Book Watchers

ಪ್ರಿಯಾ ಭಟ್

ಲೇಖಕಿ ಪ್ರಿಯಾ ಭಟ್ ಅವರು ಹುಟ್ಟಿದ್ದು ಅಪ್ಪಟ ಕಾಡಿನ ಊರಾದ ಅಂಕೋಲಾ ತಾಲೂಕಿನ ಹಳವಳ್ಳಿ. ಉಸಿರಿನ ಬೇರು ಬಿಡದ ಬದುಕಿನ ಮಧ್ಯೆ ಸ್ವಂತಕ್ಕೊಂದು ಸಣ್ಣ ಉದ್ಯೋಗವನ್ನ ಕುಮಟಾ ಪೇಟೆಯಲ್ಲಿ ಸ್ಥಾಪಿಸಿದ್ದಾರೆ. ಅದರೊಂದಿಗೆ ‘ಸ್ವಸ್ತಿ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು 2013ರಿಂದ ನಡೆಸುತ್ತ ಬರವಣಿಯತ್ತಲು ಮುಖ ಮಾಡಿದ್ದಾರೆ. ತಮ್ಮ ಬಾಲ್ಯದಿಂದಲೂ ಸಾಹಿತ್ಯ ರಂಗದಲ್ಲಿ ಅತ್ಯಂತ ಆಸ್ಥೆಯುಳ್ಳ ಅವರು ಎರಡು ಕೃತಿಗಳನ್ನು ರಚಿಸಿದ್ದಾರೆ.

Articles

ಹವ್ಯಕರ ಬದುಕಿನ ಪ್ರಪಂಚ ತೆರೆದಿಡುವ ‘ಮೃಗಶಿರ’

ಮೇನಕೆಯನ್ನು ಒಂದು ಪಾತ್ರವಾಗಿ ತಂದಿದ್ದರೂ ಅವಳ ಒಳಗಿ‌ನ ನೋಟವಿಲ್ಲದೇ ಹೋದುದು ಯಾಕೆ ಅನ್ನಿಸದಿರದು. ಸುಬ್ರಾಯರ ಬದುಕಿನ ಕತೆಯಲ್ಲಿ ಬಂದವರೆಲ್ಲರೂ ಒಳಗಣ್ಣು ತೆರೆದು ಮಾತನಾಡಿರುವಾಗ ಬಹುಮುಖ್ಯ ಭಾಗವಾದ ಮೇನಕೆಯ‌ ಬಗೆಗೆ ಹೆಚ್ಚು ವಿವರಗಳಿಲ್ಲದೇ ಹೋಗಿರುವುದು ಒಂದಿಷ್ಟು ಪ್ರಶ್ನೆಗಳೊಂದಿಗೇ ಉಳಿದು ಹೋಗುವ ಹೊತ್ತಿಗೆ, ಕತೆ ಸುಬ್ರಾಯರದ್ದೇ ಆದರೂ ಇದು ಅಂತೆಯದೇ ಕತೆ ಅನ್ನಿಸಿಬಿಡುತ್ತದೆ.

Read More...