ಅಮೆರಿಕ, ಕೆನಡಾ ಲೇಖಕಿಯರ ಕಾಲ್ಪನಿಕ ಕೃತಿಗಳಿಗೆ 1.75 ಕೋಟಿ ರೂ. ಮೊತ್ತದ ಕೆರೊಲ್ ಶೀಲ್ಡ್ಸ್ ಪ್ರಶಸ್ತಿ ಘೋಷಣೆ ‘

Date: 18-01-2021

Location: ಬೆಂಗಳೂರು


ಅಮೆರಿಕ ಹಾಗೂ ಕೆನಡಾ ದೇಶದ ಲೇಖಕಿಯರು ಬರೆಯುವ ಆಂಗ್ಲ ಭಾಷೆಯ ಕಾಲ್ಪನಿಕ ಕಥೆ-ಕಾದಂಬರಿಗಳಿಗೆ ನೀಡಲು ಉದ್ದೇಶಿಸಿರುವ ಹಾಗೂ ಸುಮಾರು 1.75 ಕೋಟಿ ರೂ. ($ 250000) ಮೌಲ್ಯದ ಕೆರೊಲ್ ಶೀಲ್ಡ್ಸ್ ಪ್ರಶಸ್ತಿಯು ಅಸ್ತಿತ್ವಕ್ಕೆ ಬಂದಿದೆ.

‘ಪಿಯೊಟಲ್ ವೆಂಚರ್‍ಸ್ ’ ಕಂಪನಿ, ಮಹಿಳಾ ವಕೀಲರು, ಮಹಾದಾನಿಗಳಿಂದ ಸಂಗ್ರಹಿಸಿದ ಮೊತ್ತವೂ ಸೇರಿದಂತೆ ಬಹುಪಾಲು ಹಣ ನೀಡಿರುವ ಉತ್ತರ ಅಮೆರಿಕೆಯ ಬರಹಗಾರ್ತಿ ಮೆಲಿಂಡಾ ಗೇಟ್ಸ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕೆಲ ದಿನಗಳ (2021, ಜ. 15) ಹಿಂದೆಯಷ್ಟೇ ಪ್ರಶಸ್ತಿಯ ಘೋಷಣೆಯಾಗಿದೆ.

‘ಕೊರೊನಾದಂತಹ ಕರಾಳ ಸನ್ನಿವೇಶದಲ್ಲಿ ವಿಶೇಷವಾಗಿ, ಪ್ರತಿಭೆಯಿದ್ದೂ ಅವಕಾಶಗಳಿಂದ ಛಿದ್ರಗೊಂಡಂತಿರುವ ಲೇಖಕಿಯರಿಗೆ ಭಾರೀ ಮೊತ್ತದ ಪ್ರಶಸ್ತಿಯನ್ನು ಮೀಸಲಿರಿಸಿದ್ದು, ಪ್ರಶಸ್ತಿ ಸ್ಥಾಪನೆಯ ಸೂತ್ರಧಾರಿ ಮೆಲಿಂಡಾ ಗೇಟ್ಸ್ ಅವರಿಗೆ ಅಭಿನಂದನೆಗಳು’ ಎಂದು ಕೆರೊಲ್ ಶೀಲ್ಡ್ಸ್ ಪ್ರಶಸ್ತಿಸ್ಥಾಪನಾ ಸಂಸ್ಥೆಯ ಸಹ-ಸಂಸ್ಥಾಪಕರಾದ ಸುಸಾನ ಸ್ವಾನ್ ಹಾಗೂ ಜನೀಸ್ ಜಾವರ್‍ ಬೈ ಪ್ರತಿಕ್ರಿಯಿಸಿದ್ದಾರೆ

ಕೆರೊಲ್ ಶೀಲ್ಡ್ಸ್ ಸಹ ಬರಹಗಾರ್ತಿಯಾಗಿದ್ದು, ಇವರ ‘ದಿ. ಸ್ಟೋನ್ ಡೈರೀಸ್’ ಎಂಬ ಕಾಲ್ಪನಿಕ ಕೃತಿಯು ಗವರ್ನರ್ ಜನರಲ್ಸ್ ಅವಾರ್ಡ್ ಹಾಗೂ ಪಿಲಿಟ್ಜರ್ ಪ್ರಶಸ್ತಿ ಪುರಸ್ಕೃತರು. ಪ್ರತಿಷ್ಠಿತ ಬೂಕರ್‍ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿಯೂ ಇವರ ಹೆಸರಿದೆ. ಲೇಖಕಿಯರಿಗೆ ನೀಡಲಾಗುವ ಇತರೆ ಪ್ರಶಸ್ತಿಗಳ ಮೊತ್ತಕ್ಕಿಂತ ಕೆರೊಲ್ ಶೀಲ್ಡ್ಸ್ ಪ್ರಶಸ್ತಿಯ ಮೊತ್ತಕ್ಕಿಂತ ಅಧಿಕವಾಗಿದೆ. ಒಟ್ಟು $ 250000 ಗಳ ಪೈಕಿ, ಪ್ರಶಸ್ತಿಗೆ ಆಯ್ಕೆಯಾದ ಮಹಿಳೆಗೆ $ 150,000 (ಅಂದಾಜು 1.05 ಕೋಟಿ ರೂ) ಹಾಗೂ ಪಟ್ಟಿಯಲ್ಲಿ ಸೇರಬಹುದಾದ ಇತರೆ ನಾಲ್ವರಲ್ಲಿ $ 12,500 ( ಅಂದಾಜು 8.75 ಲಕ್ಷ ರೂ.) ಸಮಾನವಾಗಿ ಹಂಚಲಾಗುವುದು. 2023 ರಲ್ಲಿ ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.

‘ಲೇಖಕಿಯರೂ ಸಹ ಉತ್ತಮ ಗುಣಮಟ್ಟದ ಪ್ರಬುದ್ಧ ಸಾಹಿತ್ಯಕ ಕೃತಿಗಳನ್ನು ರಚಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿರುವ ಪ್ರಶಸ್ತಿ ಸ್ಥಾಪಕಿ ಮೆಲಿಂಡಾ ಗೇಟ್ಸ್, ಈ ಲೇಖಕಿಯರು ತಮ್ಮ ಸಾಹಿತ್ಯ ಕೃಷಿಗೆ ಅತ್ಯಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ. ಅವರು ಪ್ರಶಸ್ತಿಗಳಿಂದಲೂ ವಂಚಿತರಾಗುತ್ತಿದ್ದಾರೆ. ಆದ್ದರಿಂದ, ಲೇಖಕಿಯರ ಸಾಹಿತ್ಯ ಪ್ರೋತ್ಸಾಹಿಸಲು ಮತ್ತು ಮಹಿಳೆಯ ಘನತೆಯನ್ನು ಎತ್ತಿ ಹಿಡಿಯಲು ‘ಕೆರೊಲ್ ಶೀಲ್ಡ್ಸ್ ಪ್ರಶಸ್ತಿ’ ಸ್ಥಾಪಿಸಿದೆ ಎಂದು ಹೇಳಿದ್ದಾರೆ.

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...