ದೇವಾಲಯ ವಾಸ್ತುಶಿಲ್ಪ ಪರಿಚಯ

Author : ಕೂ.ಸ. ಅಪರ್ಣ

Pages 228

₹ 300.00




Year of Publication: 2021
Published by: ಪ್ರಸಾರಾಂಗ
Address:  ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಹಂಪಿ -583276
Phone: 9449566951

Synopsys

ಡಾ.ಕೂ.ಸ.ಅಪರ್ಣ ಅವರು ಬರೆದಿರುವ ' ದೇವಾಲಯ ವಾಸ್ತುಶಿಲ್ಪ ಪರಿಚಯ ' ಪುಸ್ತಕವು ದೇವಾಲಯ ವಾಸ್ತುಶಿಲ್ಪವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಸಹಾಯ ಮಾಡುವ ಒಂದು ವಿಶಿಷ್ಟ ಮಾರ್ಗದರ್ಶಿ ಕೃತಿಯಾಗಿದೆ. ದೇವಾಲಯ ವಾಸ್ತುಶಿಲ್ಪವನ್ನು ಕನ್ನಡದಲ್ಲಿ ಶಾಸ್ತ್ರೀಯವಾಗಿ ಪರಿಚಯಿಸುವ ಪುಸ್ತಕ ಇದಾಗಿದ್ದು, ಭಾರತದಲ್ಲಿ ದೇವಾಲಯಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಅಲ್ಲದೆ ಸಾಮಾಜಿಕ, ಆಡಳಿತಾತ್ಮಕ ಹಾಗೂ ಆರ್ಥಿಕ ಕೇಂದ್ರಗಳು ಸಹ ಆಗಿದ್ದವು ಎಂಬುದನ್ನು ನಮ್ಮ ಪ್ರಾಚೀನ ಶಾಸನಗಳು ಸಮರ್ಥವಾಗಿ ಮಾಹಿತಿ ನೀಡುತ್ತವೆ. ಅಲ್ಲದೆ, ವಾಸ್ತುಶಿಲ್ಪ, ಮೂರ್ತಿಶಿಲ್ಪ ಮತ್ತಿತರ ದೃಷ್ಟಿಯಿಂದ ಅದೊಂದು ಕಲಾವೈಭವವೂ ಆಗಿತ್ತು ಎಂಬುದಕ್ಕೆ ಆ ಕಾಲದ ದೇವಾಲಯಗಳೇ ಸಾಕ್ಷಿಯಾಗಿವೆ. ಕೃತಿಯ ಪರಿವಿಡಿಯಲ್ಲಿ : ದೇವಾಲಯ : ವಿಷಯ ಪ್ರವೇಶ, ಊರ್ಧ್ವಮುಖ ರಚನೆಗಳು, ತಿರ್ಯಙ್ಮುಖ ರಚನೆಗಳು, ಅಲಂಕಾರಿಕ ಭಾಗಗಳು , ಬಾಹ್ಯ ವಾಸ್ತುರಚನೆಗಳು, ಅನುಬಂಧಗಳು ಹೀಗೆ ಪುಸ್ತಕವನ್ನು ಅತ್ಯಂತ ನಿಖರ ಮಾಹಿತಿಯೊಡನೆ ನಿರೂಪಿಸಲಾಗಿದೆ. 

 

About the Author

ಕೂ.ಸ. ಅಪರ್ಣ
(12 August 1957)

’ಸಂಗಮರ ದೇವಾಲಯಗಳ’ ಶೀರ್ಷಿಕೆಯಡಿ ಡಾ. ಅಪರ್ಣಾ ಕೂ.ಸ. ಅವರು ಹಂಪಿಯ ಕನ್ನಡ ವಿ.ವಿಯಿಂದ ಡಾಕ್ಟರ್‍ ಆಫ್ ಲಿಟರೇಚರ್ ಪಡೆದಿರುವರು. ಈ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ದೇವಾಲಯಗಳ ವಾಸ್ತುಶಿಲ್ಪ ಕುರಿತಂತೆ ಶಾಸ್ತ್ರೀಯ ಕೃತಿ ಸೇರಿದಂತೆ ಹಲವು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.  ವಿಜಯನಗರದ ಶಾಸನಗಳು ಹಾಗೂ ಅಧ್ಯಯನ ವಲಯದಲ್ಲಿ ಆಸಕ್ತಿ ಇದ್ದು, ಬಿಎಸ್ ಎನ್ ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ...

READ MORE

Related Books