Story/Poem

ಉದಯ್ ಇಟಗಿ

ಉದಯ ಇಟಗಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರು. ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಎಂಟು ವರ್ಷ ಕಾಲ ಇಂಗ್ಲೀಷ್ ಅಧ್ಯಾಪಕರಾಗಿ, ಸದ್ಯ ಸ್ವದೇಶದಲ್ಲಿ ನೆಲೆಸಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದ ಇವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡು, ಅನುವಾದ ಸಾಹಿತ್ಡಯ ಸೃಷ್ಟಿಯಲ್ಲಿ ಒಲವು ಬೆಳೆಸಿಕೊಂಡವರು. ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು ‘ಕೆಂಡಸಂಪಿಗೆ’ ಸೇರಿದಂತೆ ಬೇರೆ ಬೇರೆ ಆನ್‍ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಅನುವಾದಿತ ಕಥೆಗಳು ‘ಉದಯವಾಣಿ’ಯಲ್ಲಿ ಪ್ರಕಟವಾಗಿವೆ. ಅನೇಕ ಅರೆಬಿ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಶಿಕ್ಷಣ, ಪ್ರವಾಸ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಚಿತ್ರದುರ್ಗದ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರು. ಅವರ ‘ಲಿಬಿಯಾ ಡೈರಿ’ ಲಿಬಿಯಾ ದೇಶದ ಕುರಿತ ಇತ್ತಿಚಿನ ಕೃತಿಯಾಗಿದೆ.

More About Author

Story/Poem

ಅರ್ಧ ಹೇಳಿದ ಕಥೆ

  ಪಾಮ್ ಮರದ ನೆರಳುಗಳು ಮರೆಯಾಗುವಾಗ ನಾವು ಮನೆಗೆ ಮರಳುವದರ ಬಗ್ಗೆ ಮಾತನಾಡಿದೆವು ಹೋಗುವದರ ಬಗ್ಗೆ ಮಾತನಾಡಿದೆವು ಹಿಂತಿರುಗುವದರ ಬಗ್ಗೆ ಮಾತನಾಡಿದೆವು. ಆನಂತರ ಏನಾಯಿತೆಂಬುದರ ಬಗ್ಗೆ ಮಾತನಾಡಲಿಲ್ಲ ಹಿಂತಿರುಗಿದ ಬಳಿಕ ನಾವೇನು ಮಾಡಿದೆವು? ಎಲ್ಲಿ ಹೋದೆವು? ...

Read More...