ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ


‘ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ ಎನ್ನುತ್ತಾರೆ’ ಮೋಹನ್ ಕುಮಾರ್ ಟಿ. ಅವರು ಫೌಝಿಯ ಸಲೀಂ ಅವರ ‘ಕುಚುಕು’ ಕಾದಂಬರಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಫೌಝಿಯ ಸಲೀಂ ಅವರು ಬರೆದಿರುವ “ಕುಚುಕು” ಕಾದಂಬರಿಯಲ್ಲಿ ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ ಎಂಬುದರ ಬಗ್ಗೆ ತಿಳಿಸುತ್ತಾ ಹೋಗುತ್ತಾರೆ. ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು, ನಿಷ್ಠೆಯಿಂದ ಇರುವುದು, ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹವೆನ್ನುತ್ತಾರೆ.

ಶಾಲಾ ದಿನಗಳಿಂದ ಕೊನೆಯ ಉಸಿರಿನ ತನಕ ಜೊತೆಯಾಗಿರುವುದು ಸ್ನೇಹದ ಅಸ್ಮಿತೆ. ಆಟ, ಪಾಠ, ಊಟದ ಜೊತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಒಬ್ಬ ವ್ಯಕ್ತಿ ಹಂಚಿಕೊಳ್ಳುವುದು ಸ್ನೇಹಿತರೊಂದಿಗೆ ಮಾತ್ರ. ಜೀವನದ ಸಂತೋಷ, ಸಂಭ್ರಮ, ನೋವು, ನಲಿವು ಎಲ್ಲವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಮತ್ತು ಕಷ್ಟದ ದಿನಗಳಿಗೆ ಹೆಗಲು ನೀಡುವವರೇ ಸ್ನೇಹಿತರು.

ಕಥಾ ನಾಯಕಿಯ ಜೀವನ ಯಾವ ರೀತಿ ಬದಲಾಗುತ್ತದೆ? ಅವಳು ಇಷ್ಟಪಟ್ಟ ಜೀವನ ಅವಳಿಗೆ ಸಿಗುತ್ತದೆಯೋ? ಎನ್ನುವ ಪ್ರಶ್ನೆಗಳೊಂದಿಗೆ ಅನೇಕ ಕವಲು ದಾರಿಗಳಿಂದ ಕೂಡಿದ ಅವಳ ರೋಚಕ ಕತೆಯ ಮೂಲಕ, ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕಿ. ಬಿದ್ದಾಗ ಮೇಲೆಳಲು ಕೈ ಕೊಡುವ, ಗೆದ್ದಾಗ ಬೆನ್ನು ತಟ್ಟಿ ಬೆಂಬಲಿಸುವ ಗೆಳೆಯರಿದ್ದರೆ ಅದುವೇ ನಾವು ಜೀವನದಲ್ಲಿ ಗಳಿಸುವ ಆಸ್ತಿ ಎಂದರೆ ತಪ್ಪಾಗಲ್ಲ. ಕಷ್ಟಕ್ಕೆ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ ಗೆಳೆಯರಂತು ಖಂಡಿತವಾಗಿಯು ಬಂದೇ ಬರುತ್ತಾರೆ ಅನ್ನೋದು ನೂರಕ್ಕೆ ನೂರು ಸತ್ಯ.

ಕಾದಂಬರಿಗಾರ್ತಿ ಫೌಝಿಯ ಸಲೀಂ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಹೀಗೆ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ಕಾದಂಬರಿಯ ರೂಪದಲ್ಲಿ ಓದುಗರಿಗೆ ಉಣಬಡಿಸುತ್ತಾ ಇರಿ ಎಂದು ಆಶಯಿಸುತ್ತೇನೆ.

-ಮೋಹನ್ ಕುಮಾರ್ ಟಿ
ಲೇಖಕರು ಹಾಗೂ ಅರ್ಥಶಾಸ್ತ್ರ ಸಹಾಯಕ
ಪ್ರಾಧ್ಯಾಪಕರು

MORE FEATURES

ಸುಲಭವಾಗಿ ಓದಿಸಿಕೊಂಡು ಹೋಗುವ ಕೃತಿ `ರಾಮಾಯಣ ಪರೀಕ್ಷಣಂ' 

31-12-1899 ಬೆಂಗಳೂರು

"ಶ್ರೀರಾಮನು ವಾಲಿಯ ಸಂಹಾರ ಮಾಡಿ ಸುಗ್ರೀವನನ್ನು ರಾಜನನ್ನಾಗಿ ಮಾಡಿದ ಕಥೆ ನಮಗೆಲ್ಲಾ ಗೊತ್ತಿರುವುದೇ. ಇಲ್ಲಿ ವಾಲಿ...

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...