Book Watchers

ಡಿ. ಉಮಾಪತಿ

ಪತ್ರಕರ್ತರು, ಬರಹಗಾರರು ಆಗಿರುವ ಡಿ. ಉಮಾಪತಿ ಅವರು ಮೊದಲು ಕನ್ನಡ ದೈನಂದಿನ ಪತ್ರಿಕೆಯಾದ ಕನ್ನಡ ಪ್ರಭದಲ್ಲಿ ಪತ್ರಕರ್ತರಾಗಿದ್ದು ನಂತರ ಪ್ರಜಾವಾಣಿಯಲ್ಲಿ ದೆಹಲಿಯ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಜಾವಾಣಿಯಲ್ಲಿ “ದೆಹಲಿ ನೋಟ” ಎಂಬ ಅಂಕಣ ಬರೆಯುತ್ತಿದ್ದರು. ಅದೇ ಅಂಕಣದ ಹೆಸರಿನ ಪುಸ್ತಕವನ್ನು ಸಹ ಪ್ರಕಟಿಸಿದ್ದಾರೆ. ಪ್ರಸ್ತುತ ’ನ್ಯಾಯ ಪಥ’ ಪತ್ರಿಕೆಯಲ್ಲಿ ಕನ್ಸಲ್ಟಿಂಗ್ ಎಡಿಟರ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Articles

ಬಿಳಿಮಲೆಯವರ ಬದುಕು ಹೊಳೆಹೊಳೆವ ಸ್ಫೂರ್ತಿಗಾಥೆ

ಬಂಟಮಲೆಯ ಬುಡದ ಬಿಳಿಮಲೆಯ ಕಗ್ಗಾಡಿನ ಹೈದನೊಬ್ಬ ಆತ್ಮವಿಶ್ವಾಸದ ಬಲದಿಂದ ಆಗಸಕ್ಕೆ ನಿಚ್ಚಣಿಕೆಯನಿರಿಸಿ ಏರುವ ಪರಿ ಬೆರಗು ಹುಟ್ಟಿಸುತ್ತದೆ. ಈಗಲೂ ಹಳ್ಳಿಗಾಡಿನಲ್ಲಿ ಅರಳಿ ದಿಕ್ಕುಗಾಣದೆ ತೊಳಲುವ ಕಾಡ ಕುಸುಮಗಳ ಪಾಲಿಗೆ ಬಿಳಿಮಲೆಯವರ ಬದುಕು ಹೊಳೆಹೊಳೆವ ಸ್ಫೂರ್ತಿಗಾಥೆ.

Read More...