ಅಂತರಂಗ

Author : ಶಿವಾನಂದ ಕಲಬುರಗಿ

Pages 98

₹ 80.00
Year of Publication: 2020
Published by: ಸಾಹಿತ್ಯ ಸಂಭ್ರಮ ಪ್ರಕಾಶನ
Address: ,#43, 10 ನೇ ಕ್ರಾಸ್, ಜ್ಞಾನಗಂಗಾನಗರ, ಜ್ಞಾನಭಾರತಿ ಪೋಸ್ಟ್, ಬೆಂಗಳೂರು-560056,
Phone: 7676985533

Synopsys

ಕವಿ ಶಿವಾನಂದ ಕಲಬುರ್ಗಿ ಅವರ ’ಅಂತರಂಗ’ ಕೃತಿಯು ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸುಜಾತಾ ಛಲವಾದಿ, ‘ಅಸ್ಪ್ರಶ್ಯತೆಯ ಒಂದೊಂದು ಜಾಡನ್ನು ಹಿಡಿದು ಜಾಲಾಡಿದ ಬಗೆಯನ್ನು ಇಲ್ಲಿ ಕಾಣಬಹುದು. ಯಾವುದರಿಂದ ಯಾವುದು, ಯಾರಿಂದ ಯಾರು ಎನ್ನುವ ಪ್ರಶ್ನೆಗಳ ಮುಖಾಂತರ ಸಾಮಾಜಿಕ ಅಸಮಾನತೆಯ ಕರಿನೆರಳನ್ನು ತೊಡೆದು ಹಾಕುವ ಹಾಗೂ ಪ್ರಶ್ನೆಯನ್ನು ಮಾಡುವದು ಒಬ್ಬಸಮಾಜಮುಖಿ ಕವಿಯ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುತ್ತದೆ. ಹೆಣ್ಣಿನ ಮೇಲೆ ಇರುವ ಅನನ್ಯ ಕಾಳಜಿಯ ಈ ಕವಿತೆ ಹೆಣ್ಣು ಕೇವಲ ಕೆಲವು ಕೆಲಸಗಳಿಗೆ ಸೀಮಿತವಾದವಳು ಅಲ್ಲ. ಅವಳು “ ಅದ್ಭುತ ಶಕ್ತಿ” ಎಂದು ಹೇಳುವ ಕವಿಯು ಹೆಣ್ಣಿನ ಬಗ್ಗೆ ಪ್ರೀತಿ, ಆದರ ಹಾಗೂ ಗೌರವ ಇಲ್ಲಿ ಮುಖ್ಯವಾಗಿ ಕಾಣಿಸುತ್ತದೆ. ಈ ಕವಿತೆಯು ಹಸಿವು, ಬಡತನ, ಹಪಾಹಪಿ, ನೊವಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ದುಡಿದು ಬಸವಳಿದು ಬಂದ ಬಡ ಜನರ ಪಾಡನ್ನು ಹಾಡಾಗಿಸಿದ್ದಾರೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ಶಿವಾನಂದ ಕಲಬುರಗಿ
(01 May 1982)

ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಹಲವು ನುಡಿಗಳ ನಡಿಗೆ ಇವರ ವಿಮರ್ಶೆ ಕೃತಿ. ಅಂತರಂಗ, ನೆತ್ತರ ಸಿದ ನೆಲ, ಬೆಂದ ಬೇರು ನೊಂದ ಚಿಗುರು-ಕವನ ಸಂಕಲನಗಳು. ಹಸಿವು ತಣಿಸಿದವಳು- ಸಣ್ಣ ಕಥೆಗಳ ಸಂಕಲನ. ಕಾವ್ಯಪ್ರಿಯ ಶಿವು ಎಂಬುದು ಇವರ ಕಾವ್ಯನಾಮ.  ...

READ MORE

Related Books