Book Watchers

ಗುರುಪ್ರಸಾದ್ ಕಂಟಲಗೆರೆ

ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್‌ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ.

Articles

ಅಗ್ರಹಾರರ 'ನೀರು ಮತ್ತು ಪ್ರೀತಿ' ಕುಡಿದಾಗ...

ಈ ಕಾದಂಬರಿಯುದ್ದಕ್ಕೂ ನೀರು ವಹಿಸಿರುವ ಪಾತ್ರ, ಅದನ್ನು ಪೋಷಿಸಿರುವ ಬಗೆ, ಅದು ಪ್ರೀತಿಯೊಂದಿಗೆ ತಳುಕು ಹಾಕಿಕೊಂಡಿರುವುದು.. ಇದೆಲ್ಲವೂ ಇನ್ನೆಲ್ಲೂ ಸಿಗದ ಅಪರೂಪದ ವಸ್ತು ಮತ್ತು ಬೆಸುಗೆ ಎನಿಸಿಬಿಡುತ್ತದೆ. ಮುಟ್ಟಿನೊಂದಿಗೆ ಶುರುವಾಗುವ ಕಾದಂಬರಿ ಬಾಯಿ ವಾಸನೆಯೊಂದಿಗೆ ಕೊನೆಗೊಳ್ಳುತ್ತೆ. ಸರಳ ಎನಿಸುವ ಸಂಗತಿಗಳೆರೆಡು ಹಬ್ಬುವ, ನಿರ್ಣಾಯಕವಾಗುವ ಪರಿ ಸೋಜಿಗವೆನಿಸುತ್ತೆ. 'ಮುಟ್ಟು' ಮತ್ತು 'ವಾಸನೆ' ಕಾದಂಬರಿಯ ಎರಡು ತುದಿಗಳು. ಇವೆರಡೂ ಜೀವ ತಳೆಯುವ ಪರಿ ಅನನ್ಯ.

Read More...