ಒಲವಿನ ಹಾಡು

Author : ಲಿಂಗಾರೆಡ್ಡಿ ಶೇರಿ

Pages 100

₹ 75.00




Year of Publication: 2014
Published by: ಶ್ರೀ ಸಸಾ ಪ್ರಕಾಶನ
Address: ಜಾಕನಹಳ್ಳಿ-585318, ತಾ: ಸೇಡಂ, ಜಿಲ್ಲೆ: ಕಲಬುರಗಿ

Synopsys

ಕವಿ ಲಿಂಗಾರೆಡ್ಡಿ ಶೇರಿ ಅವರ ಕವನ ಸಂಕಲನ-ಒಲವಿನ ಹಾಡು. ಇಲ್ಲಿಯ ಕವನಗಳು ವಸ್ತುವೈವಿಧ್ಯತೆಯಿಂದ ಓದುಗರ ಗಮನ ಸೆಳೆಯುತ್ತವೆ. ಒಟ್ಟು 73 ಕವನಗಳಿವೆ. ಕವಿ ಹೇಳುವಂತೆ " ನನ್ನ ಒಲವಿನ ಹಾಡು ಚೆಲ್ಲುವರಿದ ರೀತಿ, ಎದೆಯೊಳಗೆ ಹುಟ್ಟಿದ ಹಾಡನ್ನು ಹಾಗೇ ಬರೆದಿಟ್ಟ ಬಗೆಯದು. ಸಾಂದರ್ಭಿಕ ರಚನೆಗಳು ಇಲ್ಲಿವೆ. ಹೀಗಾಗಿ ಇಲ್ಲಿನ ಕವಿತೆಗಳಲ್ಲಿ ಒಲವು,ನಿಸರ್ಗ ಪ್ರೀತಿ, ವ್ಯಕ್ತಿತ್ವದ ಪ್ರೀತಿ, ವಿಭಿನ್ನ ಅಭಿರುಚಿಗಳು ಸಾಕಾರಗೊಂಡು ಅರಳಿವೆ’ ಎನ್ನುತ್ತಾರೆ. ಸಾಹಿತಿ ಮುಡಬಿ ಗುಂಡೇರಾವ್ ಅವರು ಬೆನ್ನುಡಿ ಬರೆದು ಕವಿಯ ಕವನಗಳ ರಚನೆಯನ್ನು ಶ್ಲಾಘಿಸಿದ್ದಾರೆ.  .

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books