ಬಜೆಟ್ ಪ್ರಾಥಮಿಕ ಪರಿಚಯ

Author : ಟಿ.ಆರ್‌. ಚಂದ್ರಶೇಖರ

Pages 96

₹ 100.00




Year of Publication: 2022
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

‘ಬಜೆಟ್ ಪ್ರಾಥಮಿಕ ಪರಿಚಯ’ ಕೃತಿಯು ಟಿ.ಆರ್. ಚಂದ್ರಶೇಖರ ಅವರ ಲೇಖನಗಳ ಸಂಕಲನವಾಗಿದೆ. ಬಿ. ರಾಜಶೇಖರಮೂರ್ತಿ ಅವರು, ಒಂದು ಕುಟುಂಬದ ಸಂಪಾದನೆ ಮತ್ತು ಖರ್ಚಿನ ವಿವರದ ಬಗ್ಗೆ ಅರಿವಿಟ್ಟುಕೊಂಡರೆ ಆ ಕುಟುಂಬದ ಆಯ-ವ್ಯಯದ ಅಂದಾಜಾಗುತ್ತದೆ .ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯ-ವ್ಯಯದ ವಿವರಗಳು ಜನಸಾಮಾನ್ಯರಿಗೆ ತಿಳಿದರೆ ಆಡಳಿತ ಯಂತ್ರದ ಬಗ್ಗೆ ಅರಿವು ಮೂಡಿ ಸಾಮಾಜಿಕ ಜವಾಬ್ದಾರಿ ಜನ ಸಮುದಾಯದಲ್ಲಿ ಬೆಳೆಯುತ್ತದೆ. ಹಾಗಾಗಿ ಬಜೆಟ್ ಬಗ್ಗೆ ಎಲ್ಲರಿಗೂ ಅರಿವಿರುವುದು ಸುಕ್ಷೇಮ ಮತ್ತು ಸುಗಮ ಆಡಳಿತಕ್ಕೆ ನಾಂದಿ ಹಾಡುತ್ತದೆ. ಅದು ಕೇವಲ ಅಂಕಿ-ಅಂಶಗಳ ಬಗ್ಗೆ ಆಗಿರದೇ ಪ್ರತಿ ಹಣದ ಲೆಕ್ಕಾಚಾರವೂ ಕೂಡ ತೆರಿಗೆ ತುಂಬುವ ನಮಗೆ ದೊರೆಯಬೇಕು. ಆದರೆ ಈಗಿನ ನಾಗರಿಕರಲ್ಲಿ ಸರ್ಕಾರದ ಬಜೆಟ್ ಬಗ್ಗೆ, ಜಾಡ್ಯವೊಂದು ಬೆಳೆದು ಬಿಟ್ಟಿದ್ದು ಒಂದು ಸಮೂಹವೋ, ಗುಂಪೋ ಆಗಿ ಪೂರ್ವಾಗ್ರಹ ಪೀಡಿತ ಆಲೋಚನೆಗಳೊಂದಿಗೆ 'ಅಯ್ಯೋ, ನಮಗೇನು ಸಿಕ್ಕಿದೆ?' ಎಂದು ಕರುಬಿ ನಂತರ ಸುಮ್ಮನಾಗಿ ಬಿಡುತ್ತಾರೆಯೇ ಹೊರತು ಯಾವುದೇ ಕಾರಣಕ್ಕೂ ಇದು ನಮ್ಮ ಹಣ ಇದನ್ನು ಸರ್ಕಾರ ಎಲ್ಲಿ ಹೇಗೆ ವಿನಿಯೋಗಿಸುತ್ತಿದೆ? ಮತ್ತಲ್ಲಿಂದ ಹಣ ಸರ್ಕಾರಕ್ಕೆ ಒದಗುತ್ತದೆ? ಎಲ್ಲಿ ಎಲ್ಲಿ ಸರ್ಕಾರ ಸಾಲ ತೆಗೆದುಕೊಂಡಿದೆ? ಯಾವ ಯಾವ ದೇಶಕ್ಕೆ ಸಾಲ ಕೊಟ್ಟಿದೆ? ಎಂಬ ಮಹತ್ವದ ಮಾಹಿತಿಗಳ ಬಗ್ಗೆ ಮೌನ ತಾಳಿ ಹಗರಣಗಳಿಗೆ ನಾವೇ ವೇದಿಕೆಯಾಗುತ್ತೇವೆ ಎಂದಿದ್ದಾರೆ.

About the Author

ಟಿ.ಆರ್‌. ಚಂದ್ರಶೇಖರ
(07 April 1951)

ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್‌. ಚಂದ್ರಶೇಖರ್‌ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...

READ MORE

Related Books