About the Author

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ಸಂಘಟನೆಗಳ ಮುಖಂಡರಾಗಿ, ಅನೇಕ ಸಂಸ್ಥೆಗಳ ಸ್ಥಾಪಕರಾಗಿಯೂ , ಪಿಯು ಪಠ್ಯರಚನಾ ಮಂಡಳಿಯ ಸಂಚಾಲಕರಾಗಿಯೂ ಕೆಲಸ ಮಾಡಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 

ಎಲ್. ಎನ್. ಮುಕುಂದರಾಜ್