Story/Poem

ಶಿವಲೀಲಾ ಹುಣಸಗಿ

ಕವಯತ್ರಿ ಶಿವಲೀಲಾ ಹುಣಸಗಿ ಅವರು ಎಂ.ಎ, ಬಿ.ಎಡ್ ಪದವೀಧರರು. ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಗ್ರಾನಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದ್ದಾರೆ. ಕಥೆ,ಕವನ,ಲಹರಿ,ಲೇಖನ, ಟಂಕಾ, ಹಾಯ್ಕುಗಳು, ರುಬಾಯಿ,ಗಝಲ್, ಪುಸ್ತಕ ವಿಮರ್ಶೆ, ಅಂಕಣ ರಹಗಳು, ಹಾಡುವುದು, ಓದುವುದು, ಚಿತ್ರಬಿಡಿಸುವುದು, ಉಪನ್ಯಾಸ, ನೃತ್ಯ, ರೇಡಿಯೋದಲ್ಲಿ ಸ್ವರಚಿತ ಕವನ ವಾಚನ, ಹಿರಿಯ ಸಾಹಿತಿ-ಕಲಾವಿದರ ಸಂದರ್ಶನ ನಡೆಸುವುದು, ಶಾಲಾ ಮಕ್ಕಳಿಗೆ ಅನುಕೂಲವಾಗುವ ಕಿರು ನಾಟಕಗಳು, ರೂಪಕಗಳು. ನಿರೂಪಣೆ.ಇತ್ಯಾದಿ ಇವರ ಹವ್ಯಾಸಗಳು. ಬೆಂಗಳೂರು, ಕಾರವಾರ, ಧಾರವಾಡ ಕೇಂದ್ರದಿಂದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಮಕ್ಕಳಿಗೆ ವಿಶೇಷವಾಗಿ ಬಾಂಧವ್ಯದ ಮೆರಗು ಅಂಕಣ ಪ್ರಕಟಗೊಳ್ಳುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆಸುವ ರಾಜ್ಯ  ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ಮೂರು ವಿಶ್ವವಿದ್ಯಾಲಯದ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

More About Author

Story/Poem

ಬೆಳಗಲಿ ವೀರರ ಹಣತೆಗಳು

ಕತ್ತಲಲ್ಲಿ ಕರಗದಿರಲಿ ಮೌನದಲಿ ನರಳದಿರಲಿ ಬರೆಯ ನಡುವೆ ಕಮರದಿರಲಿ ಅಭಿಮಾನದ ಹೊಳೆ ಬಿಳಿಯರು ಬಿಳಿಚಿದಂತೆ ಕರಿಯರು ನೆರಳಿನಂತೆ ಕುದುರೆಲದ್ದಿ ಬಳಿದ ಗುಲಾಮರಂತೆ ತುತ್ತು ಕೂಳಿಗೂ ಅಂಗಲಾಚಿದಂತೆ ನಮ್ಮ ನಾವ್ ಮಾರಿಕೊಂಡು ಮಾನವೀಯತೆಯ ತೂರಿಕೊಂಡು ಎಂಜಲಾಸೆಗೆ ಒತ್ತೆಯಿಟ್ಟು ಬದು...

Read More...

ನಾನು ನಾನಾಗಿ ಉಳಿದಿಲ್ಲ..

ಮರೆಯಬೇಕೆಂದಾಗೆಲ್ಲ ಕಾಡುವಿಯಲ್ಲ ಹೀಗೆಕೆಂದು ಕನವರಿಸಿದಾಗೆಲ್ಲ ತುಟಿಪಿಟಕ್ಕೆನ್ನದೆ ಮೌನವಾಗುವಿಯಲ್ಲ ಮನಸ್ಸಿನ ಮೂಲೆಯಲ್ಲೆಲ್ಲ ಅವಿತು ನಿನ್ನ ಸಿಹಿ ನೆನಪುಗಳೆಲ್ಲ‌ ಹರವಿ ಕಹಿ ಕನಸಿನಲಿ ನರಳಿಸಿದೆಯಲ್ಲ ತಂಪಾದ ತಂಗಾಳಿ ನಿನಾಗಲಿಲ್ಲ ನಾನೆಂದು ನಿನ್ನನ್ನು ಕಾಡಿಲ್ಲ,ಬೇಡಿಲ್ಲ ...

Read More...