ಶಿರೋಮಣಿ

Author : ಎಲ್. ಎನ್. ಮುಕುಂದರಾಜ್



Year of Publication: 2022
Published by: ಸ್ನೇಹ ಪಬ್ಲಿಕೇಷನ್ ಹೌಸ್
Address: ಮಾರೇನಹಳ್ಳಿ ವಿಜಯನಗರ ಬೆಂಗಳೂರು 560040
Phone: 9845062549

Synopsys

ಅಂಬಾಮಣಿಮೂರ್ತಿ ಅವರ ಆತ್ಮಕಥನ, ವ್ಯಕ್ತಿ ಚಿತ್ರಣ, ಕೃತಿವಿಮರ್ಶಾ ಸಂಕಲನ ಎಲ್‌.ಎನ್. ಮುಕುಂದರಾಜ್ ಸಂಪಾದಕತ್ವದ ಕೃತಿ ‘ಶಿರೋಮಣಿ’. ಈ ಕೃತಿಯಲ್ಲಿ ಲೇಖಕಿಯ ಜೀವನ, ಬಾಲ್ಯದ ನೆನಪುಗಳು, ಬೆಳವಣಿಗೆ, ಶಿಕ್ಷಣ, ವೃತ್ತಿ ಬದುಕು ಇತ್ಯಾದಿ ವಿಚಾರಗಳನ್ನು ಕಾಣಬಹುದು. ಅನಾರೋಗ್ಯ ಸಮಸ್ಯೆಯ ದಿನಗಳು, ಕ್ಯಾನ್ಸರ್‌ ಕುತ್ತಿನಿಂದ ಪಾರಾದ ಸನ್ನಿವೇಶ ಹೀಗೆ ಕೆಲವೊಂದು ಬರಹಗಳು ಮನಸ್ಸು ತಟ್ಟುತ್ತದೆ. ಕವನಗಳನ್ನು ಬರೆಯುತ್ತಿದ್ದ ಲೇಖಕಿ ಮುಂದೆ ಪ್ರಚಲಿತ ವಿಷಯಗಳ ಬಗ್ಗೆ ಪ್ರಬಲವಾಗಿ ಧ್ವನಿಯೆತ್ತುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಸಿಡಿದೇಳುವ ಗುಣವನ್ನು ಬೆಳೆಸಿಕೊಂಡದನ್ನು ಕಾಣಬಹುದು. ಅಷ್ಟೇಅಲ್ಲದೇ ನಾಡಿನ ಗಣ್ಯರ, ಖ್ಯಾತನಾಮರ, ಮಠಾಧೀಶರ ನುಡಿಗಳೂ ಕೃತಿಯಲ್ಲಿ ಪಾಲುಪಡೆದುಕೊಂಡಿದೆಎ. ಇಲ್ಲಿನ ಹಲವು ಲೇಖನಗಳು ಅಂಬಾಮಣಿ ಅವರ ಕೃತಿಗಳನ್ನು, ಮಾಧ್ಯಮ ಬರಹಗಳನ್ನು ಪೂರ್ಣ ಓದಿ ಬರೆದಂತಿವೆ. ಹಿರಿಯ ಲೇಖಕಿಯೊಬ್ಬರ ಜೀವನಗಾಥೆಯನ್ನು ಕಟ್ಟಿಕೊಡುವ ನೆಪದಲ್ಲಿ ಹಲವು ವೈಚಾರಿಕ ಹೊಳಹುಗಳನ್ನು ನಾಡಿನ ಪ್ರಮುಖ ಬರಗಾರರ ಮೂಲಕ ತೆರೆದಿಟ್ಟಿದೆ ಈ ಕೃತಿ. ಒಟ್ಟಾರೆಯಾಗಿ ಶಿರೋಮಣಿ ಕೃತಿಯು ವ್ಯಕ್ತಿ ಚಿತ್ರಣದ ಜೊತೆಗೆ ಓದುಗರಿಗೆ ಸ್ಪೂರ್ತಿ ತುಂಬುವ ಹಲವಾರು ವಿಚಾರಗಳನ್ನು ಒಳಗೊಂಡಿದೆ.

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Reviews

Related Books