Story/Poem

ಕೀರ್ತಿ ಪಿ. (ಸೂರ್ಯ ಕೀರ್ತಿ)

ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ, ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜನಿಸಿದವರು, ಗ್ರಾಮೀಣ ಬದುಕಿನ ವಿಸ್ತಾರಗಳು ಇವರ ಬರಹದ ಮೂಲಕ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು,  ಕನ್ನಡ ರತ್ನ ಪರೀಕ್ಷೆಯಲ್ಲಿ ಕರ್ನಾಟಕ  ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಸೂರ್ಯ ಕೀರ್ತಿ ಅವರು  ನ್ಯಾಷನಲ್  ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ ಯನ್ನು  ಆಸಕ್ತಿಯಿಂದ ಅಧ್ಯಯನ ಮಾಡಿ, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಈಗ ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಂಗಳೂರು ಇಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕೇಂದ್ರ  ಸಾಹಿತ್ಯ ಪರಿಷತ್ತು ನಡೆಸುವ 'ಶಾಸನ ಶಾಸ್ತ್ರ'ದಲ್ಲಿ ಡಿಪ್ಲೋಮಾ ಹಾಗೂ ಬಿ ಎಂ ಶ್ರೀ ಪ್ರತಿಷ್ಠಾನ ನಡೆಸುವ ' ಹಳಗನ್ನಡ ಮತ್ತು ಶಾಸನ ಶಾಸ್ತ್ರ'ದಲ್ಲಿ ಡಿಪ್ಲೋಮಾ ಅಧ್ಯಯನ ಮಾಡಿದ್ದಾರೆ. 

More About Author

Story/Poem

ದ್ರೌಪದಿ ದಂಡೆ

ಆ ಕಾಡ ವನಗಳಲ್ಲಿ ದ್ರೌಪದಿ ಮುಡಿದಳಂತೆ 'ದ್ರೌಪದಿದಂಡೆ' ಹೂವ! ಎತ್ತರದೆತ್ತರದ ಮರಗಳ ಹತ್ತಿ ಕಿತ್ತು ತಂದನಂತೆ ಭೀಮ ಈ ಹೂಗಳ! ಪಾಚಿಗಟ್ಟಿದ ಅವಳ ಬದುಕಿನಲ್ಲಿ ಈ ಹೂವು ಅರಳಿಸಬಹುದೇ? ಅಡುಗೆ ಮಾಡಿಟ್ಟ ಪಾತ್ರೆಗಳ ತೊಳೆಯದೆ ಪಾಂಡವರೈವರ ಕಳಚಿದ ಕೊಳೆಯ ಬಟ್ಟೆಗಳ ...

Read More...

ನಮ್ಮೂರಿನ ಚಂದ್ರಮತಿಯರು

ತಲೆತುಂಬಾ ತಾವರೆ ಮೊಗ್ಗುಗಳ ಮುಡಿದು ಬಟ್ಟೆಯೊಗೆಯಲು ಕೆರೆ ಕೋಡಿಯ ಬಳಿ ಬಂದಾಗ, ಸತ್ಯಹರಿಶ್ಚಂದ್ರರ ಕತೆಗಳ ನೀವೊಮ್ಮೆ ಕೇಳಬೇಕು; ಮೂಗುತಿಗಳ ಮುರಿಸಿಕೊಂಡವರು; ಜುಟ್ಟು ಹಿಡಿದು ಗದ್ದವ ಕಿತ್ತಿಸಿಕೊಂಡವರು, ಕತ್ತಿನಶಿರಕ್ಕೆ 'ಧುಮ್ಮನೇ' ತಟ್ಟಿಸಿಕೊಂಡವರು, ಕುಡಿದ ಗಂ...

Read More...