2020ರ ‘ಸ್ವಾಭಿಮಾನ ಪುಸ್ತಕ ಬಹುಮಾನ ಸ್ಪರ್ಧೆ’ಗೆ ಕೃತಿಗಳ ಆಹ್ವಾನ

Date: 24-01-2021

Location: ಬೆಂಗಳೂರು


ಸ್ವಾಭಿಮಾನಿ ಕರ್ನಾಟಕ ವೇದಿಕೆಯು 20ನೇ ವಾರ್ಷಿಕೋತ್ಸವದ ಪ್ರಯುಕ್ತ ‘ಸ್ವಾಭಿಮಾನ ಪುಸ್ತಕ ಬಹುಮಾನ ಸ್ಪರ್ಧೆ’ಯನ್ನು ಹಮ್ಮಿಕೊಂಡಿದ್ದು 2020 ಜನವರಿ 1 ರಿಂದ ಡಿಸೆಂಬರ್ 31ರ ವರೆಗೆ ಪ್ರಕಟಿಸಿದ (ಪ್ರಥಮ ಮುದ್ರಣ) ಸಾಹಿತ್ಯದ ಎಲ್ಲಾ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಲೇಖನ, ಪ್ರವಾಸ ಕಥನ, ಆತ್ಮಕತೆ, ಮಾನವಿಕ ಇತ್ಯಾದಿ) ಕೃತಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದೆ. ಪ್ರಶಸ್ತಿಯು 5000 ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ಆಸಕ್ತ ಲೇಖಕರು ತಮ್ಮ ಪ್ರಕಟಿತ 3 ಕೃತಿಗಳನ್ನು 2021 ಮಾರ್ಚಿ 15ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಪ್ರತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪತ್ರ ವ್ಯವಹಾರ, ದೂರವಾಣಿ ಮಾಡಲು ಅವಕಾಶವಿರುವುದಿಲ್ಲ. ವೇದಿಕೆಯ ತೀರ್ಮಾನವೇ ಅಂತಿಮ ಎಂದು ಪ್ರತಿಷ್ಠಾನದ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ :

ದ್ವಾರನಕುಂಟೆ ಪಾತಣ್ಣ, ಅಧ್ಯಕ್ಷರು:
ಸ್ವಾಭಿಮಾನಿ ಕರ್ನಾಟಕ ವೇದಿಕೆ,
ನಂ.118, ಹೊಂಬೆಳಕು,
5ನೇ ಕ್ರಾಸ್ - ಎಚ್.ಎಂ.ಟಿ.ಲೇಔಟ್,
ನಾಗಸಂದ್ರ ಅಂಚೆ, ಬೆಂಗಳೂರು-5600073
ಮೊಬೈಲ್ ನಂ.9686073887.

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...