Story/Poem

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

More About Author

Story/Poem

ದ್ವೇಷದಿಂದ ಅಂತರ ಬಯಸಿ

ಸದಾ ನಡೆಯುತ್ತಿರುತ್ತೇನೆ ದ್ವೇಷದಿಂದ ಅಂತರ ಬಯಸಿ ಇಚ್ಛೆಗಳ ಸಮಯಕೆ ಮಾರಿ ಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು ! ಕೆಚ್ಚಿನ ನುಡಿಗಲ್ಲ; ಹಕ್ಕಿಗಳ ಹಾಡಿಗೆ ಮನ ಸೋಲುತ್ತೇನೆ; ಹೂಗಳನ್ನು ಮುದ್ದಿಸುತ್ತೇನೆ ತಂಗಾಳಿಯ ಅಪ್ಪುತ್ತೇನೆ ! ಹರಿಯುವ ನದ...

Read More...

ನಾನೂ ಸ್ವತಂತ್ರಳಾಗುವೆ !  

ನನಗೇಕೋ ಅನುಮಾನ; ನಾನಿನ್ನೂ ಸ್ವತಂತ್ರಳಾಗಿಲ್ಲವೆ ?! ಬೂಟುಗಳ ಸದ್ದಿಲ್ಲ; ಕಣ ರಂಗೇರಿದೆ ! ಬೇಟೆಯ ಹದ್ದಿಲ್ಲ; ಇಲ್ಲಿ ಹೆಣ ಬಿದ್ದಿದೆ ! ಕೊಲೆ, ರಕ್ತಪಾತ; ಪಂಥ - ಧರ್ಮ ತಪ್ಪೋ ಒಪ್ಪೋ, ಪಾಪ - ಕರ್ಮ ಮುಕ್ಕಟ್ಟಿನ ರಾಜಕೀಯ, ದಾಳ; ಸತ್ತವನಾರೋ ?...

Read More...

ನಿಂತ ಸ್ಥಳ‌ !

ಅದೊಂದು ಕಾಡು, ಕಿಚ್ಚಿನ ಹಾದಿ; ಕೆಟ್ಟ ಸ್ಥಳ ಅಣ್ಣನ ಅನುಯಾಯಿ ಲಕ್ಷ್ಮಣ, ವಾದಕ್ಕಿಳಿದನು : ಕಾಡಿಗಟ್ಟಿದನು ನಿನ್ನ; ತಂದೆ ದಶರಥ... ಇಕ್ಕಟ್ಟಿಗೆ ಇಕ್ಕಳವಾಗಿ ! ಆದರೆ ನನಗೆ ?! ವರವಾವುದು ? ಶಾಪವಾವುದು ? ಕಿಂಚಿತ್ತು ಕಿಚ್ಚುರಿಯೂ ಇಲ್ಲದೆ ನಾನೇಕೆ ನಡೆದೆ ನಿನ್ನ ಹಿಂದೆ ?...

Read More...

 ಜಗದೊಳಗೆ ನಾನು !

ಕರ್ಣನಾಗಲಾರೆ; ಭಾವಾನಾತ್ಮಕವಾಗಿ ಸಾವುಂಟು ! ಪಾರ್ಥನಾಗಲಾರೆ; ನನಗೇಕೆ ? ಎದೆ ಸೀಳುವ ಕಗ್ಗಂಟು ! ಧರ್ಮಜ, ಭೀಮ, ಸಹದೇವ? ಪಾಂಡವರೈವರೂ ಪಾಪವಗೈದರು ಫಲವಿಲ್ಲ ! ರಾಮನಾಗಲೋ ? ಇಲ್ಲ ಕೃಷ್ಣನೋ ? ಬಡವನಿಗೇಕೆ ದೈವದ ಧ್ಯಾನ ? ದೈವತ್ವಕ್ಕೆ ಸಲ್ಲೆನು ! ದುರ್ಯೋಧನ, ದುಶ್ಯಾಸನ, ...

Read More...

ಬಟ್ಟೆ

ಅಪ್ಪ ಕೊಡಿಸಿದ ಬಣ್ಣದ ಬಟ್ಟೆ ಹೇಳುತ್ತಿತ್ತು ಮೈಕೊಡವಿ ದುಡಿದ ಅವನ ಶ್ರಮದ ಫಲ ನನ್ನ ಮೈಯಪ್ಪಿ ಕುಳಿತ ಬಗೆಯ ಆತನ ಹರಿದ ಅಂಗಿಗೆ ಅವ್ವ ಹತ್ತಾರು ಬಾರಿ ತೇಪೆ ಹಾಕಿ ಭದ್ರಗೊಳಿಸಿದ್ದಳು ಆದರೆ ನನ್ನ ಪಾಲಿಗದು ಸ್ವಪ್ನ !! ಹರಿದಂದೇ ಹೊಸ ಬಟ್ಟೆ ಉಡುಗೊರೆಯಾಗುತ್ತಿತ್ತು. ಅವನಿಗೊಂದು ...

Read More...