Story/Poem

ಹರವು ಸ್ಫೂರ್ತಿಗೌಡ

ಕವಿ, ಪತ್ರಕರ್ತೆ ಹರವು ಸ್ಫೂರ್ತಿಗೌಡ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಬ್ಬು’, ‘ಕೋಳಿ ಅಂಕ’ ಸಾಕ್ಷಿಚಿತ್ರ ನಿರ್ದೇಶನ. ಕನ್ನಡ ಪುಸ್ತಕ ಪ್ರಾದಿಕಾರದಿಂದ ‘ಹುಣಸೆ ಹೂ’ ಮೊದಲ ಕವನ ಸಂಕಲನ ಪ್ರಕಟಣೆ, ‘ಋಣ’ ಅವರ ಎರಡನೆ ಕವನ ಸಂಕಲನ, ಸೂಲಂಗಿ ಕಾದಂಬರಿ ಅಚ್ಚಿನಲ್ಲಿದೆ. ಜನಶ್ರೀ, ಪ್ರಜಾಟಿವಿ, ಬಿಗ್ ಬಾಸ್, ಸೂಪರ್ ಮಿನಿಟ್, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಣೆ. ಸದ್ಯ ಪ್ರಜಾವಾಣಿಯಲ್ಲಿ ಉಪ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author

Story/Poem

ಕಾಡಾತ್ಮ

ಅಚ್ಚ ಹಸಿರ ಸುತ್ತಲ, ಕೆಂಪು ಮಣ್ಣಿನ ಮನೆಗಳು, ಬೀಡಿ ಸೊಪ್ಪಿನ ಚೂರು, ಹೊಗೆ ಸೊಪ್ಪಿನ ದಟ್ಟ ಗಾಟು, ಬೀಡಿ ಸುತ್ತುವ ಕನಕ ಬಣ್ಣದ ದಾರ, ಅಲ್ಲಲ್ಲಿ ಉದುರಿದ ಗೇರು ಹಣ್ಣು ಅವುಗಳ ಮೇಲೆ ಆಗ ತಾನೆ ಲಾಳ ಕಟ್ಟಿಸಿಕೊಂಡು ಬಂದ ಹಸುಗಳ ತುಳಿತ.. ಕಾಡು, ಕಾಡ ನಡುವೆ ಮಾನವ ವಾಸ್ತ್ಯಗಳ ಸುಳುಹು ಮತ್ತೆ ಯಾ...

Read More...