ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ


‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗೂಢವಾದ ತತ್ತ್ವಶಾಸ್ತ್ರದ ಆಗರವೆಂದು ಉಪನಿಷತ್ತುಗಳನ್ನು ಶ್ಲಾಘಿಸುವ ಪದ್ಧತಿಗೆ ಭಿನ್ನವಾಗಿ ಚಾರಿತ್ರಿಕ ದೃಷ್ಟಿಯಿಂದ ಅವನ್ನು ಅವಲೋಕಿಸುವುದು ಇಲ್ಲಿಯ ಉದ್ದೇಶ’ ಎನ್ನುತ್ತಾರೆ ಜಿ. ರಾಮಕೃಷ್ಣ. ಅವರು ‘ಉಪನಿಷತ್ತು ಒಂದು ಸ್ಥೂಲ ನೋಟ' ಗ್ರಂಥಕ್ಕೆ ಬರೆದ ಲೇಖಕರ ಮಾತು ಇಲ್ಲಿದೆ.

ನವಕರ್ನಾಟಕ ಪ್ರಕಾಶನವು ಹೊರತರುವ 'ಹೊಸತು' ಮಾಸಪತ್ರಿಕೆಯು ಪ್ರಸ್ತುತ ಇಪ್ಪತ್ತೈದನೆಯ ವರ್ಷಕ್ಕೆ ಕಾಲಿರಿಸಿದೆ. ಅದರ ಜನವರಿ 2021ರಿಂದ ಜನವರಿ 2022ರ ಸಂಚಿಕೆಯವರೆಗೆ ಪ್ರತಿ ತಿಂಗಳೂ ಉಪನಿಷತ್ತುಗಳನ್ನು ಕುರಿತ ನನ್ನ ಒಂದು ಲೇಖನವಿರುತ್ತಿತ್ತು. ಹೀಗೆ ಕೆಲವು ಉಪನಿಷತ್ತುಗಳ ಸ್ಕೂಲ ಪರಿಚಯ ಮಾಡಿಕೊಡುವುದಕ್ಕೆ ಮುಂಚೆ ನಾನು ಋಗ್ವದ, ಭಗವದ್ಗೀತೆ, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಮನುಸ್ಮೃತಿ ಎಂಬ ಪ್ರಾಚೀನ ಭಾರತದ ಮಹತ್ವದ ಗ್ರಂಥಗಳನ್ನು ಕುರಿತು 'ಹೊಸತು'ವಿನಲ್ಲಿ ಲೇಖನಮಾಲೆಗಳನ್ನು ಬರೆದಿದ್ದು ಅವನ್ನು ನಂತರ ನವಕರ್ನಾಟಕ ಪ್ರಕಾಶನವು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಈಗ ಉಪನಿಷತ್ತುಗಳ ಬಗೆಗಿನ ಲೇಖನಗಳನ್ನು ಸಹ ಹೊರತರುವ ಸಾಹಸಕ್ಕೆ ಕೈ ಹಾಕಿದೆ. ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಎ. ಆರ್. ಉಡುಪ ಮತ್ತು ಡಾ. ಸಿದ್ದನಗೌಡ ಪಾಟೀಲ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಮೊದಲಿಗೆ ಲೇಖನ ರೂಪದಲ್ಲಿ ಪ್ರಕಟಿಸಿದ್ದ 'ಹೊಸತು' ಪತ್ರಿಕೆಯ ಸಂಪಾದಕ ಮಂಡಲಿಗೆ ಸಹ ನಾನು ಆಭಾರಿಯಾಗಿದ್ದೇನೆ. ಅಂತೆಯೇ ಓದುಗ ಬಳಗಕ್ಕೆ ಮತ್ತು ನವಕರ್ನಾಟಕದ ಬಳಗಕ್ಕೆ ನನ್ನ ವಂದನೆಗಳು ಸಲ್ಲುತ್ತವೆ.

ಇದು ಕೆಲವು ಪ್ರಮುಖ ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗೂಢವಾದ ತತ್ತ್ವಶಾಸ್ತ್ರದ ಆಗರವೆಂದು ಉಪನಿಷತ್ತುಗಳನ್ನು ಶ್ಲಾಘಿಸುವ ಪದ್ಧತಿಗೆ ಭಿನ್ನವಾಗಿ ಚಾರಿತ್ರಿಕ ದೃಷ್ಟಿಯಿಂದ ಅವನ್ನು ಅವಲೋಕಿಸುವುದು ಇಲ್ಲಿಯ ಉದ್ದೇಶ. ಸುಮಾರು 3500 ವರ್ಷಗಳ ಹಿಂದೆಯೇ ರಚಿತವಾದ ಉಪನಿಷತ್ತುಗಳು ಮಾನವ ಮತ್ತು ಪ್ರಕೃತಿಯ ಅವಲೋಕನವನ್ನು ಗಂಭೀರವಾಗಿ ಕೈಗೆತ್ತಿಕೊಂಡಿವೆ. ಅವು ಯಾವ ದಿಕ್ಕಿನಲ್ಲಿ ತಮ್ಮ ಚಿಂತನೆಯನ್ನು ಬೆಳೆಸಿವೆ ಎಂಬ ವಿಚಾರವನ್ನು ವಸ್ತುನಿಷ್ಠವಾಗಿ ವಿವೇಚಿಸುವ ಪ್ರಯತ್ನ ಇಲ್ಲಿ ನಡೆದಿದೆ. ಅಭಿಪ್ರಾಯಗಳನ್ನು ಒರೆಗೆ ಹಚ್ಚಿ ನೋಡುವ ಓದುಗರಿಗೆ ಇದು ಸ್ವಾಗತಾರ್ಹ ಕೈಪಿಡಿಯಾಗುತ್ತದೆಂದು ಭಾವಿಸುತ್ತೇನೆ. ನಿಮ್ಮ ವಿಮರ್ಶೆಗೆ ಸದಾ ಸ್ವಾಗತವಿದೆ.

-ಜಿ. ರಾಮಕೃಷ್ಣ

MORE FEATURES

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...