About the Author

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು.

ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ಎ.  ಪದವಿ (1985) ಪಡೆದರು.

ರೇಷ್ಮೆ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಶಿವಮೊಗ್ಗ ಜಿಲ್ಲೆಯ ಮಂಜುಶ್ರೀ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಕಾವ್ಯಾಂಜಲಿ ಮತ್ತು ನೀಲಾಂಜಲಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಒಲವನ್ನು ಹೊಂದಿರುವ ಬಸವರಾಜ ಮಠಪತಿಯವರು ಕ್ಷಿತಿಜ್ ಮತ್ತು ಕಿಂಸ್ತುಘ್ನ ಎಂಬ ಕಾವ್ಯನಾಮದಿಂದ ಕೃತಿ ರಚನೆ ಮಾಡಿದ್ದಾರೆ.

ಇವರು ಬರೆದ ಕೃತಿಗಳು :  ಅಮಲು, ಪ್ರೀತಿಸಿದವನು ನೀನೊಬ್ಬನೇ ಅಲ್ಲ, ಕಿಂಡಿ, ಕಬ್ಬಿನ ಬನದಲ್ಲಿ, ಪ್ರೀತಿ ಅರಳಿತು, ಪತ್ತೆದಾರಿ ಇರುವೆ ಎಂಬ ಇವರ ಬರೆದ  ಮಕ್ಕಳ ಕಥೆ ಕನ್ನಡ ಪಠ್ಯಕ್ಕೆ 2003 ರಲ್ಲಿ ಆಯ್ಕೆಯಾಗಿದೆ

ಪುಸ್ತಕ ಪ್ರಕಟನೆಗಳು  : ನಾನು ಮತ್ತು ನಮ್ಮವರು ( ಕವನ ಸಂಕಲನ), ಮಣ್ಣಿನಿಂದ ರೇಷ್ಮೆ ( ಉದ್ಯಮ ಮಾಹಿತಿ) ಹೇಗಾದರು ಬದುಕು ( ವಿಚಾರ ಲಹರಿ) ಅನರ್ಥ ನೆರಳಿನಷ್ಟೇ ಕತ್ತಲು, ಗಿಳಿಮಣಿ, ಕಾಯುವುದಿಲ್ಲ,  ಕಥಾಸಂಕಲನ. ಭಾವಶುದ್ದಿ ( ವಿಚಾರಧಾರೆ) ರೇಷ್ಮೆಯ ಗೂಡು (ಮಾಹಿತಿ) ನೆರಳಿನಷ್ಟೇ ಕತ್ತಲು (ಕಥಾಸಂಕಲನ ) ಹೊಸ್ತಿಲಾಚೆ, ಕಬ್ಬಿನ ಬನದಲ್ಲಿ ,ಕೀ ರಿಂಗ (ಪತ್ತೆದಾರಿ ಕಾದಂಬರಿಗಳು).

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

(01 Jun 1954)