ಕನ್ನಡ ನೆಲದಲ್ಲಿ ಸೌಹಾರ್ದ ಬದುಕಿನ ಹೊಸ ಮಾದರಿಗಳ ಹುಡುಕಾಟ, ಬಿತ್ತನೆ ಬೇಕಿಲ್ಲ, ಈಗಾಗಲೇ ಹಾಸುಹೊಕ್ಕಾಗಿರುವ ಸಾಮರಸ್ಯ ಬದುಕಿನ ನಿದರ್ಶನಗಳನ್ನು ಹೊರೆಕಟ್ಟಿ ಮುನ್ನೆಲೆಗೆ ಹೊತ್ತು ತರಬೇಕಿದೆ ಅಷ್ಟೇ ಅಂತಹದೊಂದು ಪ್ರಾಮಾಣಿಕ ಪ್ರಯತ್ನವನ್ನು ‘ಅಂಕುರ ಪ್ರಕಾಶನ’ ತನ್ನದೇ ರೀತಿಯಲ್ಲಿ ನಿರ್ವಹಿಸುತ್ತಿದೆ.
ಕನ್ನಡ ನಾಡಿನ ಕೋಮು ಸೌಹಾರ್ದ ಕದಡುವ ಬಗೆಬಗೆಯ ಉದ್ದೇಶಪೂರ್ವಕ ಪ್ರಯತ್ನಗಳು ವಿಪರೀತ ಸದ್ದು ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ನಡುವಿನ ಭಾವೈಕ್ಯ ಬದುಕು ಮಸುಕಾದಂತೆ, ಬಾಡಿದಂತೆ ಕಾಣುತ್ತಿದೆ. ಹಾಗಾಗಿ ಈ ನೆಲದಲ್ಲಿ ಹಾಸುಹೊಕ್ಕಾಗಿರುವ ಸೌಹಾರ್ದ ಬದುಕಿನ ಅಸ್ತಿತ್ವವನ್ನು ನೆನಪಿಸುವ, ಗುರುತಿಸುವ, ಗಟ್ಟಿಗೊಳಿಸುವ, ಮನನ ಮಾಡಿಕೊಳ್ಳುವ, ದಿಟ್ಟದನಿಯಲ್ಲಿ ಸಾರುವ ಅನುಭವ ಲೇಖನ ಸಂಕಲನಗಳನ್ನು, ಕೃತಿಗಳನ್ನು ಬೆಂಗಳೂರಿನ ‘ಅಂಕುರ ಪ್ರಕಾಶನ’ ಪ್ರಕಟಿಸುತ್ತಿದೆ.
©2024 Book Brahma Private Limited.