Story/Poem

ಕೊಡಗಿನ ಗೌರಮ್ಮ

ಕೊಡಗಿನ ಗೌರಮ್ಮನವರು ಕನ್ನಡದ ಮೊದಲ ಕಾದಂಬರಿಗಾರ್ತಿ ಕತೆಗಾರ್ತಿ ಎಂದರೆ ತಪ್ಪಾಗಲಾರದು. ಅವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆಯುತ್ತಿದ್ದರು. 1931 ರಿಂದ 1939ರವರೆಗೆ ಇವರು ರಚಿಸಿದ ಸಣ್ಣ ಕಥೆಗಳು ‘ಮಗುವಿನ ರಾಣಿ, ಕಂಬನಿ, ಚಿಗುರು’ ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ. ಇವರು 1912ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ಗೌರಮ್ಮನವರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಮುಳುಗಿ 1940ರಲ್ಲಿ ದುರಂತ ಸಾವಿಗೀಡಾದರು. ಇಲ್ಲವಾಗಿದ್ದರೆ ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದ್ದಲ್ಲಿ ಸಂಶಯವಿಲ್ಲ.

More About Author

Story/Poem

ಮುನ್ನಾದಿನ

ಮಹಾತ್ಮಾ ಗಾಂಧೀಜಿಯವರು ಹಿಂದೂ - ಮುಸ್ಲಿಮ್ ಐಕ್ಯತೆಯನ್ನು ಬೋಧಿಸಿದ್ದರೆ ಅದನ್ನು ಕಾರ್ಯತಃ ಆಚರಣೆಗೆ ತಂದವನು ಕಾಡ ಮೇಸ್ತ್ರಿ ಅವನದು ವಿಚಿತ್ರ ಕಥೆ. ಹುಟ್ಟಿನಿಂದವನು ಗಾಣಿಗ, ತನ್ನ ಒಂಭತ್ತು ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ. ತಾಯಿ ಪುನಃ ಮದುವೆಯಾದಳು. ಹತ್ತನೆಯ ವರ್ಷದ ತನಕವೂ ಹು...

Read More...