ಅಪ್ಪನ ಹೆಗಲ ಮೇಲೆ

Author : ಲಿಂಗಾರೆಡ್ಡಿ ಶೇರಿ

Pages 78

₹ 75.00




Year of Publication: 2021
Published by: ಶ್ರೀ ಸಸಾ ಪ್ರಕಾಶನ
Address: ಜಾಕನಹಳ್ಳಿ, ತಾಲೂಕು ಸೇಡಂ, ಜಿಲ್ಲೆ ಕಲಬುರಗಿ-585222
Phone: 9731666056

Synopsys

ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಅವರ ಕವನ ಸಂಕಲನ ‘ಅಪ್ಪನ ಹೆಗಲ ಮೇಲೆ’. ಸಾಹಿತಿ ಡಾ. ಶಿವಕುಮಾರ ಕಂಪ್ಲಿ ಅವರು ಕೃತಿಗೆ ಮುನ್ನುಡಿ ಬರೆದು ‘ಇವರ ಕವಿತೆಗಳು ಕುಟುಂಬ ಸಖ್ಯಕ್ಕಿಂತ ಸಮಾಜ ಸಖ್ಯದ ಆನಂದವನ್ನೇ ಬಯಸುತ್ತವೆ. ಕವಿ ಏನನ್ನು ಬರೆಯುತ್ತಾನೆ?, ಯಾಕೆ ಬರೆಯುತ್ತಾನೆ? ಎಂಬ ಸಂವಹನ ರೀತಿಗಳೇ ಆತನ ಸಂವಹನ ಸಾಮರ್ಥ್ಯಗಳನ್ನು ಅರ್ಥೈಸಬಲ್ಲವು. ಸಾಮಾಜಿಕ ಎಂಬ ಆವರಣ ರೂಪಿಸಿಕೊಂಡ ಶೇರಿ ಅವರ ಕವಿತೆಗಳು, ಕೋಣೆಯ ಕಾಲ್ಪನಿಕ ಉದ್ದಮಗಳಲ್ಲ; ಅವು ಮಾತು ಬಾರದವರ ಬಯಲಿನ ಬೆವರಿನ ಹನಿಗಳು. ಬದುಕನ್ನು ಕಾಣುವ ಮತ್ತು ಕಾಣಿಸುವ ಅಶಕ್ತ ಕವಿತೆಗಳ ನಡುವೆ ಇವರ ಕವಿತೆಗಳು ಭಾವ ಸೂಕ್ಷ್ಮತೆಯ ಸರಳತನದೊಳಗೂ ಜವಾಬ್ದಾರಿಯ ಗಹನತೆಯನ್ನು ತೋರಬಲ್ಲವು’ ಎಂದು ಶ್ಲಾಘಿಸಿದ್ದಾರೆ.

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರು ಕೃತಿಗೆ ಬೆನ್ನುಡಿ ಬರೆದು ‘ಕಾವ್ಯದ ಬಗ್ಗೆ ಇಂದಿಗೂ-ಎಂದಿಗೂ ಕುತೂಹಲ ಮತ್ತು ಹಸಿವು ಇಟ್ಟುಕೊಂಡೇ ಬರೆಯುವ ಲಿಂಗಾರೆಡ್ಡಿ ಸೇರಿ ಅವರ ಕವಿತೆಯ ಕಥನ ವರ್ಣನೆ ತೀರಾ ಅಪರೂಪ. ಹಳತು ಹೊಸದಾಗುವುದಕ್ಕಿಂತ ಹೊಸದು ಇನ್ನಷ್ಟು ಹೊಸದಾಗುವ ಕ್ರಿಯಾವಂತಿಕೆ. ಸದಾ ಭಾವಗಳನ್ನು ತಬ್ಬಿಕೊಳ್ಳುವ ಶೇರಿ ಅವರು ನಿರಂತರ ಚಲನಶೀಲತೆ, ಅನುಭವಗಳ ಪ್ರಾಮಾಣಿಕತೆ ಮತ್ತು ಸಂವೇದನೆಗಳ ತಾಜಾದೃಷ್ಟಿಯುಳ್ಳದ್ದು ಅವರ ಕಾವ್ಯ ಜಗತ್ತು. ಜಗತ್ತಿನ ಕಾವ್ಯ ಮರುವ್ಯಾಖ್ಯಾನಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಳೆಯ ಸಿದ್ಧರೂಪದಲ್ಲಿ ಹೊಸತನದಲ್ಲಿ ಅದ್ದಿ ತೆಗೆಯುವ ಕಾಲಘಟ್ಟದಲ್ಲಿ ಇಂತಹ ಯಾವ ಚಹರೆಗಳಿಲ್ಲದೇ ಸರಳವಾಗಿ ಕವಿತೆ ಹೇಳುವುದಕ್ಕೆ ತಲ್ಲೀನತೆ ಅಗತ್ಯ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅಂತಹ ಹದವನ್ನು ಕಾಯ್ದುಕೊಂಡೇ ಮನಸ್ಸು ಸೂರೆಗೊಳ್ಳವ ಕವಿತೆಗಳು ‘ಅಪ್ಪನ ಹೆಗಲ ಮೇಲೆ’ ಸಂಕಲನದಲ್ಲಿವೆ' ಎಂದು ಪ್ರಶಂಸಿಸಿದ್ದಾರೆ. .

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books