ಕಿಂಡಿ 

Author : ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

Pages 132

₹ 95.00




Year of Publication: 2009
Published by: ಸಚಿನ್ ಪಬ್ಲಿಷರ್‍ಸ್
Address: 624, 9ನೇ ಡಿ ಮೇನ್, ಹಂಪಿನಗರ, ಬೆಂಗಳೂರು—560104
Phone: 080-23403307

Synopsys

ಮಿನಿ ಮಿನಿ ಭಾವಕ್ಕೆ ಪ್ರಾಶಸ್ತ್ಯ . ಮಿನಿ ಕಥೆಗಳ ಸಂಗ್ರಹಕ್ಕೆ 'ಕಿಂಡಿ'. ಕಿಂಡಿ ಕತೆ ತುಷಾರದಲ್ಲಿ ಮೊದಲಿಗೆ ಪ್ರಕಟವಾಗಿತ್ತು.  ಬದುಕನ್ನು ಕಿಂಡಿ ಮುಖಾಂತರ ಗಮನಿಸುವುದು ಎಂಬ ಗೂಡಾರ್ಥ ಇದಕ್ಕಿದೆ.  ಹಿರಿಯ ಬರಹಗಾರ ಹಾಲಾಡಿ ಮಾರುತಿರಾವ್ ಅವರ ಮುನ್ನುಡಿಯಿದೆ. ಪುಸ್ತಕದ ಕೊನೆಯಲ್ಲಿ ಲೇಖಕರ ಸ್ವಯಂ ಸಂವಾದ ಸಂದರ್ಶನ ಇದೆ.  ಈ ಸಂಕಲನ ಬಹುತೇಕ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
 

About the Author

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)
(01 June 1954)

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...

READ MORE

Related Books