Story/Poem

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ.  ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ’ಆಫ್ರಿಕನ್ ಸಾಹಿತ್ಯವಾಚಿಕೆ’, ಮತ್ತು ಡಾ. ರಾಮಮನೋಹರ ಲೋಹಿಯಾ ಮತ್ತು ಜಗಜೀವನರಾಂ ಸಮಗ್ರ ಕೃತಿಗಳಿಗಾಗಿ ಲೇಖನಗಳ ಅನುವಾದವನ್ನು ಮಾಡಿದ್ದಾರೆ. ಇವರ ’ವೈಕಂ ಕಥೆಗಳು’ ಕೃತಿಗೆ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿದೆ. 

More About Author

Story/Poem

ತ್ಯಕ್ತ  

ನವಿಲ ಹಿಂಡೊಂದರ ಕರ್ಕಶ ಕೂಗಿಗೆ ರಾಮಾಂಜಿಗೆ ಎಚ್ಚರವಾದಾಗ ಹೊತ್ತು ನೆತ್ತಿ ಕುಕ್ಕುತ್ತಿತ್ತು. ಟ್ರಂಕಿನ ಮೇಲೆ ಅನಾಮತ್ತಾಗಿ ಕುಸಿದಿದ್ದವನು ಮೆಲ್ಲಗೆ ಮೇಲೇಳಲೆತ್ನಿಸಿದ. ಕೈಕಾಲುಗಳು ಸ್ವಾಧೀನ ಕಳಕೊಂಡಂತೆ ಸುತ್ರಾಂ ಸರುಕಾಡದೆ ಮೈಯ್ಯನ್ನೊಂಚೂರೂ ಅಲುಗಾಡಿಸಲೂ ಆಗದೆ ಹಂಗೇ ಕಣ್ಣಾಡಿಸಿದ. ಕೊಂಚ ...

Read More...