವರ ಮಹಾಪ್ರಬಂಧ " ಮುಂಬಯಿ ತುಳುವರ ವಲಸೆ "ತುಳಸಿ ವೇಣುಗೋಪಾಲ್ ಅವರ ಸಣ್ಣ ಕಥಾ ಸಂಕಲನ "ಮುಂಜಾವಿಗೆ ಕಾದವಳು" ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ ಕವಿತಾ ಸಂಕಲನಗಳು ಎಂ ಬಿ ಕುಕ್ಯಾನ್ ಅವರ "ಮೋಸದ ತಿರುವುಗಳು" ನಲ್ಲಿನ ಮುಂಬಯಿಯಲ್ಲಿ ಮೋಸ ಹೋದ ಕಥೆಗಳು "ಡಾ ಜಿ. ಎನ್. ಉಪಾಧ್ಯಾಯರ" ಕರ್ನಾಟಕ-ಸಂಸ್ಕೃತಿ ಹೆಜ್ಜೆ ಹಾದಿ" ಎಂಬ ಸಂಶೋಧನಾ ಗ್ರಂಥ, ಶಾಂತಾರಾಮ ಶೆಟ್ಟಿ ಅವರ ತುಳು ಕವಿತಾ ಸಂಕಲನ"ಮಣ್ಣ ಬಾಜನೊ(ದರಂಡ ಕರ ಒರಿಂಡ ಓಡು), ಪ್ರಕಾಶ ಕಡಮೆ ಅವರ "ಅಮ್ಮನಿಗೊಂದು ಕವಿತೆ" ರತ್ನಾಕರ ಶೆಟ್ಟಿ ಇವರ ಮರಾಠಿ ಸಾಹಿತ್ಯ ಕೃತಿಗಳ ಕನ್ನಡ ಅನುವಾದಗಳು, ಡಾ ಜಿ ಎನ್ ಉಪಾಧ್ಯಾಯರ "ಬೊಗಸಕ ತುಂಬಾ ಭಕ್ತಿ ಹಿಡಿದು" ಕುಸುಮಾಕರ ದೇವಗಣ್ಣೂರು ಇವರ. ಕೃತಿಗಳ ಪರಿಚಯ ವಿಶ್ಲೇಷಣೆ ಮಾಡಿದ ಗ್ರಂಥ, ಶಿವರಾಜ್ಎಂ‌ಜಿ ಅವರು ತೆರೆದಿಟ್ಟ ಗಾದೆಗಳ ಅಂತರಂಗ -ಬಹಿರಂಗ ರಾಘು ಪಿ ಶೆಟ್ಟಿ ಅವರ Tulunadu customs And Rituals"ಕೃತಿಯ ವಿಮರ್ಶಾ ಬರಹ, ವಾಸು ಬಿ ಪುತ್ರನ್ ಅವರ ಯಶೋಗಾಥೆ ಅನಸೂಯಾ ಗಲಗಲಿ ಅವರ "ಮಧುರ ಚೆನ್ನರ ಅಧ್ಯಯನದ ಹಾದಿಯಲ್ಲಿ" ಎಂ. ಫಿಲ್ ಸಂಪ್ರಬಂಧ ಅಶೋಕ ಸುವರ್ಣಾವರ ಮಹಾಕಾಳಿ ಕೇವ್ಸ್ ನ ರೋಚಕ ಕಥೆ" ಅಕ್ಷತರಾಜ್ ಪೆರ್ಲ ಅವರ ಪಣಿಯಾಡಿ ಪ್ರಶಸ್ತಿ ಪುರಸ್ಕೃತ ಕಾದಂಬರಿ "ಬೊಳ್ಳಿ"

ಡಾ. ದಾಕ್ಷಾಯಣಿ ಯಡಹಳ್ಳಿ ಇದರ "ಮೀರಾಬಾಯಿ ಮತ್ತು ಮತ್ತು ಅಕ್ಕ ಮಹಾದೇವಿ ಒಂದು ತೌಲನಿಕ ಅಧ್ಯಯನ" ಇದು ಪಿ.ಎಚ್.ಡಿಗೆ ವಿಷಯವಾಗಿ ಬರೆದ ಮಹಾಪ್ರಬಂಧ‌ ದಾಕ್ಷಾಯಣಿ ಯಡಹಳ್ಳಿ ಇವರ ಕವಿತಾ ಸಂಕಲನ "ಗುನುಗುನು" ತುಳು ಲಿಪಿಯಲ್ಲಿ ಪ್ರಕಟವಾದ ಮೊದಲ ತುಳು ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ "ಮಾದಿರ"ರತ್ನಾಕರ ಶೆಟ್ಟಿ ಇವರ ಹಾಯ್ಕುಗಳು ಡಾ. ಜನಾರ್ದನ‌ ಭಟ್ಟರು ಅನುವಾದಿಸಿದ ಪಾಶ್ಚಾತ್ಯಮಕ್ಕಳ ಕಥೆಗಳ ಲೋಕ" ಇಷ್ಟೆಲ್ಲಾ ಬರಹಗಳು ಈ ವಿಶಿಷ್ಟ ಗ್ರಂಥದಲ್ಲಿವೆ‌.

ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ್ಯ ಪ್ರಕಾರಗಳ ಬಗ್ಗೆ ಇರುವ ಆಳವಾದ ಜ್ಞಾನವನ್ನು ಅಭಿವ್ಯಕ್ತಿಸುತ್ತದೆ. ಸಂಶೋಧನಾ ಗ್ರಂಥಗಳಾಗಿರಲಿ, ಕಾದಂಬರಿಗಳಾಗಿರಲಿ ಸಣ್ಣ ಕಥೆಗಳಾಗಿರಲಿ ಕವಿತೆಗಳಾಗಿರಲಿ ಸಾಂಸ್ಕೃತಿಕ ಚಿಂತನ ಬರಹಗಳಾಗಿರಲಿ ಅವುಗಳ ಆಳಕ್ಕೆ ಇಳಿದು ತಮ್ಮದೆ ಒಳನೋಟಗಳನ್ನು ಅನನ್ಯವಾಗಿ ಅಭಿವ್ಯಕ್ತಿಸುವ ಪ್ರತ್ಯುನ್ನತ ಪ್ರತಿಭೆ ಈ ಬರಹಗಳಲ್ಲಿ ವ್ಯಕ್ತಗೊಂಡಿದ್ದುದು ವಿಶಿಷ್ಟವಾಗಿದೆ‌. ವಿಮರ್ಶಾ ಬರಹಗಳಿಗೆ ಮಾನದಂಡವಾಗಿ ಸಹೃದಯತೆ ಮತ್ತು ಚಿಕಿತ್ಸಕ ನಿಲುವು ಎದ್ದು ಕಾಣುವ ಸಂಗತಿಗಳಾಗಿವೆ‌.

ಪಾಶ್ಚಾತ್ಯ ತಾಂತ್ರಿಕ ಪರಿಕಲ್ಪನೆಗಳ ಗೋಜಿಗೆ ಹೋಗದೆ ಅಪ್ಪಟ ದೇಸೀಯ ಮೀಮಾಂಸೆಯ ತಕ್ಕಡಿಯಲ್ಲಿಟ್ಟು ಕೃತಿ ಮೌಲ್ಯಮಾಪನ ಮಾಡುತ್ತಾರೆ‌. ಬರಹಗಳು ಮೂಲ‌ ಕೃತಿಗಳನ್ನು ಓದುವಂತೆ ಪ್ರೇರೇಪಿಸುತ್ತವೆ. ಸರಳ ಭಾಷೆ ಆಕರ್ಷಕ ಪ್ರಸ್ತುತಿ ಬರಹಗಳ ಆಕರ್ಷಣೆಯಾಗಿದೆ‌. ನಮಗೆ ಗೊತ್ತಿಲ್ಲದ ಅನೇಕ ಕೃತಿಗಳ ಪರಿಚಯ ಈ ಕೃತಿಯಲ್ಲಿವೆ‌.

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಅತ್ಯುಪಯುಕ್ತವಾದ ಗ್ರಂಥ. ಈ ಗ್ರಂಥದಲ್ಲಿ ಎಲ್ಲ ಬರಹಗಳು ನನಗೆ ಇಷ್ಟವಾದವು. ಅವುಗಳಲ್ಲಿ ಡಾ ಮೊಗಸಾಲೆ ಅವರ ಕವಿತೆಗಳ ಕುರಿತಾದ ಬರಹ ಸುದೀರ್ಘವಾಗಿದೆ ಮತ್ತು ಕುತೂಹಲಕಾರಿಯಾಗಿದೆ. ಮೊಗಸಾಲೆ ಅವರ ಕಥನ ಕಾವ್ಯದ ವಿಶ್ಲೇಷಣೆ ಈ ಬರಹದಲ್ಲಿದೆ. ಈ ಬರಹ ತುಂಬ ಆಸಕ್ತಿಯನ್ನು ಹುಟ್ಟಿಸುವ ಕೃತಿಯಾಗಿದೆ‌ ಡಾ. ಜಿ. ಎನ್. ಉಪಾಧ್ಯಾಯರ ಸೊನ್ನಾಲಿ ಸಿದ್ಧರಾಮನ ಕುರಿತ ಸಂಶೋಧನಾ ಕೃತಿಯ ಕುರಿತಾಗಿ ಡಾ. ಪೂರ್ಣಿಮಾ ಬರೆದ ಬರಹ ತುಂಬ ಇಷ್ಟವಾಯ್ತು ಮಾದಿರ ಕಾದಂಬರಿ ತುಳುನಾಡಿನ ಭೂತಾರಾಧನೆಯ ಕುರಿತಾದ ಕಾದಂಬರಿಯ ವಿಶಿಷ್ಟತೆಯನ್ನು ಬಲು ಸೊಗಸಾಗಿ ಅನಾವರಣಗೊಳಿಸಿದ್ದಾರೆ‌. ಸಾಹಿತ್ಯಾಸಕ್ತರು ಓದಿ ಆನಂದಿಸಬೇಕಾದ ವಿಮರ್ಶಾ ಗ್ರಂಥ ಇದಾಗಿದೆ‌.

-ಉದಯ್ ಕುಮಾರ್ ಹಬ್ಬು

MORE FEATURES

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...

ವೃತ್ತಿಜೀವನದ ನೆನಪುಗಳ ಸಂಕಲನ 'ಉಳಿದಾವ ನೆನಪು'

03-05-2024 ಬೆಂಗಳೂರು

‘ಜಗತ್ತಿನಲ್ಲಿ ನಿತ್ಯವೂ ಏನಾದರೂ ಒಂದು ಹೊಸದು ಆಗುತ್ತಲೇ ಇರುತ್ತದೆ. ಅದನ್ನೆಲ್ಲ ಪತ್ರಿಕೆಗಳ ಮೂಲಕ ಓದುಗರಿಗೆ ತಲ...