Story/Poem

ಜಯಂತ ಕಾಯ್ಕಿಣಿ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ, ವಿಚಿತ್ರಸೇನನ ವೈಖರಿ (ಕವನ ಸಂಕಲನಗಳು), ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್ , ಚಾರ್ ಮಿನಾರ್, ಅನಾರ್ಕಲಿಯ ಸೇಫ್ಟಿ ಪಿನ್‌ (ಕಥಾ ಸಂಕಲನಗಳು), ಸೇವಂತ ಪ್ರಸಂಗ ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ (ನಾಟಕಗಳು), ಬೊಗಸೆಯಲ್ಲಿ ಮಳೆ, ಶಬ್ದತೀರ (ಅಂಕಣಗಳು). ಎಲ್ಲೋ ಮಳೆಯಾಗಿದೆ (ಚಿತ್ರಗೀತೆಗಳ ಸಂಕಲನ), ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವ ಅವರಿಗೆ ’ಫಿಲಂಫೇರ್’ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.

More About Author

Story/Poem

 ಹಳೆ ಪುಸ್ತಕ

ತುಸು ಹಳದಿಗೆ ತಿರುಗುತ್ತಿರುವ ಹಳೆ ಪುಸ್ತಕದ ನವಿರೆದ್ದ ಕಾಗದದ ಸ್ಪರ್ಶದಲ್ಲೆ ಇದೆ ಇನ್ನೆಲ್ಲೂ ಸಿಗದ ಒಂದು ಅಭಯ ಈಗಷ್ಟೆ ಪಾರ್ಲರಿಗೆ ಹೋಗಿ ಬಂದಂತಿರುವ ಇತರ ಫಳ ಫಳ ನಾನಾ ಬಣ್ಣದ ಪುಸ್ತಕಗಳ ನಡುವೆ ಸದ್ದಿಲ್ಲದೆ ಸೆಳೆಯುವುದು ಇದರ ನಿರಾಭರಣ ಸೌಮ್ಯ ಸೌಜನ್ಯದ ನಿಲುವು ಹರ್ಷ ಪ್ರಕಟಣಾ...

Read More...

ಆದರೂ ಇರಲಿ 

  ನಾವು ಕ್ಷೇಮದಿಂದ ತಲುಪಿದೆವು ದಾರಿ ಖರ್ಚಿಗೆಂದು ನೀವು ಕಟ್ಟಿಕೊಟ್ಟಿದ್ದ ಡಬ್ಬಿಯನ್ನು ನಾವು ದಾಕ್ಷಿಣ್ಯದಿಂದ ಬೇಡ ಎಂದಿದ್ದರೆ ಎಂಥ ಮಹಾಪರಾಧವಾಗುತ್ತಿತ್ತು ಎಂಬುದು ತಿಂದ ಮೇಲೆ ಅರಿವಿಗೆ ಬಂತು. ಬೇಬಿಯ ಪರೀಕ್ಷೆ ಚೆನ್ನಾಗಿಯೇ ಆಗಿರುತ್ತದೆ ಆಕೆ ಜಾಣೆ. ಏಕಪಾಠಿ. ಕಾಳಜಿ ...

Read More...