Book Watchers

ಶ್ಯಾಮಲಾ ಮಾಧವ

ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಿನವರು. ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್‌ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಗೊಂಡಿವೆ.

Articles

ಎಲ್ಲರೂ ಓದಿ ಅರಿಯಬೇಕಾದ ತಳಮಳ 'ಪದಕುಸಿಯೆ ನೆಲವಿಲ್ಲ'

ಗಬ್ಬು ನಾರುವ ಯಮುನಾ ದಂಡೆಯ ಮುಸ್ಲಿಂ ಘೆಟ್ಟೋಕರಣ ಪ್ರದೇಶದ ಆವಾಸದಲ್ಲಿರುತ್ತಾ,  ತಾನು ಬಯಸಿದ  ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಕೊನೆಗೂ ಪ್ರವೇಶ ಪಡೆದ 22ರ ತರುಣ. ತನ್ನ ಆವಾಸದಿಂದ ಕೇವಲ  200 ಮೀಟರ್ ದೂರದ ನಿವಾಸದಲ್ಲಿ ತನ್ನಂತಹದೇ ಸಾಮಾನ್ಯ ತರುಣರಿಬ್ಬರನ್ನು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿದ್ದನ್ನು  ಅರಿತಾಗ ಛಿದ್ರವಾಗುವ ಅವನ ಲೋಕ!

Read More...