ಹೊಯ್ಸಳ ವಾಸ್ತುಶಿಲ್ಪ

Author : ಎಸ್. ಶ್ರೀಕಂಠಶಾಸ್ತ್ರೀ

Pages 232

₹ 200.00




Year of Publication: 2014
Published by: ಕಾಮಧೇನು ಪುಸ್ತಕ ಪ್ರಕಾಶನ
Address: # 5, 1, ನಾಗಪ್ಪ ಬೀದಿ, ನೆಹರು ನಗರ, ಶೇಷಾದ್ರಿಪುರಂ, ಬೆಂಗಳೂರು-560020
Phone: 09449446328

Synopsys

ಹೊಯ್ಸಳ ವಾಸ್ತುಶಿಲ್ಪ -ಚಿಂತಕ ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರ ಸಂಶೋಧನಾತ್ಮಕ ಕೃತಿ. ಕರ್ನಾಟಕದ ಇತಿಹಾಸದಲ್ಲಿ ಹೊಯ್ಸಳ ಅರಸು ಮನೆತನಕ್ಕೆ ತನ್ನದೇ ಆದ ಸ್ಥಾನವಿದೆ. ರಾಜ್ಯ ವಿಸ್ತರಣೆಗಿಂತ ಕಲಾತ್ಮಕವಾಗಿ ನಾಡನ್ನು ಶ್ರೀಮಂತಗೊಳಿಸುವಲ್ಲಿ ಹೊಯ್ಸಳ ಅರಸು ವಂಶ ಪ್ರಸಿದ್ಧಿ ಪಡೆದಿದೆ. ಅದಕ್ಕೆಂದೇ ಹೊಯ್ಸಳ ವಾಸ್ತುಶಿಲ್ಪವನ್ನು ಇತಿಹಾಸದ ವಿಶೇಷ ಭಾಗವಾಗಿ ಅಧ್ಯಯನ ಮಾಡಲಾಗುತ್ತಿದೆ. ಕಲೆಗೆ ಹೊಯ್ಸಳರು ನೀಡಿದ ಪ್ರಾಮುಖ್ಯತೆಯು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಯೂ ಆಗಿದೆ. ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು, ಸೋಮನಾಥಪುರ ಹೀಗೆ ವಿವಿಧೆಡೆ ಇರುವ ಕಲಾ ವೈಭವವು ಹೊಯ್ಸಳರ ಕಲೆ ಪ್ರೀತಿಗೆ ಕನ್ನಡಿ ಹಿಡಿಯುತ್ತವೆ. ಬೇಲೂರು, ಹೊಯ್ಸಳರ ರಾಜಧಾನಿ ಆಗಿತ್ತು. ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ ಆಗಿದೆ. ಈ ಕುರಿತ ಐತಿಹಾಸಿಕ ಮಾಹಿತಿ ಒಳಗೊಂಡ ಕೃತಿ ಇದು.

About the Author

ಎಸ್. ಶ್ರೀಕಂಠಶಾಸ್ತ್ರೀ
(04 November 1904 - 10 May 1974)

ಡಾ. ಎಸ್. ಶ್ರೀಕಂಠ ಶಾಸ್ತ್ರೀ ( ಸೊಂಡೆಕೊಪ್ಪ ಶ್ರೀಕಂಠ ಶಾಸ್ತ್ರೀ) ಮೂಲತಃ ನಂಜನಗೂಡಿನವರು. ಆದರೆ, ಇವರ ಪೂರ್ವಜರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಸೊಂಡೆಕೊಪ್ಪದವರು. 1904ರ ನವೆಂರ್ 4 ರಂದು ಜನನ. ಸಿಡುಬು ರೋಗಕ್ಕೆ ತುತ್ತಾಗಿ ಎಡಗಣ್ಣು, ಎಡಗಿವಿಯ ಶಕ್ತಿ ಕಳೆದುಕೊಂಡಿದ್ದರು.  ಕೋಲಾರದಲ್ಲಿ ಪ್ರೌಢಶಾಲೆವರೆಗೂ ಶಿಕ್ಷಣದ ನಂತರ ಮೈಸೂರಿನಲ್ಲಿ ಓದು ಆರಂಭ. 1935 ರಲ್ಲಿ ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿ 32 ವರ್ಷದ ನಂತರ ನಿವೃತ್ತಿ.  ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್‌ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್  ಕಲಿತಿದ್ದರು. ಇತಿಹಾಸ ತಜ್ಞರೆಂದೇ ಖ್ಯಾತಿ ಪಡೆದಿದ್ದರು. ಎಂ.ಎ. ಅಧ್ಯಯನ ಮಾಡುತ್ತಿರುವಾಗಲೇ ಲಂಡನ್ ನ ಪ್ರತಿಷ್ಠಿತ ...

READ MORE

Related Books