Book Watchers

ಪ್ರಕಾಶ ಕಡಮೆ

ಕವಿ, ಬರಹಗಾರ ಪ್ರಕಾಶ್ ಕಡಮೆ 1958 ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದಲ್ಲಿ ಜನನ. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ.

Articles

ವರ್ತಮಾನದ ತಲ್ಲಣಗಳ 'ಬಯಲಿಗೂ ಗೋಡೆಗಳು’

ವರ್ತಮಾನದ ತಲ್ಲಣಗಳಿಗೆ ಸದಾ ಮುಖಾಮುಖಿಯಾಗಿರುವರು. ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಶನೀಡುವುದೇ ಇವರ ಕವನದ ಮೂಲ ಮಂತ್ರ. ಈಗ ಮಹಿಳೆಯರ ಅಸ್ತಿತ್ವಕ್ಕೆ ಬೀಗ ಹಾಕಿದ್ದಾರೆ, ಕನಸಿಗೂ ಬೇಲಿ ಕಟ್ಟಿದ್ದಾರೆ. ಇದು ಇಲ್ಲೇ ಕೊನೆಗಾಣಬೇಕು ಎಂಬ ಒಳದನಿಯ ಇವರ ಹೋರಾಟ, ಜನಪರ ಕಾಳಜಿಯದ್ದಾಗಿದೆ.

Read More...