ಅರಸು ಬಗ್ಗೆ ಆಗಿನ ಪತ್ರಿಕೆಗಳು ನೆಗಟಿವ್ ಬರೆದದ್ದೇ ಹೆಚ್ಚು: ಎಸ್. ಜಿ. ಸಿದ್ದರಾಮಯ್ಯ

Date: 27-03-2024

Location: ಬೆಂಗಳೂರು


ಬೆಂಗಳೂರು: ತುಂಬಾ ಕುತೂಹಲದಿಂದ ಈ ಕೃತಿಯನ್ನ ನಾನು ಓದಿದೆ. ಯಾಕೆಂದ್ರೆ ನಾವು ಅರಸು ರಾಜಕಾರಣ ಕಂಡವರು ಮತ್ತು ಫಲಾನುಭವಿಗಳು. ಆಗಿನ ಕಾಲದ ಮಾಧ್ಯಮಗಳು ಹೇಗೆ ಪ್ರತಿಕ್ರಿಯಿಸಿತು ಅನ್ನೋದನ್ನ ಅನುಭವಿಸಿದವರು. ಹೀಗಿರುವಾಗ ಅರಸು ಅವರ ಬಗ್ಗೆ ಈ ವರೆಗೆ ಬಂದ ಕೃತಿಗಳಿಗಿಂತ ಇದು ಹೇಗೆ ಭಿನ್ನವಾಗಿರುತ್ತೆ ಅಂತʼ ಎಂದು ಎಸ್‌. ಜಿ. ಸಿದ್ಧರಾಮಯ್ಯ ಹೇಳಿದರು.

ಅವರು 2024 ಮಾರ್ಚ್ 27ರಂದು ಹಿಂದುಳಿದ ವರ್ಗಗಳ ಕೋಶ ಆಶ್ರಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರೋ. ವೆಂಕಟಗಿರಿ ಗೌಡ ಸ್ಮಾರಕ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ, ಡಿ. ಕೆ. ಚಿತ್ತಯ್ಯ ಪೂಜಾರ್‌ ಅವರ 'ಡಿ. ದೇವರಾಜ ಅರಸು-ಯುವ ಸ್ಪಂದನೆ' ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ತಮ್ಮ ಮೊದಲ ಓದಿನ ಅಂಶಗಳನ್ನು ಹಂಚಿಕೊಂಡ ಎಸ್‌. ಜಿ. ಸಿದ್ದರಾಮಯ್ಯ ಅವರು ʼಇವತ್ತು ಬಹಳ ಸಂತೋಷವಾಗುತ್ತೆ. ಯಾಕಂದ್ರೆ ಅರಸು ಅವರ ಸಾಧನೆಯ ಕುರಿತಂತೆ, ಅರಸು ಕಾಲಾ ನಂತರದ ಯುವ ಪೀಳಿಗೆ ಹೇಗೆ ಪ್ರತಿ ಸ್ಪಂದಿಸುತ್ತೆ ಅನ್ನೋದರಿಂದ. ಅರಸು ಬಗ್ಗೆ ಪುಸ್ತಕಗಳನ್ನು ಬಿಟ್ರೆ, ಅರಸು ಕಾಲದ ಪತ್ರಿಕೆಗಳನ್ನ ನೋಡಿದ್ರೆ ಹೆಚ್ಚು ನೆಗೆಟಿವೇ ಇರುವಂತಹದ್ದು, ಪಾಸಿಟೀವ್‌ ಇಲ್ಲ. ಕಾರಣ ಇಷ್ಟೇನೇ, ಎಲ್ಲಾ ಕಾಲದಲ್ಲಿಯೂ ಈ ದೇಶದೊಳಗೆ ಸತ್ಯದ ಪರ ನಿಂತಂತ ಯಾವುದೇ ರಾಜಕಾರಣಿ ಇರಲಿ, ಮತ್ಯಾರೇ ಇರಲಿ ಅವರರಿಗೆ ಸಿಕ್ಕ ಪ್ರತಿಕ್ರಿಯೆ ಎಂತಹದ್ದು ಅನ್ನೋದಕ್ಕೆ ಬಹಳ ದೊಡ್ಡ ಉದಾಹರಣೆ ಅರಸು. ಇಬ್ಬರನ್ನು ಬಿಟ್ಟರೆ ಅರಸು ಅವರನ್ನ ಕುರಿತು ಹೆಚ್ಚಿನದಾಗಿ ನೆಗೆಟಿವ್‌ ಮಾತನಾಡಿದವರೇ ಕಾಣ್ತಾರೆʼ ಎಂದರು.

ʼನಾವು ಚರಿತ್ರೆಯನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದಾಗ ಎಂತಹ ಅನರ್ಥಗಳನ್ನು ಮಾಡ್ತೇವೆ. ಆ ನಂತರದಲ್ಲಿ ಪರಿತಪಿಸಿ ಕೋಟೆ ಹಾಳಾದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಎಂಬ ದುರ್ಗತಿ ಯಾಕೆ ಬರುತ್ತೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಕೃತಿ ಬಹಳ ಮುಖ್ಯ ಅನ್ಸುತ್ತೆʼ ಎಂದು ಎಸ್‌. ಜಿ. ಸಿದ್ದರಾಮಯ್ಯ ತಿಳಿಸಿದರು.

ಬಿ. ಕೆ. ರವಿ ಕಾರ್ಯಕ್ರಮದವನ್ನು ಉದ್ಘಾಟಿಸಿ ಮಾತನಾಡಿದರು. ಎಸ್‌. ಎಂ. ಜಯಶಂಕರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೆಲ್ಲುಕುಂಟೆ ವೆಂಕಟೇಶಯ್ಯ, ಶೇಖ್‌ ಲತೀಫ್‌ ಕೃತಿ ಕುರಿತು ಮಾತನಾಡಿದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...