ಐದು ವರ್ಷಗಳ ಹಿಂದೆ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಸ್ಥಾಪನೆಗೊಂಡ ಸಂಸ್ಥೆ ಕಾಚಕ್ಕಿ ಪ್ರಕಾಶನ. ಕಾವ್ಯ ಕಮ್ಮಟವನ್ನು ಏರ್ಪಡಿಸಬೇಕೆಂಬ ಉತ್ಸಾಹದಿಂದ ಎಮ್. ಎನ್ ವೇಣುಕುಮಾರ, ಶ್ರೀಶ್ ಹುಟಗಿ, ಮಹೇಶ ಶಾಂತಗೇರಿ, ಚೇತನ ನಾಗರಾಳ ಮತ್ತು ಲಕ್ಷ್ಮಣ ಬಡಿಗೇರ ಅವರ ಸಾರಥ್ಯದಲ್ಲಿ 2018 ಡಿಸೆಂಬರ್ 23, 24 ರಂದು ಗದಗಿನ ಹುಲುಕೋಟಿಯಲ್ಲಿ ಎರಡು ದಿನಗಳು ಕಾಲ ಕಮ್ಮಟ ನಡೆಯಿತು. 2019 ಮೇ 12, 13 ರಂದು ತುಮಕೂರಿನ ಕುಣಿಗಲ್ ನಲ್ಲಿ ಕಮ್ಮಟ ಅಭೂತಪೂರ್ವ ಯಶಸ್ಸು ಕಂಡಿತು. 2021 ಜುಲೈ 11ರಂದು ಐದು ಪುಸ್ತಕಗಳನ್ನು ಉತ್ತರ ಕನ್ನಡದ ಸಿದ್ದಾಪುರ ದಲ್ಲಿ ಬಿಡುಗಡೆ ಮಾಡಿತು. ಒಂದು ವರ್ಷದ ಅವಧಿಯಲ್ಲಿ ಎಂಟು ಕೃತಿಗಳನ್ನು ಹೊರತರುವಷ್ಟು ತಕ್ಕಮಟ್ಟಿಗೆ ಯಶಸ್ಸು ಕಂಡಿತು.
©2023 Book Brahma Private Limited.