Story/Poem

ಸುಲಕ್ಷಣಾ ಶಿವಪೂರ

ಸುಲಕ್ಷಣಾ ಶಿವಪೂರ ಅವರು ಮೂಲತಃ ಹುಬ್ಬಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವಿತೆ, ಕತೆ ಹಾಗೂ ಪ್ರವಾಸ ಕಥನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಸ್ಥಳೀಯ ಸಾಹಿತ್ಯ ಸಮ್ಮೇಳನ ಹಾಗೂ ಇತರೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನವಾಚನ ಮಾಡಿದ್ದಾರೆ. ಧಾರವಾಡದ ‘ಕರ್ನಾಟಕ ಬಾಲ ವಿಕಾಸ ಅಕಾಡೆಮಿ' ವತಿಯಿಂದ ‘ಶಾಲಾ ಮಕ್ಕಳ  ಆರೊಗ್ಯ ಹಾಗೂ ಆಹಾರ’ ವಿಷಯದ ಕುರಿತು ಸಂಶೋಧನೆ ಮಾಡಿರುತ್ತಾರೆ. ಸ್ಟಾರ್ ಸುವರ್ಣ ನಡೆಸಿದ ಕನ್ನಡದ ಕೋಟ್ಯಾಧಿಪತಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿರುವ ಅವರು ಹಿಂದಿ ಸಾಹಿತ್ಯದಲ್ಲಿ ಸುಮಾರು 500ಕ್ಕೂ  ಹೆಚ್ಚು ಶಾಯರಿಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅವರಿಗೆ ವಿವಿಧ ಸಂಸ್ಥೆ, ಸಂಘಟನೆಗಳ ವತಿಯಿಂದ ಸನ್ಮಾನಗಳನ್ನು ಪಡೆದಿರುತ್ತಾರೆ. 

More About Author

Story/Poem

ಕನ್ನಡತಿಯಾಗಿ

ಸವಿ ಕನ್ನಡ ಸಿಹಿ ಕನ್ನಡ ಭವ್ಯ ಇತಿಹಾಸದ ನಲ್ಮೆಯ ಕನ್ನಡ ಸುಂದರ ಸಿಹಿ ಲಿಪಿಯು, ನನ್ನಯ ಕನ್ನಡ ಹೃನ್ಮನ ತಣಿಸುವ ವಾಣಿಯು ನನ್ನ ಅಭಿಮಾನದ ಕನ್ನಡ ನನ್ನ ಉಸಿರು ಕನ್ನಡ ಹೆಸರು ಕನ್ನಡ ಹೃದಯದ ಭಾಷೆಯೂ ಕನ್ನಡ ಭಾವಗಳೂ ಕನ್ನಡ ಬದುಕು ಮೀಸಲು ಕನ್ನಡ ನಾಡು-ನುಡಿಗೆ ಕನ್ನಡತಿಯ...

Read More...

ಮಳೆ ಮತ್ತು ನಿನ್ನ ಪ್ರೀತಿ

ಮಳೆಯಲಿ ನಿನ್ನ ಜೊತೆಯಲಿ ಬದುಕು ನಿರಂತರ ಸಾಗಲಿ ಜಡಿ ಮಳೆಯ ತುಂತುರು ಹನಿಗಳಂತೆ ನಿನ್ನ ಒಲವಿನ ಸಿಂಚನ ಇರಲಿ ಮುತ್ತಿನ ಹನಿಗಳ ಮೋಹಕ ಮಾಯೆಯಂತೆ ನಿನ್ನ ಪ್ರೀತಿಯ ಸೆಳೆತವಿರಲಿ ಈಳೆಯು ಮಳೆಯನು ಕಾಯುವಂತೆ ನಿನ್ನ ಪ್ರೀತಿಯ ಕಾಯುವ ಬಯಕೆ ಬಾನಿನಾಳವು ಎಂದೂ ಬರಿದಾಗದಂತೆ ನಿನ್ನ ಪ್...

Read More...