ಅಕ್ಷಯ ನೇತ್ರ

Author : ರವೀಂದ್ರ ಭಟ್ಟ

Pages 112

₹ 95.00
Year of Publication: 2012
Published by: ಅಂಕುರ ಪ್ರಕಾಶನ
Address: #656, 2ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು-560072
Phone: 9448520414

Synopsys

ಲೇಖಕ ರವೀಂದ್ರ ಭಟ್ಟ ಅವರ ‘ಅಕ್ಷಯ ನೇತ್ರ’ ಕೃತಿಯು ಕತಾಸಂಕಲನವಾಗಿದೆ. ಅಕ್ಷಯ ನೇತ್ರ ಅಂಧನೊಬ್ಬನ ಆತ್ಮೀಯ ಕತೆಯಾಗಿದೆ. ಇಲ್ಲಿ ಲೇಖಕ ಜೀವನದ ಅಳಲನ್ನು ಕಟ್ಟಿಕೊಟ್ಟ ರೀತಿ ಭಿನ್ನವಾಗಿದೆ. ಅಂಧರ ಬದುಕಿನ ನೋಟ, ಅವರ ಜೀವನದಲ್ಲಿ ಬರುವಂತಹ ಕಷ್ಟಗಳು, ಅದನ್ನು ನಿವಾರಿಸಿಕೊಂಡು ಬದುಕುವ ಛಲ ಹೀಗೆ ಅನೇಕ ವಿಚಾರಗಳು ಇಲ್ಲಿ ಪ್ರಮುಖವೆನ್ನಿಸುತ್ತದೆ.

About the Author

ರವೀಂದ್ರ ಭಟ್ಟ
(07 July 1967)

ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು.  ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...

READ MORE

Related Books