ಚಾಂದ್ ಪಾಷ ಎನ್.ಎಸ್.(ಕವಿಚಂದ್ರ) ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಮೇ ತಿಂಗಳ 1994ರಲ್ಲಿ ಜನಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
ಕತ್ತಲ ನುಂಗಿ ಬೆಳಕ ಉಗುಳುವ ಕಾರ್ಖಾನೆಯಂತ ಹಣತೆಗೂ ಬೆನ್ನು ನೋವು ಬರುವ ಹೊತ್ತಲ್ಲಿ,
ಸ್ವರ್ಗದೂರಿನ ಕಲ್ಲಿಗೆ ಎಡವಿ ಸತ್ತವಳ ಆತ್ಮವೊಂದು ನೆಲಕೆ ಬಿದ್ದಿತು!
ಕಣ್ಣು ತುಂಬಾ ಕನಸ ತುಂಬಿಕೊಂಡಿದ್ದ ಆತ್ಮದ ನನಸುಗಳೆಲ್ಲ, ಥೇಟ್ ಶಿಲುಬೆಗೇರಿದ ದಯಾಮಯಿಯ ದಾರುಣ ಕತೆಯಂತೆ
ನೋವು ಕ್ಷಮಿಸಿದರ...
ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲ,
ಬಹುಶಃ ನನ್ನದೆಯ ವಿಳಾಸ ಮರೆತಿರಬಹುದು.
ನನ್ನೂರಿಗೆ ಒಂದಿಷ್ಟು ಬಿಸಿಲಾದರೂ ಕಳಿಸಿ ಕೊಡು,
ಚಳಿಗಾಲದ ನಿನ್ನ ನೆನಪಿಗೆ ಬಿಸಿಯಾದರೂ ತಾಕಲಿ
ಹೂ ಬಿಟ್ಟ ಮಳೆ ಹನಿಗೆ ನಿನ್ನ ಘಮಲಿನ ತೇವವಾದರೂ ಸೋಕಲಿ!
ಸುಟ್ಟು ಕರಕಲಾ...
ಒಂದು ಗಾಢವಾದ ಮೌನ ಗಲಾಟೆ ಮಾಡುತ್ತಿದೆ,
ನಮ್ಮಿಬ್ಬರ ಎದೆಯ ಗೂಡಲಿ.
ನೆನ್ನೆ ಹುಟ್ಟಿದ ಸೂರ್ಯ
ಇಂದು ಇದ್ದಿಲಾಗಿರಲು, ದೀಪದೆಣ್ಣೆಗೂ ಸಾವಿನ ತವಕ.
ಮಾತು ಹುಟ್ಟುವ ತನಕ ಬಿಗಿದಿಡು ಬಸಿರನು, ಲೋಕ ಹುಟ್ಟದ ಹಾಗೆ !
ತೊಟ್ಟು ಕಳಚುವ ಆಟದಲಿ ಬೆರಳುಗಳೇ ಸವೆಯಲಿ,
ಬೀದಿಗೊಂದು...