ಪಚ್ಚೆಯ ಜಗುಲಿ

Author : ಆರ್. ದಿಲೀಪ್ ಕುಮಾರ್

Pages 128

₹ 175.00




Year of Publication: 2021
Published by: ಕಾಚಕ್ಕಿ ಪ್ರಕಾಶನ
Address: #72, ದೈವ ಕೃಪಾ, ಡಿ ಗ್ರೂಪ್ ಬಡಾವಣೆ, ಕೆ.ಆರ್‍.ಎಸ್ ಅಗ್ರಹಾರ, ಕುಣಿಗಲ್, ತುಮಕೂರು-572130
Phone: 8660788450

Synopsys

'ಪಚ್ಚೆಯ ಜಗುಲಿ’ ಲೇಖಕ, ವಿಮರ್ಶಕ ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಲೇಖನಗಳ ಸಂಕಲನ. ಕೃತಿಗೆ ಹಿರಿಯ ವಿಮರ್ಶಕ ಜಿ.ಎಚ್. ನಾಯಕ ಅವರು ಮುನ್ನುಡಿ ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರನ ಕುರಿತು ಬರೆಯುತ್ತಾ ‘ಪಂಪನ ಶ್ರೇಷ್ಠಾತಿಶ್ರೇಷ್ಠ ಆದಿಪುರಾಣ, ವಿಕ್ರಮಾರ್ಜುನ ವಿಜಯ ಈ ಎರಡು ಮಹಾಕೃತಿಗಳನ್ನು ಕುರಿತು ಬರೆದಿರುವ ಎಳೆಯ ತಲೆಮಾರಿನ ಈ ಸಾಹಿತ್ಯ ವಿಮರ್ಶಕ ಕನ್ನಡ ಸಾಹಿತ್ಯ ವಿಮರ್ಶೆಯ ರಂಗಕ್ಕೆ ಕೊಟ್ಟಂತಹ ಬಹುದೊಡ್ಡ ವಿಮರ್ಶಕಾ ಕೃತಿ ಇದಾಗಿದೆ ಎಂದಿದ್ದಾರೆ'. ಜೊತೆಗೆ ದಿಲೀಪ್ ಕುಮಾರ್ ಅವರು 'ಪಚ್ಚೆಯ ಜಗುಲಿ’ ಕೃತಿಯ ಮೂಲಕ ವಿಮರ್ಶಾಕ್ಷೇತ್ರವನ್ನು ಪ್ರವೇಶ ಮಾಡುತ್ತಿರುವ ಪ್ರತಿಭಾಶಾಲಿ ಎಂದಿದ್ದಾರೆ. ಈ ಎಳೆಯ ವಿಮರ್ಶಕನ ಸ್ವೋಪಜ್ಞ ಹೊಳಹು, ಒಳನೋಟ, ಸದಭಿರುಚಿ, ಸಮನ್ವಿತರಾಗಿರುವ ಸಾಹಿತ್ಯ ವಿಮರ್ಶೆಯನ್ನು ಈ ಕೃತಿ ಒಳಗೊಂಡಿದ್ದು, ಲೇಖಕನಿಗೆ ಪಚ್ಚೆಯ ಜಗಲಿ ಶೀರ್ಷಿಕೆ ಹೊಳೆದದ್ದು ಅಂತಃಪ್ರಜ್ಞೆಯ ಹೊಳಹಿನಂತಿದೆ, ಈ ಶೀರ್ಷಿಕೆ ಸಾರ್ಥಕವಾಗಿದೆ ಎನ್ನುತ್ತಾರೆ. ಅಲ್ಲದೇ ವಿಶೇಷ ಧ್ವನಿಪೂರ್ಣತೆಯಿಂದ ಕೂಡಿ ಸಮರ್ಪಕವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 

About the Author

ಆರ್. ದಿಲೀಪ್ ಕುಮಾರ್
(16 March 1991)

ಆರ್. ದಿಲೀಪ್ ಕುಮಾರ್ ಅವರ ಹುಟ್ಟಿದ್ದು1991 ರ ಮಾರ್ಚ್ 16ರಂದು ಮೈಸೂರಿನಲ್ಲಿ. ಮೈಸೂರುನಲ್ಲಿ ಕೆಲವು ಕಾಲ ಇದ್ದು ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿ ಶಿಕ್ಷಣವನ್ನು ಸರಕಾರಿ ಪದವಿ ಕಾಲೇಜು ಚಾಮರಾಜನಗರದಲ್ಲೂ, ಕನ್ನಡ ಸ್ನಾತಕೋತ್ತರದ ಪದವಿಯನ್ನು ಕನ್ನಡ ಸ್ನಾತಕೋತ್ತರ ಕೇಂದ್ರ , ಜೆ ಎಸ್ ಎಸ್ ಕಾಲೇಜು , ಚಾಮರಾಜನಗರದಲ್ಲೂ, ಬಿ ಎಡ್ ಪದವಿಯನ್ನು ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ ಚಾಮರಾಜನಗರದಲ್ಲೂ ಪಡೆದಿದ್ದಾರೆ. ನಾಲಕ್ಕು ವರ್ಷಗಳು ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ...

READ MORE

Related Books