Book Watchers

ಪ್ರಭಾವತಿ ದೇಸಾಯಿ

ಹಿರಿಯ ಕವಯತ್ರಿ ದೇಸಾಯಿಯವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಸಮಕಲ್ ಗ್ರಾಮದವರು. ಬಿಜಾಪುರದಲ್ಲಿ ವಿಜ್ಞಾನದ ಉಪನ್ಯಾಸಕರಾದ ಶಾಂತಮಲ್ಲಪ್ಪ ದೇಸಾಯಿಯವರು ಇವರ ಬಾಳಸಂಗಾತಿ. ತಂದೆ ಗಿರಿಮಲ್ಲಪ್ಪ ಹಸಮಕಲ್ ತಾಯಿ ಪಾರ್ವತಮ್ಮ ಮಠ ಮಾನ್ಯಗಳಲ್ಲಿ ಶಿಕ್ಷಣ ಪಡೆದಿರುವ ಪ್ರಭಾವತಿ ಅವರು ರಾಮಾಯಣ, ಮಹಾಭಾರತ, ಪುರಾಣಗಳು ಸೋಮೇಶ್ವರ ಶತಕ ಹೀಗೆ ಹಲವಾರು ಗ್ರಂಥಗಳನ್ನು ಓದಿ ಅರಗಿಸಿಕೊಂಡಿದ್ದಾರೆ. ಅ.ನ.ಕೃ ರವರ ಕಥೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಓದು- ಬರಹ ಅವರ ನೆಚ್ಚಿನ ಹವ್ಯಾಸ.

Articles

ಮೂರು ದೇಶ ನೂರು ಅನುಭವ

ಮೂರು ದೇಶಗಳ ಪ್ರಕೃತಿ ಸೌಂದರ್ಯ ಕಣ್ಣಲ್ಲಿ ತುಂಬಿಕೊಂಡು, ಸುಂದರ ಗಗನಸಖಿಯರ, ಅಲ್ಲಿಯ ಹಳದಿ ಚೆಲುವೆಯರ ನಗು ಮರೆಯಲಾಗದೆಂದು ಹೇಳುತ್ತಾ ತಾಯಿನಾಡಿಗೆ ಪ್ರವಾಸಿ ತಂಡ ಮರಳುತ್ತದೆ. ಈ ಥೈಲ್ಯಾಂಡ್ ಪ್ರವಾಸ ಅಪೂರ್ಣವಾದ ಅನುಭವ ಲೇಖಕರದ್ದಾಗಿದ್ದು ಮತ್ತೊಮ್ಮೆ ಹೋಗುವ ಹಿಂಗಿತ ಈ ಕೃತಿ ಓದಿದಾಗ ವ್ಯಕ್ತವಾಗುತ್ತದೆ.

Read More...