Book Watchers

ಕಲ್ಲೇಶ್ ಕುಂಬಾರ್

ಕಲ್ಲೇಶ್ ಕುಂಬಾರ್ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿ ಗ್ರಾಮದಲ್ಲಿ. 'ಪುರುಷ ದಾರಿಯ ಮೇಲೆ' ಕವನ ಸಂಕಲನ, 'ಉರಿಯ ನಾಲಗೆಯ ಮೇಲೆ' ಹಾಗೂ 'ಉಸುರಿನ ಪರಿಮಳವಿರಲು' ಅವರ ಕಥಾಸಂಕಲನಗಳು. 'ಭವಕ್ಕೆ ಬೀಜವಾದುದು' ಕಥೆಗೆ 'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ-2002'ರಲ್ಲಿ ತೃತೀಯ ಬಹುಮಾನ, 'ಒಂದು ಕ್ಷಣದ ಸ್ಖಲನದ ಸುತ್ತ' ಕವಿತೆಗೆ 2005 ರ 'ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆ'ಯಲ್ಲಿ ಮೆಚ್ಚುಗೆ ಬಹುಮಾನ ಪಡೆದು ಓದುಗರ ಮೆಚ್ಚುಗೆಯನ್ನು ಸಂಪಾದಿಸಿದ್ದಾರೆ.

Articles

ಕವಿತೆಯಾಗಿ ದಕ್ಕಿದ ಪರಿ!

‘ಒಲೆ ಕೆಂಡವಾದಾಗಲೇ' ಪದ್ಯ, 'ಒಲವು ಎಂಬುದು ಯಾರಲ್ಲೂ ಸಹ ಥಟ್ ಎಂದು ಹುಟ್ಟಿಕೊಳ್ಳುವ ಕ್ರಿಯೆ ಅಲ್ಲ' ಎಂಬ ವಿಚಾರವನ್ನು ಮತ್ತು ಅದು ನಮ್ಮೊಳಗೆ ರೂಪುಗೊಳ್ಳುವ ಸಮಯದಲ್ಲಿ ನಮ್ಮ ಮನಸ್ಸಿಗೆ ಆಗುವ ಅನುಭವವನ್ನು ಮೀರಿ ಅನುಭಾವದ ನೆಲೆಯಲ್ಲಿ ಶೋಧಿಸುತ್ತ ಹೋಗುತ್ತದೆ. ನಮ್ಮೊಳಗೆ ಒಲವು ಹುಟ್ಟಿಕೊಳ್ಳುವ ಕ್ರಿಯೆಯೇ ರೋಚಕವಾದದ್ದು. ಅದೆಂದೂ ದಿಢೀರ್ ಎಂದು ಹುಟ್ಟುವುದಿಲ್ಲ. ಅದಕ್ಕಾಗಿ ನಾವು ಅನುದಿನವೂ ಕಾಯಬೇಕಾಗುತ್ತದೆ. ಒಲೆಯೊಳಗೆ ಕೆಂಡ ಹದವಾಗಿ ರೂಪುಗೊಂಡು ಸುಡುವ ಗೆಣಸಿನ ಘಮಲು ಗಾಳಿಯಲ್ಲಿ ಪಸರಿಸುವಂತೆ ಒಲವು ನಮ್ಮ ಮನಸ್ಸಿನೊಳಗೆ ನಿದನಿದಾನವಾಗಿ ಆವರಿಸಿಕೊಳ್ಳುತ್ತದೆ! ಅದೊಂದು ಏನಕೇನ ಕಾರಣವಾಗಿ ಸೃಷ್ಟಿಯೇ ನಮ್ಮೊಳಗೆ ರೂಪಿಸುವ ಪವಿತ್ರವಾದ ಕಾರ್ಯ- ಎನ್ನುತ್ತಾರೆ ಕವಿ ಮಲ್ಲಿಕಾರ್ಜುನಗೌಡ. ಆದರೆ, ಯಾವತ್ತಿಗೂ ಕೂಡ ಹಿಮದಂತೆ ಘನೀರ್ಭವಗೊಂಡ ಮನಸ್ಸುಗಳಲ್ಲಿ ಒಲವು ಹುಟ್ಟಲಾರದು ಎನ್ನುವ ಕವಿಯು, ಅಲ್ಲಿ ಜೇಡ ಬಲೆಯನ್ನೂ ಸಹ ನೇಯಲು ಹಿಂದೇಟು ಹಾಕುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಕಡೆಗೂ ಒಲವೆಂದರೆ ಸುಡುವ ಕೆಂಡವೇ ಕಾಲಾನುಕ್ರಮದಲ್ಲಿ ಹೂವಾಗಿ ಅರಳುವ ಕ್ರಿಯೆ! ಅದು ಅತ್ಯಂತ ಪವಿತ್ರವಾದ ಕ್ರಿಯೆ! ಅದನ್ನು ಮನಸ್ಸುಗಳ ಹೊರತಾಗಿ ಯಾರೂ ಸೃಜಿಸಲು ಸಾಧ್ಯವಿಲ್ಲ. ಅಂತೆಯೇ, ಅದು ಮೇಲನ ಇಬ್ಬನಿಯ ಹನಿಯಂತೆ ಇದ್ದು, ಯಾರೂ ರೂಪಿಸಲಾಗದು. ಒಲವನ್ನು ಮನಸ್ಸಿನ ಮೂಲಕ ಅನುಭವಿಸಲಷ್ಟೇ ಸಾಧ್ಯ- ಎಂಬ ಆಶಯವನ್ನು ಇಡಿಯಾಗಿ ಪದ್ಯ ಕಟ್ಟಿಕೊಡುತ್ತದೆ. ಅಸಲಿಗೆ ಗೀತೆ ಮುಗಿದಾಗಲೇ ಅಂದರೆ ನಮ್ಮೊಳಗಿನ ಅಹಂನ್ನು ಹೋಗಲಾಡಿಸಿದಾಗಲೇ ಒಲವಿನ ರಾಗ ಶುರುವಾಗುತ್ತದೆ ಎಂಬಲ್ಲಿಗೆ ಕವಿತೆಯ ಸಾರ್ಥಕತೆ ಮೆರೆಯುತ್ತದೆ.

Read More...

ಮಿಗಿಲಾದ ಭೂತಾಯಮ್ಮನ ಕಥೆ ’ಒಂದು ಚಿಟಕಿ ಮಣ್ಣು’

ಅವಸರದಲ್ಲಿ ಬೆಳೆ ತೆಗೆದು, ಹಣ ಮಾಡಬೇಕೆಂಬ ದುರಾಲೋಚನೆಯಲ್ಲಿ ಈ ದೇಶದ ರೈತನು ಸುಧಾರಿತ ಬೀಜ, ರಸಗೊಬ್ಬರ, ಕ್ರಿಮಿನಾಶಕ ಅಂತೆಲ್ಲ ಅವುಗಳ ಬೆನ್ನು ಬಿದ್ದು ಕಮ್ಮೀ ಅವಧಿಯಲ್ಲಿ ಬೆಳೆ ತೆಗೆಯುವ ಧಾವಂತಕ್ಕೆ ಸಿಲುಕಿ ಒಂದರ್ಥದಲ್ಲಿ ಭೂತಾಯಮ್ಮನ ಮೇಲೆ ಅತ್ಯಾಚಾರವನ್ನು ಎಸಗುತ್ತಿದ್ದಾನೆ ಎಂದು ಕಳಕಳಿಯನ್ನು

Read More...