ಎನ್. ಕೆ. ಮೋಹನ್ ರಾಂ ಅವರ ಹುಸೇನಿ ಬ್ರಾಹ್ಮಣರು ಕೃತಿಯ ಕುರಿತು ಬರಹಗಾರ ಕುಮಾರ್ ಹೆಚ್.ಸಿ.ಹೊಳೆನರಸೀಪುರ ಅವರು ಬರೆದ ಲೇಖನ ನಿಮ್ಮ ಓದಿಗಾಗಿ.
ಕೃತಿ: ಹುಸೇನಿ ಬ್ರಾಹ್ಮಣರು
ಲೇಖಕರು: ಎನ್. ಕೆ. ಮೋಹನ್ ರಾಂ
ಪುಟ: 84
ಬೆಲೆ: 80
ಮುದ್ರಣ: 2022
ಪ್ರಕಾಶನ: ಆಕ್ರಾಂತ ಪ್ರಕಾಶನ
ಸಾಮರಸ್ಯದ ಸಹಜ ಮನಸ್ಥಿತಿಗಳು ಹೇಗಿದ್ದವು? ಅವುಗಳನ್ನು ನಿಧಾನವಾಗಿ ಮೂಲಭೂತ ನಡವಳಿಕೆಗಳು ಹೇಗೆ ಹೊಸಕಿ ಹಾಕಿದವು? ಎಂಬುದರ ಬಗ್ಗೆ ಐತಿಹಾಸಿಕ ದಾಖಲೆಗಳ ಜೊತೆ ಸಂವಾದಿಸಿ ಬರೆದಿದ್ದಾರೆ ಎನ್ ಕೆ ಮೋಹನ್ ರಾಂ ತಮ್ಮ " ಹುಸೇನಿ ಬ್ರಾಹ್ಮಣರು " ಪುಸ್ತಕದಲ್ಲಿ. ಅದರೊಳಗಿನ ನನಗೆ ಅಚ್ಚರಿ ಅನಿಸಿದ ಅಂಶಗಳನ್ನು ಇಲ್ಲಿ ಬರೆದಿದ್ದೇನೆ. ಓದುಗರ ಅವಗಾಹನೆಗೆ.
ನಿಮಗೆ ಮಕ್ಕಳಾಗದು ಎಂಬ ಪ್ರವಾದಿ ಪೈಗಂಬರ್ ರವರ ಭವಿಷ್ಯವನ್ನು ಮೀರಿ ಅವರ ಮೊಮ್ಮಗ ಇಮಾಮ್ ಹುಸೇನ್ ಬಾಗ್ದಾದಿನ ಆಲ್ ಹಿಂದಿಯಾ ಪ್ರದೇಶದಲ್ಲಿ ನೆಲೆಸಿದ್ದ ರಹಬ ದತ್ತ ಎಂಬ "ಬ್ರಾಹ್ಮಣ"ನಿಗೆ ಮಕ್ಕಳಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆ ನಂತರ ರಹಬ ದತ್ತ 7 ಗಂಡು ಮಕ್ಕಳ ತಂದೆಯಾಗುತ್ತಾನೆ.
ಇರಾಕ್ ಬಳಿಯ ಕುಫಾ ನಗರಕ್ಕೆ ಹೋಗುವ ದಾರಿಯ ಯೂಫ್ರಟಿಸ್ ನದಿಯ ಬಳಿ ಇಮಾಮ್ ಹುಸೇನರನ್ನು ಯಾಝಿದ್ನ ಸೈನ್ಯ ಸುತ್ತುವರಿದಿದೆ. ಈ ಸುದ್ದಿ ಕೇಳಿದ ರಹಬ ದತ್ತ ತನ್ನ ಸೈನ್ಯದ ಸಮೇತ ಧಾವಿಸಿ ಬರುತ್ತಾನೆ. ಅಷ್ಟರಲ್ಲಿ ಬರ್ಬರವಾಗಿ ಇಮಾಮರ ಹತ್ಯೆ ಆಗಿರುತ್ತದೆ. ಇದೇ ಪ್ರಸಿದ್ದ ಕರಬಾಲ ಬಲಿದಾನ.
ಅನಾಥವಾಗಿ ಬಿದ್ದಿದ್ದ ಇಮಾಮರ ರುಂಡವನ್ನು ತೆಗೆದುಕೊಂಡ ರಬಹದತ್ತ ಡೆಮಾಸ್ಕಸ್ ಕಡೆಗೆ ದೌಡಾಯಿಸುತ್ತಾನೆ. ಅವನನ್ನು ಹಿಂಬಾಲಿಸಿದ ಯಾಜಿದ್ ನ ಸೈನಿಕರಿಗೆ ತನ್ನ ಮಕ್ಕಳ ತಲೆಯನ್ನು ಕಡಿದು ನೀಡಿ ಇದೇ ಇಮಾಮರ ರುಂಡ ಎನ್ನುತ್ತಾನೆ. ಆ ಸೈನಿಕರು ನಿರ್ಗಮಿಸಿದ ಮೇಲೆ ಡೆಮಾಸ್ಕಸ್ ನಲ್ಲಿ ಅವರ ರುಂಡವನ್ನು ಗೌರವಯುತವಾಗಿ ದಫನ್ ನಡೆಸುತ್ತಾನೆ. ಇದು ಐತಿಹಾಸಿಕವಾಗಿ ಸತ್ಯ ಘಟನೆ. ಈ ಯುದ್ಧದ ನಂತರವೇ ಮುಸ್ಲಿಂ ಧರ್ಮದಲ್ಲಿ ಶಿಯಾ ಸುನ್ನಿಗಳೆಂಬ ಒಡಕು ಉಂಟಾಗಿದ್ದು.
ನಂತರ ಇಮಾಮರ ಶಿಷ್ಯ ಅಮೀರ್ ಮುಕ್ತಿಯಾರ್ ನೇತೃತ್ವದಲ್ಲಿ ಯಾಜಿದ್ ರನ್ನು ಸೋಲಿಸಿ ತಮ್ಮ ಗುರುಗಳ ಹತ್ಯೆಯ ಸೇಡು ತೀರಿಸಿಕೊಳ್ಳುತ್ತಾರೆ. ಈ ಯುದ್ಧದಲ್ಲಿ ವೀರಾವೇಶದಲ್ಲಿ ಹೋರಾಡಿದ್ದು ರಹಬ ದತ್ತ!!. ಅವನ ನಂತರದವರೇ "ಇಮಾಮ್ ಬ್ರಾಹ್ಮಣರು"
ಶಿಯಾ ಪಂಥದ ನಾಯಕರು ತಮ್ಮ ಅನುಯಾಯಿಗಳಿಗೆ ನಿತ್ಯದ ಪ್ರಾರ್ಥನೆಯಲ್ಲಿ ರಹಬದತ್ತನ ಹೆಸರು ಪಠಿಸುವಂತೆ ಆದೇಶ ನೀಡಿದ್ದರು!.
* ಅಂಬಿ ಮತ್ತು ಪೋರಸ್ ಇಬ್ಬರೂ "ಮೊಹೈಲ್ ಬ್ರಾಹ್ಮಣರು" ( ರಹಬ ದತ್ತ ಕೂಡಾ)
* ರಹಬ ದತ್ತನ ತಾತ ಬಾಗ್ದಾದ್‌ನ ಸಂತನೆಂದು ಹೆಸರಾಗಿದ್ದ.
* ಭಾರತವನ್ನು ಲೂಟಿ ಮಾಡಿದ್ದ ಘಜ್ನಿ ಮೊಹಮದನ ಪೂರ್ವಜರೂ ಹಿಂದೂಗಳಾಗಿದ್ದರು!!!
* ಇಮಾಮ್ ಹುಸೇನರ ಪತ್ನಿಯೊಬ್ಬರು ಹಿಂದೂ ಆಗಿದ್ದರು ಇವರಿಂದ ಹುಟ್ಟಿದ ಮಕ್ಕಳೇ ಮುಂದಿನ ವಂಶಜರಾಗಿ ಹೆಸರಾದವರು (6 ನೇ ಶತಮಾನ)
* ಕರಬಾಲ ಯುದ್ದದ ಸಮಯದಲ್ಲಿ ಹುಸೇನರಿಗೆ ಭಾರತಕ್ಕೆ ಬಂದು ನೆಲಸುವಂತೆ ಪತ್ರವೊಂದನ್ನು ಹಿಂದೂ ರಾಜರೊಬ್ಬರು ಕಳುಹಿಸಿದ್ದರು. ಅವರು ವರಸೆಯಲ್ಲಿ ಇಮಾಮರಿಗೆ ಷಡ್ಢಕ!!!. ಇದನ್ನು ಒಪ್ಪಿದ ಇಮಾಮರು ಯಾಜಿದ್ ಸೈನಿಕರಿಗೆ ಹೇಳುತ್ತಾರೆ ನೀವು ಮುತ್ತಿಗೆ ಹಿಂಪಡೆದರೆ ನಾನು ಹಿಂದೂಸ್ತಾನಕ್ಕೆ ಹೋಗುವೆ!!!
* ಇಮಾಮರ ಹತ್ಯೆಯಿಂದ ಘಾಸಿಗೊಂಡ ಆ ಹಿಂದೂ ರಾಜ ಎರಡು ದಿನ ಊಟ ಮಾಡದೆ ನಂತರ ತನ್ನ 3000 ಸೈನಿಕರನ್ನು ಅವರ ಹತ್ಯೆಗೆ ಸೇಡು ತೀರಿಸಲು ಭಾರತದಿಂದ ಕಳುಹಿಸಿದನಂತೆ!!!. ಆ ಸೈನ್ಯ ಸಿರಿಯಾಗೆ ಬಂದು ಬೀಡು ಬಿಟ್ಟಿದ್ದ ಜಾಗವನ್ನು ಈಗಲೂ "ಹಿಂದ್ "ಎನ್ನುತ್ತಾರೆ.(ಚಾಚ್ ನಾಮಾ ಪುಸ್ತಕದ ದಾಖಲೆ)
9 ನೇ ಶತಮಾನದವರೆಗೂ ಇಸ್ಲಾಂ ಮುಕ್ತವಾದ ಧಾರ್ಮಿಕ ನಡವಳಿಕೆಯನ್ನು ಹೊಂದಿತ್ತು. ಎ. ಫೈಜರ್ ರೆಹಮಾನರ ಪ್ರಕಾರ ಮುಸ್ನಾರ್ ಪಂಥದ ಮೂಲಕ ಮೂಲಭೂತತೆ ಅದರೊಳಗೆ ಕಾಲಿಟ್ಟಿತು.
ಇದೇ ರೀತಿಯ ಹಲವಾರು ಸಾಮರಸ್ಯದ ಚರಿತ್ರೆಯ ದಾಖಲುಗಳೊಂದಿಗೆ 80 ಪುಟಗಳ ಈ ಪುಸ್ತಕ ನಮ್ಮೊಳಗೆ ಒಂದು ಸಮರಸದ ಭಾವವನ್ನು ಹುಟ್ಟುಹಾಕುವುದರಲ್ಲಿ ಆಶ್ಚರ್ಯವಿಲ್ಲ.
- ಕುಮಾರ್ ಹೆಚ್.ಸಿ.ಹೊಳೆನರಸೀಪುರ
ಎನ್. ಕೆ. ಮೋಹನ್ ರಾಂ ಅವರ ಲೇಖಕ ಪರಿಚಯ..
ಹುಸೇನಿ ಬ್ರಾಹ್ಮಣರು ಕೃತಿ ಪರಿಚಯ..
“ಕಥೆಗಳು ಹುಟ್ಟುವುದು ಜೀವನಾನುಭವದಿಂದ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ನಾನು ಗಂಭೀರವಾಗಿ ಕಥೆಗಳನ್ನು ಬರೆಯ...
“ಮನುಷ್ಯನಿಗೆ ಪ್ರೀತಿಸುವುದು ಸಾಧ್ಯವಾಗಲು ಧೈರ್ಯಬೇಕು, ಧಾರಾಳತನಬೇಕು- ತುಸು ಬೋಳೇತನವೂ ಅವನಲ್ಲಿರಬೇಕು. ಈ ಮೂರೂ...
“ಮಹಾಭಾರತದ ಕತೆಯಲ್ಲಿ ಎಲ್ಲಿಯೂ ಭಾನುಮತಿಯ ಹೆಸರು ಪ್ರಸ್ತಾಪವಾದಂತೆ ಕಾಣುವುದಿಲ್ಲ. ಪಂಪಭಾರತದ ಒಂದು ಪದ್ಯವು ...
©2023 Book Brahma Private Limited.