ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

Date: 25-04-2024

Location: ಬೆಂಗಳೂರು


ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು 2024 ಏಪ್ರಿಲ್ 25 ಗುರುವಾರದಂದು ನಗರದ ನಯನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮುಖೇನ ಉದ್ಘಾಟಿಸಿ ಮಾತನಾಡಿದ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ, "ಅವಿರತ ಹರೀಶ್ ಅವರ ಗೆಳೆಯರ ಬಳಗ ಮಾಡುತ್ತಿರುವ ಕಾರ್ಯಕ್ರಮ ಈ ಸಂದರ್ಭದಲ್ಲಿ ಬಹಳ ವಿಶೇಷವಾದದ್ದು. ನಾನು ಯಾಕೆ ಹೀಗೆ ಹೇಳ್ತಿದ್ದೇನೆ ಅಂದರೆ, ಇತ್ತೀಚೆಗೆ ಅಭಿನಂದನಾ ಕಾರ್ಯಕ್ರಮಗಳ ಮೌಲ್ಯ ಬಹಳಷ್ಟು ಕುಸಿದಿದೆ. ಕೆಲವರು ತಮ್ಮ ಅಭಿನಂದನಾ ಕಾರ್ಯಕ್ರಮವನ್ನು ತಾವೇ ಆಯೋಜಿಸಿಕೊಳ್ಳುತ್ತಿದ್ದಾರೆ,' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

"ನಿಜವಾಗಿ ಅಭಿನಂದನಾ ಕಾರ್ಯಕ್ರಮಗಳಲ್ಲಿ ನನಗೆ ಸಂತೋಷ ಆಗೋದು ಕಡಿಮೆ. ಆದರೆ ಇಲ್ಲಿ ಅವರ ಸ್ನೇಹಿತರೆಲ್ಲರೂ ತುಂಬಾ ಸಂತೋಷದಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಅಭಿನಂದನಾ ಕಾರ್ಯಕ್ರಮಕ್ಕೆ ಒಂದು ಗೌರವವಿದೆ, ಸಂಭ್ರಮವಿದೆ ಅನ್ನೋದಕ್ಕೆ ಈ ಸಭಾಂಗಣದಲ್ಲಿರುವ ಸಾಂಸ್ಕೃತಿಕ ಕ್ಷೇತ್ರದ ಪ್ರಾತಿನಿಧಿಕ ವ್ಯಕ್ತಿಗಳೇ ಸಾಕ್ಷಿ," ಎಂದು ತಿಳಿಸಿದರು.

"ಅ.ನ.ಕೃ ಅವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾನು ಪ್ರಶಸ್ತಿ ಸ್ವೀಕರಿಸಿದ್ದೆ. ಆಗ ಮೂರು ಜನಕ್ಕೆ ಪ್ರಶಸ್ತಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ನಾನೊಂದು ಮಾತು ಹೇಳಿದ್ದೆ. ಸಾಹಿತಿಗಳಾಗಿದ್ದರೂ ನಾವು ಮೂರು ಜನ ಜಗಳ ಆಡಿಲ್ಲ ಅಂತ. ಸಾಮಾನ್ಯವಾಗಿ ಸಂತಸದ ಕಾರ್ಯಕ್ರಮಗಳು ಅನುಭವವಾಗಿರುತ್ತದೆ. ಈ ಕಾರ್ಯಕ್ರಮ ಒಂದು ಆದರ್ಶವಾಗಿದೆ. ಆದರ್ಶ ಆದಾಗ ಇಂತಹ ಇನ್ನಷ್ಟು ಕಾರ್ಯಕ್ರಮಗಳು ರೂಪುಗೊಳ್ಳುತ್ತದೆ ಎಂದು ಕಾರ್ಯಕ್ರಮ ಆಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು,".

ಕಾರ್ಯಕ್ರಮದಲ್ಲಿ ಜಿ.ಎನ್. ಮೋಹನ್ ಅಭಿನಂದನಾ ನುಡಿಗಳನ್ನಾಡಿದರು. ಹರೀಶ್ ಅವರ ಬರಹಗಳ ಕುರಿತು ರಾಜಶೇಖರ ಮಠಪತಿ ಸಭೆಯಲ್ಲಿ ಮಂಡಿಸಿದರು. ಟಿ.ಎಸ್. ದಕ್ಷಿಣಾಮೂರ್ತಿ, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕರಿಯಪ್ಪ ಎನ್. ಉಪಸ್ಥಿತರಿದ್ದರು. ಶಿವಲಿಂಗ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.

MORE NEWS

ನಯನ ರಾಜು ಅವರ ಕಾರ್ಯವೈಖರಿ ಪಕ್ವತೆಯಿಂದ ಕೂಡಿದೆ; ಬರಗೂರು ರಾಮಚಂದ್ರಪ್ಪ

05-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಾಜ...

ಗಂಭೀರವಾದ ಸಾಹಿತ್ಯ ವಿಮರ್ಶೆಗಳ ಸ್ಥಾನಮಾನ ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದೆ; ಬಸವರಾಜ ಕಲ್ಗುಡಿ

05-05-2024 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕದ ವತಿಯಿಂದ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನ...

ಕನ್ನಡದ ಹೆಸರಾಂತ ಲೇಖಕ, ಅನುವಾದಕ ಬುಳಸಾಗರ ಪಾಂಡುರಂಗಯ್ಯ ನಿಧನ

05-05-2024 ಬೆಂಗಳೂರು

ಕನ್ನಡದ ಹೆಸರಾಂತ ಲೇಖಕ, ಕತೆಗಾರ, ಅನುವಾದಕ ಬುಳಸಾಗರ ಪಾಂಡುರಂಗಯ್ಯ ಅವರು 2024 ಮೇ 04ರಂದು ದಾವಣಗೆರೆಯಲ್ಲಿ ನಿಧನರಾಗಿದ...