About the Author

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.  

ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ವಿವಿಧೆಡೆ ಸೇವೆ ಸಲ್ಲಿಸಿದ್ದು, ಕೂಡ್ಲಿಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾಡೆಮಿ ಕೂಡ್ಲಿಗಿ ತಾಲೂಕು ಸಂಚಾಲಕರು, ಸೇಡಂ ಶಾಖೆಯ ಭಾರತ ವಿಕಾಸ ಪರಿಷತ್ ಅಧ್ಯಕ್ಷರು ಹೀಗೆ ವಿವಿಧ ಹುದ್ದೆ ಹಾಗೂ ಸಾಮರ್ಥ್ಯಗಳಡಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸೇವಾ ನಿವೃತ್ತರು. ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಸಂಘಟಕ ಪ್ರಶಸ್ತಿ, ಹಾವೇರಿ ಜಿಲ್ಲಾಮಟ್ಟದ ಮಾರ್ಗದರ್ಶಿ ಪ್ರಶಸ್ತಿ, ರಾಜ್ಯಮಟ್ಟದ ಅತ್ಯುತ್ತಮ ಮಾರ್ಗದರ್ಶಿ ಶಿಕ್ಷಕ ಪ್ರಶಸ್ತಿ, ಕೊಟ್ಟೂರಿನ ದಿನಕರ ದೇಸಾಯಿ ಸಾಹಿತ್ಯ ಸಂಘಟನಾ ವೇದಿಕೆಯಿಂದ ಸನ್ಮಾನ, ಸೇಡಂನ ಪಂ. ಪುಟ್ಟರಾಜ ಜಾನಪದ ಕಲಾವೇದಿಕೆ ಪ್ರಶಸ್ತಿ, ಸೇಡಂ ತಾಲೂಕು ಗಡಿನಾಡು ಸಾಹಿತ್ಯ ಸಮ್ಮೇಳನದ (ಮುಧೋಳ ಗ್ರಾಮ) ಅಧ್ಯಕ್ಷತೆ ವಹಿಸಿದ್ದರು. ಸೇಡಂನ ಅಮ್ಮ ಗೌರವ ಪ್ರಶಸ್ತಿ ದೊರಕಿದೆ.  ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನವು ಸಾಹಿತ್ಯ ಸಾರಥಿ ಪ್ರಶಸ್ತಿ ನೀಡಿ ಗೌರವಿಸಿದೆ.  ಕೊಟ್ಟೂರಿನಲ್ಲಿ ಬಯಲು ಸಾಹಿತ್ಯ ವೇದಿಕೆಯ ಸ್ಥಾಪಕ ಕಾರ್ಯದರ್ಶಿ,  ಸೇಡಂನಲ್ಲಿ ಸಮ ಸಾಹಿತ್ಯ ವೇದಿಕೆ ಸಂಸ್ಥಾಪಕ ‌ಸಂಚಾಲಕರೂ ಆಗಿದ್ದರು. .

ಕೃತಿಗಳು : ಕೆಂಪು ಚಿತ್ತಾರ (ಕವನ ಸಂಕಲನ), ನಿಂಬೋಳಿ ತಿಪ್ಪನವರ ನಿತ್ಯಾನಂದ ತತ್ವಪದಗಳು (ಸಂಪಾದನೆ), ಬೇಸೂರಿನ ಹಾಡು (ಕವನ ಸಂಕಲನ), ವಿಶ್ವಬಂಧು ಮರುಳಸಿದ್ಧ ಕಾವ್ಯದರ್ಶನ (ಗದ್ಯರೂಪ), ಬಯಲ ದನಿಗಳು (ಕವನ ಸಂಕಲನ), ಸದ್ಧರ್ಮ (ಸ್ಮರಣ ಸಂಕಲನ-ಸಂಪಾದಕ), ಪುಟ್ಟ-ಪುಟ್ಟಿ (ಕವನ ಸಂಕಲನ), ಅಂತರಂಗ (ಲೇಖನಗಳ ಸಂಕಲನ), ಕನಸ ಕೆಡಿಸಿದ ಕೋಳಿ (ಕವನ ಸಂಕಲನ), ಒಲವಿನ ಹಾಡು (ಕವನ ಸಂಕಲನ), ಆಸರೆಯಾದವನು (ಜೀವನ ಚಿತ್ರಗಳು-ಸಂಪಾದಕ), ಹರಿದ ಸೆರಗು (ಕಥಾ ಸಂಕಲನ), ಓದಿನ ಬೊಗಸೆ (ವಿಮರ್ಶಾ ಲೇಖನಗಳ ಸಂಕಲನ), ಗುಡ್ಡದ ಮೈಲಾರಲಿಂಗನ ವಚನಗಳು (ವಚನಗಳ ಸಂಕಲನ).

ಲಿಂಗಾರೆಡ್ಡಿ ಶೇರಿ

(01 Apr 1951)