ವಾಸ್ತವತೆ ತಿಳಿಸುವ ರಂಗಭೂಮಿ

Date: 16-10-2019

Location: ಕಡೂರು


ದೊರೇಶ್ ಬಿಳಿಕೆರೆ ಅವರ ಸಂಪಾದಕತ್ವದ ’ನಿರ್ವಚನ’ ಪುಸ್ತಕವನ್ನು ಕಡೂರಿನಲ್ಲಿ ರಂಗಕರ್ಮಿ ಡಾ.ಬೇಲೂರು ರಘುನಂದನ್ ಅವರು ಲೋಕಾರ್ಪಣೆ ಮಾಡಿದರು. “'ಹಲವು ಮಜಲುಗಳ ಸಂಗಮವೇ ರಂಗಭೂಮಿ, ಕಾವ್ಯ ಮತ್ತು ನಾಟಕ ಗಳಲ್ಲಿ ಜೀವನದ ವಾಸ್ತವಿಕತೆ ಅಡಗಿರುತ್ತದೆ. ಆ ವಾಸ್ತವವನ್ನು ನಮ್ಮೆದುರು ತೆರೆದಿಡುವ ಕಾರ್ಯವನ್ನು ರಂಗಭೂಮಿ ನಿರಂತರವಾಗಿ ಮಾಡುತ್ತಿದೆ. ಸಮಕಾಲೀನ ಸಂವೇದನೆಯ ದೃಷ್ಟಿಯಿಂದ ಕಾವ್ಯ ನಾಟಕಗಳನ್ನು ನೋಡಬೇಕು. ವಿಮರ್ಶಾ ದೃಷ್ಟಿಯಿಂದ ರಂಗಭೂಮಿ ಮತ್ತು ಸಾಹಿತ್ಯವನ್ನು ಅಭ್ಯಸಿಸಬೇಕು. ರಂಗಭೂಮಿ ನಮ್ಮಲ್ಲಿನ ಅಭದ್ರತೆಗಳನ್ನು ಅವಲೋಕಿಸಿಕೊಂಡು ಬದುಕನ್ನು ಭದ್ರಗೊಳಿಸುವ ಮತ್ತು ಸಾಹಿತ್ಯವನ್ನು ಜೀವಂತವಿರಿಸುವ ಸಾಧನವಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಂಗಕಲೆಯ ಮೂಲಕ ಉಳಿಸಬಹುದು” ಎಂದು ಬೇಲೂರು ರಘುನಂದನ್‌ ತಿಳಿಸಿದರು. ನಂತರ ’ಕನ್ನಡ ಸಾಹಿತ್ಯಕ ನಡೆ ಅಸಹಿಷ್ಣುತೆ ಕಡೆಗೆ ಹೊರಳುತ್ತಿರುವುದು ಬೇಸರದ ಮತ್ತು ಆತಂಕದ ಸಂಗತಿ’ ಎಂದು ನೇರವಾಗಿ ತಮ್ಮ ಮಾತುಗಳಲ್ಲಿ ಬೇಸರ ವ್ಯಕ್ತಪಡಿಸಿದರು. ಎಚ್. ಎಬ್ ಮಲ್ಲೇಶ್ ಗೌಡ, ದೊರೇಶ್, ಶ್ರೀಧರಬಾಬು, ವೆಂಕಟನರಸಯ್ಯು, ಸೋಮಶೇಖರ್, ಟಿ. ಆರ್‌. ಲಕ್ಕಪ್ಪ ಮತ್ತಿತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...