ಐ ಆ್ಯಮ್ ಅನದರ್ ಯೂ

Author : ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

Pages 172

₹ 150.00




Year of Publication: 2013
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು- 560004
Phone: 9036312786

Synopsys

‘ಐ ಆ್ಯಮ್ ಅನದರ್ ಯೂ’ ಲೇಖಕಿ ಪ್ರಿಯಾ ಕುಮಾರ್ ಅವರ ಆಂಗ್ಲ ಕೃತಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡೀಕರಿಸಿದ್ದಾರೆ. ಲೇಖಕಿ ಪ್ರಿಯಾರೊಂದಿಗೆ ಓದುಗರು ಪ್ರಯಾಣ ಬೆಳೆಸುವಷ್ಟು ಈ ಕೃತಿಯು ಸೆಳೆಯುತ್ತದೆ. ನೆದರ್ಲೆಂಡಿಗೆ ಪ್ರಯಾಣ ಬೆಳೆಸುವ ಲೇಖಕರು, ಪ್ರತಿಯೊಂದು ರಿವಾಜಿನ ಅನುಭವವನ್ನೂ ಪಡೆದು,  ಅವರು ಹೇಗೆ ತಮ್ಮನ್ನು ತಾವು ಸರಿಪಡಿಸಿಕೊಂಡರು ಅನ್ನುವುದು ಓದುಗರಿಗೆ ಪಾಠವಾಗುತ್ತದೆ,

ಪ್ರತಿ ಅಧ್ಯಾಯವೂ ಅಚ್ಚರಿಯೊಂದಿಗೆ ತೆರೆದುಳ್ಳುತ್ತದೆ. ಸೋಲುಗಳನ್ನು ಗೆದ್ದು ಬರುವ ಸಂಭ್ರಮವನ್ನೂ ಇಲ್ಲಿ ಕಾಣುತ್ತೇವೆ. ಇದರೊಳಗಿನ ಅನುಭವಗಳು ಹೊಸ ಕಲಿಕೆಯೊಂದಿಗೆ ಹರಳುಗಟ್ಟುತ್ತಾ ಔದ್ಯೋಗಿಕವಾಗಿ, ವೈಯಕ್ತಿಕವಾಗಿ ಓದುಗರನ್ನು ಗೆಲುವಿನತ್ತ ಕರೆದೊಯ್ಯುತ್ತವೆ. ಹಲವು ಪಾಠಗಳು, ಹಲವು ಸತ್ಯಗಳು ಹಾಗೂ ಹಲವು ಒಳನೋಟಗಳಿಂದ ಕೃತಿಯು ಸಮೃದ್ಧವಾಗಿದೆ. 

About the Author

ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...

READ MORE

Related Books